ವಿಜಯಪುರ: ಸನ್ ೨೦೨೩ರ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸಮಾಜ ಸೇವೆಯಲ್ಲಿ ಗಣನೀಯ ಸೇವೆಯನ್ನು ಪರಿಗಣಿಸಿ ಜಲನಗರದಲ್ಲಿ ಎಸ್.ಡಿ. ಕುಮಾನಿ ಅವರಿಗೆ ವಾರ್ಡ ನಂ.೨೨ ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಸನ್ಮಾನಿಸಿದರು.
ಕುಮಾನಿ ಅವರು ವಿಜಯಪುರಕ್ಕೆ ಕಾರ್ಮಿಕರಾಗಿ ಬಂದು ಹಮಾಲಿ ಮಾಡುವ ಜನರಿಗೆ ಸಾವಿರಾರು ಮನೆಗಳನ್ನು ಮಂಜೂರು ಜನಪ್ರೀಯ ಸಮಾಜ ಸೇವಕರಾಗಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಈ ಬಾರಿ ಜಿಲ್ಲಾಡಳಿತ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಹರ್ಷವನ್ನುಂಟು ಮಾಡಿದೆ ಎಂದರು.
ಕಾರ್ಮಿಕ ಮುಖಂಡ ಅಶೋಕ ಜುಗತಿ ಮಾತನಾಡಿ, ಕುಮಾನಿ ಅವರು ಸದ್ಯ ೮೨ ವರ್ಷದ ತಮ್ಮ ಇಳಿ ವಯಸ್ಸಿನಲ್ಲಿ ಯುವಕರಿಗೆ ಓಡಾಡಿ ಪ್ರಮಾಣಿಕವಾಗಿ ಕೆಲಸ ಮಾಡುತ್ತಾರೆ. ಇವರು ಜಲನಗರದಲ್ಲಿ ನಿರ್ಮಿಸಿರುವ ನೀಲೂರು ನಿಂಬೆಕ್ಕ ಮಂಗಲ ಕಾರ್ಯಾಲಯದಲ್ಲಿ ಮದುವೆ ಮಾಡಲು ಬರುವ ಕಡುಬಡವ ಜನರಿಗೆ ಉಚಿತವಾಗಿ ಮಂಗಲ ಕಾರ್ಯಾಲಯವನ್ನು ನೀಡುತ್ತಾ ಜನಪ್ರೀಯ ಸೇವೆಯನ್ನು ಮುಂದುವರೆಸಿಕೊಂಡು ಬಂದಿರುವ ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಾನಾಗೌಡ ಬಿರಾದಾರ, ಮಲ್ಲಿಕಾರ್ಜುನ ವಾರನಾಸಿ, ಸಂತೋಷ ತೇಲಸಂಗ, ರಮೇಶ ಮಿರ್ಜಿ, ಪ್ರಕಾಶ ಕಟ್ಟಿಮನಿ, ಸಿದ್ದು ಕುಸೂರ, ರೇವಪ್ಪ ಪಾಟೀಲ, ಗೋಪಿ ಸೂರ್ಯವಂಶಿ, ಗಿರೀಶ ಗಚ್ಚಿನಕಟ್ಟಿ ಇನ್ನಿತರರು ಉಪಸ್ಥಿತರಿದ್ದರು.
Related Posts
Add A Comment