ಕಲಕೇರಿ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವಲಯ ಸಮಿತಿ ಕಲಕೇರಿ ಇದರ ಅಡಿಯಲ್ಲಿ ಕಾಯಕ ನಿಧಿ ವಿವಿದೋದ್ದೇಶಗಳ ಸ್ವಸಹಾಯ ಸಂಘದ ವತಿಯಿಂದ ಗ್ರಾಮದ ಶ್ರೀ ಗುರು ಮರುಳಾರಾಧ್ಯ ಹಿರೇಮಠದಲ್ಲಿ ಕಲಕೇರಿಯ ಟೈಲರ್ ಬಂಧುಗಳು ಕೂಡಿಕೊಂಡು ಕರ್ನಾಟಕ ರಾಜ್ಯೋತ್ಸವವನ್ನು ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು ಸಂಘದ ಅಧ್ಯಕ್ಷರಾದ ಶಾಂತಯ್ಯ ವೀರಭದ್ರಯ್ಯ ಹಿರೇಮಠ, ಉಪಾಧ್ಯಕ್ಷರಾದ ಮನೋಹರ ಪತ್ತಾರ ಕಾರ್ಯದರ್ಶಿಗಳಾದ ಸುಜಾತ ಎಸ್ ಅವಟಿ ಸಂಘದ ಸದಸ್ಯರುಗಳಾದ ವಿಮಲಾ ಹಿರೇಮಠ, ಸರೋಜಿನಿ ಹಿರೇಮಠ, ರೇಖಾ ಹಿರೇಮಠ, ಶೋಭಾ ಗದ್ದಿಗಿಮಠ, ಪೂಜಾ ಬಡಿಗೇರ, ವಿಜಯಲಕ್ಷ್ಮಿ ಬಡಿಗೇರ, ಸಾವಿತ್ರಿ ಬಡಿಗೇರ, ಕಾಶಿಬಾಯಿ ಬಡಿಗೇರ, ಜಗದೇವಿ ಗಣಾಚಾರಿ, ಶಾಂತಮ್ಮ ಗಣಾಚಾರಿ ಸೇರಿದಂತೆ ಇತರರು ಇದ್ದರು.