ಹೂವಿನ ಹಿಪ್ಪರಗಿ: ನೀರು ಜೀವ ಜಲವಾಗಿದ್ದು, ಅದನ್ನು ಗ್ರಾಮಸ್ಥರು ನಿಯಮಿತವಾಗಿ ಬಳಕೆ ಮಾಡಬೇಕು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೀರು ಒದಗಿಸುವ ಉದ್ದೇಶದಿಂದ ಮನೆ ಮನೆಗೂ ಗಂಗೆ ಯೋಜನೆಯಡಿ ಕ್ಷೇತ್ರದ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಹೇಳಿದರು.
ಬಸವನ ಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದ ಪಂಚಾಯತಿ ಆವರಣದಲ್ಲಿ ನಡೆದ ಜಿಲ್ಲಾ ಪಂಚಾಯತಿ ವಿಜಯಪುರ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿಯಲ್ಲಿ ೨೦೨೨-೨೩ನೇ ಸಾಲಿನ ಜಲಜೀವನ ಮಿಷನ್ ಯೋಜನೆಯಲ್ಲಿ ಸುಮಾರು ೩ ಕೋಟಿ ೫೬ ಲಕ್ಷ ರೂಗಳ ವೆಚ್ಚದಲ್ಲಿ ಮನೆ ಮನೆ ನಳ ಸಂಪರ್ಕ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೀರು ಒದಗಿಸುವ ಉದ್ದೇಶದಿಂದ ಮನೆ ಮನೆಗೂ ಗಂಗೆ ಯೋಜನೆಯಡಿ ಕ್ಷೇತ್ರದ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಅನಿಲಗೌಡ ಪಾಟೀಲ ಮಾತನಾಡಿ, ಗ್ರಾಮ ಪಂಚಾಯತಿಗೆ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ನೀಡಿದ್ದಾರೆ. ಅದು ಹೇಗೆ ನೀಡಿದ್ದಾರೆ ಗೊತ್ತಿಲ್ಲ, ಪಂಚಾಯತಿ ಅವರು ದುಡ್ಡು ಕೊಟ್ಟು ಪ್ರಶಸ್ತಿ ತಂದರೆ ಅದು ಸಲ್ಲಲ್ಲ, ಗ್ರಾಮದಲ್ಲಿ ಅಭಿವೃದ್ದಿ ಮಾಡಿ ಪ್ರಶಸ್ತಿಯನ್ನು ಪಡೆಯುಂತಾಗಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಪಿಡಿಓ ಬಸವರಾಜರ ಬಡಿಗೇರ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶಕುಂತಲಾ ಲಗಳಿ, ಉಪಾಧ್ಯಕ್ಷ ಮುತ್ತಪ್ಪ ಇಂಗಳಗಿ, ಪಿ.ಕೆ.ಪಿ.ಎಸ್ ಅಧ್ಯಕ್ಷ ಸಚಿನಗೌಡ ಪಾಟೀಲ, ಗುರುನಗೌಡ ಪಾಟೀಲ, ಸಂಗನಗೌಡ ಪಾಟೀಲ, ಆನಂದ ಸಜ್ಜನ, ಬಸಣ್ಣ ಬಾಗೇವಾಡಿ, ರಫೀಕ ಬಾವೂರ, ಎಸ್. ಎಸ್. ಪಾಟೀಲ, ಗುಳಪ್ಪ ಇಂಗಳಗಿ, ಎಸ್. ವ್ಹಿ. ಪಾಟೀಲ, ಮಹ್ಮದಹನಿಪ್ ಬಿಳವಾರ, ಡಾ|| ಕಾಶೀಮಸಾಬ ಢವಳಗಿ, ವೈಧ್ಯಾಧಿಕಾರಿ ಶ್ರೀಮತಿ ಅಕ್ಷತಾ ಗುಂದಗಿ, ಗ್ರಾಮ ಆಡಳಿತಾಧಿಕಾರಿ ಶ್ರೀಮತಿ ವಿದ್ಯಾಶ್ರೀ ಅವಟಿ, ಗ್ರಾಮೀಣು ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿ ಶ್ರೀಶೈಲಗೌಡ ನರಸನಗೌಡರ, ನರೆಗಾ ಅಧಿಕಾರಿ ಆನಂದ ದೇಸಾಯಿ, ಈರನಗೌಡ ಪಾಟೀಲ, ಶರಣು ಡೋಣೂರ, ಬಸವರಾಜ ಗುಡ್ಡೋಡಗಿ, ಮಕ್ಬೂಲ ಆಲ್ದಾಳ, ಮೂಸಾ ಖಾಚಾಪುರ, ಬಂದೇನವಾಜ ಕತ್ನಳ್ಳಿ, ಪರಸು ಲಗಳಿ, ಲಾಲಮಹ್ಮದ ಮುಲ್ಲಾ, ಪಿಡಿಓ ಬಿ. ಎಸ್. ಬಡಿಗೇರ ಪಂಚಾಯತಿ ಸಿಬ್ಬಂದಿ ಹಾಗೂ ಸದಸ್ಯರು ಇದ್ದರು.
Related Posts
Add A Comment