Author: editor.udayarashmi@gmail.com

ಚಡಚಣ : ದಾಖಲೆ ಇಲ್ಲದ 480 ಗ್ರಾಂ ಚಿನ್ನ ಹಾಗೂ ರೂ.6 ಲಕ್ಷ ನಗದು ಹಣ ವಶಪಡಿಸಿಕೊಂಡ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.ಪಟ್ಟಣದ ದೇವರನಿಂಬರಗಿ ಕ್ರಾಸ್ ಬಳಿ ಮಾರುತಿ ವ್ಯಾನದಲ್ಲಿ ಅಕ್ರಮವಾಗಿ ಸಾಗಿಸುತಿದ್ದ 480ಗ್ರಾಮ್ ಚಿನ್ನ ಹಾಗೂ ರೂ.6 ಲಕ್ಷ ನಗದು ಹಣ ವಶ ಪಡಿಸಿಕೊಂಡ ಘಟನೆ ನಡೆದಿದೆ.ನಿಖರ ಮಾಹಿತಿ ಮೇರೆಗೆ ಸಿಪಿಐ ಸಾಹೇಬಗೌಡ ಪಾಟೀಲ ಹಾಗೂ ಪಿಎಸೈ ಸಂಜಯ ತಿಪ್ಪರೆಡ್ಡಿ ಹಾಗೂ ಸಿಬ್ಬಂದಿ ಮಾರುತಿ ವ್ಯಾನ್ ದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 480 ಗ್ರಾಮ ಚಿನ್ನ ಹಾಗೂ 6ಲಕ್ಷ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ಸಾಹೇಬಗೌಡ ಪಾಟೀಲ ತಿಳಿಸಿದ್ದಾರೆ.ಈ ಪ್ರಕರಣ ಚಡಚಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More

ಅಲೆಯಲಿ ಕುಣಿಯುವದೋಣಿಯ ತೆರದಲಿಬಾಳಿನ ಜಂಜಡ ಮರೆಯುತಲಿಮರಳಿನ ಹಾಸಲಿನಡೆಯುವ ಜೊತೆಯಲಿಕೈಯೊಳು ಕೈಯನು ಬೆಸೆಯುತಲಿ ಹೆದ್ದೆರೆ ಬರಲೀಗಾಳಿಯು ಬೀಸಲಿಬಿಡಿಸಲು ಆಗದು ಈ ಬಂಧನಂಬಿಕೆಯೆನ್ನುವಪಾಯದಿ ಕುಳಿತಿದೆಮಿಡಿವ ಮನಗಳ ಸಂಬಂಧ ದೂರದಿಗಂತವನಿರುಕಿಸಿ ನೋಡಲುಕಾಣದು ಎಲ್ಲೆಯು ಎಂದೆಂದೂನಿನ್ನಯ ಹೆಗಲಲಿಭಾವವ ಅರುಹಲುಭರವಸೆ ಮುರಿಯದು ಮುಂದೆಂದೂ

Read More

ನಮ್ಮ ಸುತ್ತ ಮುತ್ತಲೂ ಅನೇಕ ರೀತಿಯ ವ್ಯಕ್ತಿತ್ವದವರನ್ನು ಕಾಣುತ್ತೇವೆ.ತನ್ನ ಮೂಗಿನ ನೇರಕ್ಕೆ ಮಾತನಾಡುವವರು ಕೆಲವರಾದರೆ,ಯಾವಾಗಲೂ ತನ್ನ ಬಗ್ಗೆಯೇ ಕೊಚ್ಚಿಕೊಳ್ಳುವವರು ಹಲವರು.ಇತರರ ತಪ್ಪುಗಳನ್ನು ಹುಡುಕಿ ಗೇಲಿ ಮಾಡುವವರು ಒಂದೆಡೆಯಾದರೆ,ಮಾತಿನಲ್ಲಿ ವ್ಯಂಗ್ಯವನ್ನು ಹಾಲು ಜೇನಿನಂತೆ ಬೆರೆಸಿ ಮಾತನಾಡುವವರು ಮತ್ತೊಂದೆಡೆ ಆಡಿದ ಮಾತಿಗೆ ಸಿಡಿಲಿನಂತೆ ಬಡಿವವರು,ಮಾತಿಗೆ ಪ್ರತಿ ಮಾತನ್ನೆ ಆಡದವರು,ಸದಾ ತನ್ನ ನೋವನ್ನೆ ತೋಡಿಕೊಳ್ಳುವವರು,ಒಂದೇ ಒಂದು ಮಾತಿಗೆ ಜೀವನ ಪರ್ಯಂತ ನಿಷ್ಠುರ ತನ ತೋರುವವರು,ಕಾರಣವಿಲ್ಲದೆ ಮಾತು ಬಿಡುವವರು, ಬೆಣ್ಣೆಯಿಂದ ಕೂದಲು ತೆಗೆದಂತೆ ನಯವಾಗಿ ಮಾತನಾಡುವವರು,ತನ್ನ ಎದುರು ಬಣ್ಣ ಬಣ್ಣವಾಗಿ ಮಾತನಾಡಿ ಹಿಂಬದಿಯಿಂದ ಚೂರಿ ಹಾಕುವವರು,ಎಂದಿಗೂ ಯಾರ ಮುಂದೆಯೂ ತಲೆ ಬಾಗದವರು,ಎಲ್ಲವನ್ನು ಸಹಿಸಿಕೊಂಡು ಮೌನವಾಗಿ ದುಃಖಿಸುವವರು, ತನ್ನದೇ ಸರಿ ಎನ್ನುವ ಮೊಂಡು ಸ್ವಭಾವದವರು, ತಾನು ಹೇಳಿದ್ದೇ ನಡೆಯಬೇಕೆಂಬ ಒರಟು ನಡೆಯವರು,ಯಶಸ್ಸಿನ ಎಲ್ಲಾ ಮೆಟ್ಟಿಲನ್ನು ಏರಿ ಮೊದಲ ಮೆಟ್ಟಿಲನ್ನು ಮರೆವವರು,ಯಾವಾಗಲೂ ತನ್ನವರ ಒಳಿತಿಗಾಗಿಯೆ ಚಿಂತಿಸುವವರು,ತನ್ನ ಗುಟ್ಟನ್ನು ಎಂದಿಗೂ ಬಿಟ್ಟು ಕೊಡದವರು,ಯಾವಾಗಲೂ ತನ್ನ ಸಂಗಾತಿಯನ್ನು ದೂರುವವರು,ಎಂದಿಗೂ ತನ್ನ ಸಂಗಾತಿಯನ್ನು ಇತರರ ಎದುರಿಗೆ ಕುಗ್ಗಿಸದವರು,ಸದಾ ಕೋಪಿಷ್ಟರು,ಯಾವಾಗಲೂ ನಗುಮೊಗದಿಂದ ಇರುವವರು,ಯಾರಿಗೂ ಗೌರವ ಕೊಡದವರು,ಅಧಿಕಾರ,ಹಣದ ಮದದಿಂದ…

Read More

ನಗು ಎಂಬುದು ಎಂತಹ ಕುರೂಪಿಯನ್ನೂ ಸಹ ಸುಂದರವಾಗಿ ಪ್ರಸ್ತುತ ಪಡಿಸಬಲ್ಲದು. ನಗೆಯಲ್ಲಿ ನೂರಾರು ಬಗೆ. ಮುಗ್ಧ ನಗೆ, ಕಿರು ನಗೆ, ಹುಸಿ ನಗೆ, ಶಿಷ್ಟಾಚಾರದ ನಗೆ. ಔಪಚಾರಿಕ ನಗೆ, ಪೆದ್ದು ನಗೆ, ವ್ಯಂಗ್ಯದ ನಗೆ ಹೀಗೆ ಹತ್ತಾರು ಬಗೆಯ ನಗುಗಳಿದ್ದರೂ ಪುಟ್ಟ ಮಗುವಿನ ಕಲ್ಮಶವಿಲ್ಲದ, ನಿರ್ಮಲ ಹೃದಯದ ಕಿರು ನಗೆ ಎಲ್ಲರನ್ನೂ ಸೆಳೆಯುತ್ತದೆ. ನಗುವಿಗಾಗಿ ಹಣ ತೆರಬೇಕಾದ ಸರತಿಯಲ್ಲಿ ಗಂಟೆಗಟ್ಟಲೆ ಕಾದು ಮಿತಿಯಲ್ಲಿ ಕಾರ್ಡ್ ತೋರಿಸಿ ಪಡೆದು ಸ್ವಲ್ಪ ಸ್ವಲ್ಪವೇ ಖರ್ಚು ಮಾಡುವ, ಅಥವಾ ಸಾಲ ಪಡೆಯುವ ಅಗತ್ಯವಿಲ್ಲ. ಮುಕ್ತವಾಗಿ ಭಗವಂತ ಎಲ್ಲರಿಗೂ ಈ ಶಕ್ತಿ ದಯಪಾಲಿಸಿ ” ನೀನೊಂದು ಸಲ ನಕ್ಕು ಪರರನು ನಗಿಸು” ಎಂದಿದ್ದಾನೆ. ಹೃದಯದಲ್ಲಿ ಹುಟ್ಟಿ ಕೆನ್ನೆ ಕಣ್ಣುಗಳಲಿ ಬೆಳಗಿ ತುಟಿಗಳಲ್ಲಿ ಅರಳುವ ನಗು ಶ್ರೇಷ್ಠ. ಬಹಳಷ್ಟು ಬಾರಿ ನಗುವ ಮುಕ್ತ ಅವಕಾಶವಿದ್ದರೂ, ಶ್ರೀಮದ್ ಗಾಂಭಿರ್ಯದಿಂದ ತಾವೂ ಇದ್ದು ಪರರನ್ನೂ ನಗಲು ಸಂಕೋಚ ಪಡುವಂತೆ ಮಾಡುವವರೂ ನಮ್ಮ ಮಧ್ಯೆ ಇರುತ್ತಾರೆ. ನಗು ಸ್ನಾಯುಗಳನ್ನು ಸಡಿಲಗೊಳಿಸಿ ರಕ್ತ…

Read More

ಅಂತರಂಗದಾ ಮೃದಂಗ ನಾದಮನದ ರಾಗದಿ ಬೆಸೆಯಿತು |ಭಾವ ತಾಳಗಳ ಕಾವ್ಯ ಹೊಮ್ಮಿಒಲವ ಗಾನಕೆ ನಾಂದಿಯಾಯ್ತು || ಮಧುರ ಪ್ರೀತಿ ಗಾನದೊನಲುಸವಿ ಸುಧೆಯನು ಸ್ಪುರಿಸಿತು |ಉಲಿವ ಇಂಪಿನ ಪ್ರತಿ ಸ್ವರಕೂಪ್ರೀತಿಯೊಲುಮೆ ಶೃತಿಯಾಯ್ತು || ಬೆರೆತ ಹೃದಯ ಬಿಗಿದ ಬಂಧಬಿಡಿಸಲಾರದಂತೆ ಬೆರೆಯಿತು |ಯಾವ ಜನ್ಮದ ಮೈತ್ರಿ ಇಂದುಜೀವದುಸಿರನು ಬೆರೆಸಿತು || ಚೈತ್ರ ಬನದಿ ಕೋಗಿಲೆಯ ಉಲಿಇಂಪು ಇಂಪಾಗಿ ಹೊಮ್ಮಿತು |ನಿನ್ನ ಇರುವಲಿ ಹೊಸೆದ ಹಾಡಲಿಪ್ರೇಮ ಭಾಷ್ಯವ ಬರೆಸಿತು || ಮಾಮರವು ಚಿಗುರಿ ಕಂಪ ಬೀರಿಪರಿಮಳವ ಸುತ್ತಲೂ ಹರಡಿತು |ಬದುಕ ಪಯಣದಿ ಜೊತೆಯಾಗಿಸಾಗುವ ಬಯಕೆಯ ತಂದಿತು || ಕಡಲ‌ ಮೊರೆತದ ಸದ್ದು ಕೇಳುತಬಾನು ಬೆರೆಯಲು ಬಯಸಿತು |ಮುಗಿಲ ಮರೆಯ ಚಂದ್ರ ಬಿಂಬಬೆಳದಿಂಗಳ ಸುರಿಸುತ ನಕ್ಕಿತು || ಕನಸುಗಳ ಹಾದಿಯಲಿ ಹೃದಯಹೊಸ ಕಲ್ಪನೆಗಳನು ಚಿತ್ರಿಸಿತು |ಒಲವಿನೊಡಲ ಹರುಷದೊನಲುನಿನ್ನೊಲುಮೆಗೆ ಸಾಕ್ಷಿಯಾಯ್ತು ||

Read More

ರೂ.25 ಕೋಟಿ ಅನುದಾನದ ಕಾಮಗಾರಿಗಳಿಗೆ ಭೂಮಿಪೂಜೆ | ಡಾ.ಅಂಬೇಡ್ಕರ್ ಸೇರಿ ಹಲವು ವೃತ್ತಗಳ ಉದ್ಘಾಟನೆ ವಿಜಯಪುರ: ನಗರದಲ್ಲಿ ಬುಧವಾರ ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಅವರು, ರೂ.25 ಕೋಟಿ ಅನುದಾನದಲ್ಲಿ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ನೂತನವಾಗಿ ನಿರ್ಮಿಸಲಾದ ವೃತ್ತಗಳನ್ನು ಉದ್ಘಾಟಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಸ್ವಾತಂತ್ರ್ಯ ಹೋರಾಟಗಾರರಾದ ಮಹಾರಾಣಾ ಪ್ರತಾಪ್‌ ಸಿಂಗ್, ವೀರ ಸಾವರ್ಕರ್, ಸರ್ದಾರ ವಲ್ಲಭ ಬಾಯಿ ಪಟೇಲ್, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಸಂತ ವೀರ ಕೇಸರಿ ಸ್ವಾಮಿ ವಿವೇಕಾನಂದ, ಅಹಿಲ್ಯಾಬಾಯಿ ಹೋಳ್ಕರ್, ಡಾ.ಬಾಬು ಜಗಜೀವನ ರಾಂ ಅವರ ವೃತ್ತಗಳನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಐದು ವರ್ಷದ ಅವಧಿಯಲ್ಲಿ ಎರಡು ವರ್ಷ ಕೊರೊನಾದ ಕಾಟದಲ್ಲೂ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವೆ. ಜಿಲ್ಲೆಗೆ ಹಲವಾರು ಯೋಜನೆಗಳನ್ನು ತರಲು ಪ್ರಯತ್ನಿಸಿ, ಯಶಸ್ವಿಯಾಗಿರುವೆ. ಸುರಕ್ಷತೆಯ ನಗರವನ್ನಾಗಿ ಪರಿವರ್ತಿಸಿರುವೆ. ಇದರಿಂದ ಜನ ನೆಮ್ಮದಿಯಾಗಿ ಜೀವನ‌ ನಡೆಸುತ್ತಿದ್ದಾರೆ ಎಂದರು. ಮಹಾನ್ ನಾಯಕರಿಗೆ ಗೌರವ ಸಲ್ಲಿಸಲು,…

Read More

ಸಿಂದಗಿ: ಪತ್ರಕರ್ತರ ಬಹು ದಿನದ ಬೇಡಿಕೆಯಾಗಿದ್ದ ಪತ್ರಿಕಾ ಭವನಕ್ಕೆ ಎಸ್.ಎಫ್.ಸಿ ಅನುದಾನದಲ್ಲಿ ರೂ.೨೦ಲಕ್ಷ ಮಂಜೂರು ಮಾಡಲಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.ಬುಧವಾರದಂದು ಪಟ್ಟಣದ ಬಸ್ ನಿಲ್ದಾಣದ ಹತ್ತಿರ ನಿರ್ಮಾಣವಾಗಲಿರುವ ಪತ್ರಿಕಾ ಭವನದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಸುದ್ದಿ ಮಾಡುವ ವರಿದಗಾರರಿಗೆ ಒಂದು ನಿರ್ದಿಷ್ಟ ಸ್ಥಳದ ಅವಶ್ಯಕತೆಯಿತ್ತು. ಆ ಬೇಡಿಕೆಯನ್ನು ಈ ದಿನ ಈಡೇರಿಸಿದ್ದೇವೆ. ಮತ್ತು ಅತ ಶೀಘ್ರದಲ್ಲಿ ಈ ಪತ್ರಿಕಾ ಭವನ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.ಈ ವೇಳೆ ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ ಮಾತನಾಡಿ, ಪತ್ರಿಕಾ ಭವನಕ್ಕೆ ಪುರಸಭೆ ವತಿಯಿಂದ ಕಾಂಪೌAಡ್ ನಿರ್ಮಿಸಿಕೊಳ್ಳಲು ರೂ.೫ ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಪತ್ರಕರ್ತರಾದ ರವಿಚಂದ್ರ ಮಲ್ಲೇದ, ಸುದರ್ಶನ ಜಂಗಣ್ಣಿ, ಮಹಾಂತೇಶ ನೂಲಾನವರ, ಶಿವಾನಂದ ಆಲಮೇಲ, ಗುರುರಾಜ ಮಠ, ಗುಂಡು ಕುಲಕರ್ಣಿ, ರಮೇಶ ಪೂಜಾರ, ರಾಜೂ…

Read More

ಕಲಕೇರಿ: ಗ್ರಾಮದ ಜೆ ಜೆ ಶಿಕ್ಷಣ ಸಂಸ್ಥೆ ಯ ಆವರಣದಲ್ಲಿ ಕಳೆದ ೧೧ ದಿನಗಳಿಂದ ಹಮ್ಮಿಕೊಂಡ ಆದಿಗುರು ಪಂಚಾಚಾರ್ಯರ ಯುಗಮಾನೋತ್ಸವ, ವೀರಶೈವ ಶಿವಾಚಾರ್ಯರ ಸಮ್ಮೇಳನ, ಸಿದ್ದಾಂತ ಶಿಖಾಮಣಿ ಪ್ರವಚನದ ಸಮಾರೋಪ ಮಂಗಳವಾರ ನಡೆಯಿತು.ಕಾಶಿ ಪೀಠದ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ‌ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಕಾರ್ಯಕ್ರಮದ ಸನ್ನಿದಾನವನ್ನು ವಹಿಸಿ, ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.ಸ್ವಾಗತ ಸಮಿತಿಯ ಅಧ್ಯಕ್ಷ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ‌ ಸಾಸನೂರ ಮಾತನಾಡಿ, ಪಂಚಪೀಠಗಳು ವೀರಶೈವ ಸಮಗ್ರ ಅಭಿವ್ರದ್ಧಿಯ ವಿಚಾರಧಾರೆಗಳೊಂದಿಗೆ ಸ್ವಸ್ಥ ಸಮಾಜವನ್ನು ನಿರ್ಮಿಸಿ ಭಕ್ತರನ್ನು ಉದ್ಧರಿಸುವ ಕಾರ್ಯವನ್ನು ಮಾಡುತ್ತಿವೆ ಎಂದು ಹೇಳಿದರು.ಇದೇ ವೇಳೆ‌ ವಿವಿಧ ಕ್ಷೇತ್ರಗಳಲ್ಲಿ ಸಾಧನೆ‌ ಮಾಡಿದ 15 ಕ್ಕೂ ಹೆಚ್ಚು ಸಾಧಕರಿಗೆ ಶ್ರೀಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಸಮ್ಮೇಳನದ ಸರ್ವಾಧ್ಯಕ್ಷ ಮಹಾರಾಷ್ಟ್ರದ ದಾರೇಶ್ವರ ಮಠದ ನೀಲಕಂಠ ಶಿವಾಚಾರ್ಯರು,‌‌‌ ಜಾಲಹಳ್ಳಿಯ ಜಗಧಾರಾಧ್ಯ ಜಯಶಾಂತಲಿಂಗೇಶ್ವರ ಶ್ರೀಗಳು, ಪಂಡಿತ್ ರಾಜಗುರು ಗುರುಸ್ವಾಮಿ ಕಲಕೇರಿ, ಹಿರೂರಿನ ಜಯಸಿದ್ದೇಶ್ವರ ಶಿವಾಚಾರ್ಯರು,…

Read More