Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026

ಬಿ.ವಿ.ಹಿರೇಮಠ ಗೆ ‘ಸಿಂದಗಿ ಸಿರಿ’ ಆದರ್ಶ ಶಿಕ್ಷಕ ಪ್ರಶಸ್ತಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 22, 2026

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆನಲೈನ್ ವಂಚನೆ: ನೈಜಿರಿಯಾ ಮೂಲದ ಮೂವರ ಬಂಧನ
(ರಾಜ್ಯ ) ಜಿಲ್ಲೆ

ಆನಲೈನ್ ವಂಚನೆ: ನೈಜಿರಿಯಾ ಮೂಲದ ಮೂವರ ಬಂಧನ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ನಗರದ ಜವಳಿ ಉದ್ಯಮಿಯೊಬ್ಬರಿಗೆ ಆನಲೈನ್ ಮೂಲಕ ವಂಚಿಸಿದ್ದ ನೈಜಿರಿಯಾ ಮೂಲದ ಮೂರು ಜನರನ್ನು ಬಂಧಿಸುವಲ್ಲಿ ವಿಜಯಪುರ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.ಕ್ರಿಪ್ಟೋ ಮೈನಿಂಗ್ ನಲ್ಲಿ ಹೂಡಿಕೆ ಮಾಡಿದರೆ ಹಾಕಿದ ಬಂಡವಾಳದ ಹಣದ ಜೊತೆಗೆ ಶೇ. 200 ರಷ್ಟು ಲಾಭಾಂಶ ಕೊಡುವುದಾಗಿ ಹೇಳಿ ಈ ಆರೋಪಿಗಳು ನಾನಾ ಸುಳ್ಳು ಸಬೂಬೂಗಳನ್ನು ಉದ್ಯಮಿಯಿಂದ ನಾನಾ ಹಂತಗಳಲ್ಲಿ ತಮ್ಮ ಬ್ಯಾಂಕ್ ಖಾತೆಗಳಿಗೆ ರೂ. 59 ಲಕ್ಷ 12 ಸಾವಿರದ 765 ಹಣವನ್ನು ಹಾಕಿಸಿಕೊಂಡಿದ್ದರು. ಅಲ್ಲದೇ, ಉದ್ಯಮಿಗೆ ಯಾವುದೇ ಲಾಭಾಂಶ ಕೊಡದೇ ಹಣವನ್ನೂ ಮರಳಿಸದೇ ಆನಲೈನ್ ಮೂಲಕ ವಂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಉದ್ಯಮಿ ವಿಜಯಪುರ ಸಿ ಇ ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೊಡ್ಡ ಸವಾಲಾಗಿದ್ದ ಈ ಪ್ರಕರಣವನ್ನು ಕೈಗೆತ್ತಿಕೊಂಡ ಸಿ ಇ ಎನ್ ಪೊಲೀಸರು ಕಲಂ 66(ಸಿ), 66(ಡಿ), ಐಟಿ ಆ್ಯಕ್ಟ್- 2008 ಮತ್ತು 419, 420ರ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣವನ್ನು ಎಸ್ಪಿ ಋಷಿಕೇಶ ಸೋನಾವಣೆ ಅವರು ಎಎಸ್ಪಿ ಶಂಕರ ಮಾರಿಹಾಳ ಅವರ ಮಾರ್ಗದರ್ಶನದಲ್ಲಿ ಸಿ ಇ ಎನ್ ಇನ್ಸಪೆಕ್ಟರ್ ರಮೇಶ ಅವಜಿ ನೇತೃತ್ವದಲ್ಲಿ ತನಿಖೆ ನಡೆಸಲು ತಂಡ ರಚಿಸಿದ್ದರು.ಈ ಪ್ರಕರಣವನ್ನು ಕೈಗೆತ್ತಿಕೊಂಡ ಸಿ ಇ ಎನ್ ಪೊಲೀಸರು ತಾಂತ್ರಿಕ ಸಾಕ್ಷ್ಯಗಳಾದ ಮೊಬೈಲ್ ಕರೆ ದಾಖಲೆಗಳು, ಆರೋಪಿಗಳು ವಾಸಿಸುತ್ತಿದ್ದ ಸ್ಥಳ, ಮೊಬೈಲ್ ಸಿಮ್ ಮತ್ತೀತರ ದಾಖಲೆಗಳನ್ನು ಸಂಗ್ರಹಿಸಿದರು. ನಂತರ 06.10.2023 ರಂದು ಕಿನ್ಯಾ ದೇಶದ ಪ್ರಜೆ ಸೇರಿ ಒಟ್ಟು ಐದು ಜನರನ್ನು ಪೊಲೀಸರು ಬಂಧಿಸಿದ್ದರು. ಅದರ ಮುಂದುವರೆದ ಭಾಗವಾಗಿ ಈಗ ಮತ್ತೆ ಮೂರು ಜನರನ್ನು ಬೆಂಗಳೂರಿನಲ್ಲಿ ಬಂಧಿಸಿ ವಿಜಯಪುರಕ್ಕೆ ಕರೆತರಲಾಗಿದೆ. ನೈಜೀರಿಯಾ ಮೂಲದ ಮತ್ತು ವಿದ್ಯಾಭ್ಯಾಸಕ್ಕಾಗಿ ಭಾರತಕ್ಕೆ ಬಂದಿದ್ದ ಓಸೆಮುದಿಯಾಮೆನ್ ಉರ್ಫ್ ಪೀಟರ್ ಇದೆಮುದೀಯನ್(38), ಉದ್ಯೋಗಕ್ಕಾಗಿ ಬಂದಿದ್ದ ಎಮೆಕಾ ಉರ್ಫ್ ಹ್ಯಾಪಿ ನ್ವಾವ್ಲಿಸಾ(40) ಮತ್ತು ಓಬಿನ್ನಾ ಸ್ಟ್ಯಾನ್ಲೆ ಇಹೆಕ್ವೆರೆನಾ(42) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಸೇರಿಕೊಂಡು ಈ ವಂಚನೆ ನಡೆಸುತ್ತಿದ್ದರು. ಈ ಬಂಧಿತ ಆರೋಪಿಗಳಿಂದ ಆನಲೈನ್ ವಂಚನೆಗೆ ಬಳಸಿದ ನಾನಾ ಕಂಪನಿಗಳ 21 ಮೊಬೈಲುಗಳು, 18 ಸಿಮ್ ಕಾರ್ಡ್ಗುಳ, 1 ಲ್ಯಾಪಟಾಪ್, 2 ಪೆನಡ್ರೈವ್, 1 ಡೋಂಗಲ್, 2 ಎಟಿಎಂ ಕಾರ್ಡುಗಳನ್ನು ವಶಪಡಿಸಿಕೊಂಡು ಅವರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿದ್ದಾರೆ. ಅಲ್ಲದೇ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿಪಿಐ ರಮೇಶ ಅವಜಿ ಜೊತೆಗೆ, ಪಿ.ಎಸ್.ಐ ಮಲ್ಲಿಕಾರ್ಜುನ ತಳವಾರ, ಪಿ. ವೈ. ಅಂಬಿಗೇರ, ಪೊಲೀಸ್ ಸಿಬ್ಬಂದಿಯಾದ ಸಿದ್ದು ದಾನಪ್ಪಗೋಳ, ಪುಂಡಲಿಕ ಎಸ್. ಬಿರಾದಾರ, ದುಂಡು ಆರ್. ಪಾಟೀಲ, ಮಹಾಂತೇಶ ಬಿ. ಪಾಟೀಲ, ಎಸ್. ಆರ್. ಉಮನಬಾದಿ, ಎಂ. ಕೆ. ಹಾವಡಿ, ಎಂ. ಎಂ. ಕುರುವಿನಶೆಟ್ಟಿ, ಎ. ಎಲ್. ದೊಡಮನಿ, ಆರ್. ವಿ. ನಾಯಕ, ಆರ್. ಬಿ. ಕೋಳಿ, ಡಿ. ಎಸ್. ಗಾಯಕವಾಡ, ಕುಮಾರ ರಾಠೋಡ, ಎ. ಆರ್. ಗದ್ಯಾಳ, ಎಸ್. ಆರ್. ಬಡಚಿ, ಎಂ. ಎಚ್. ಇಚ್ಚೂರ, ಎಸ್. ಐ. ಹೆಬ್ಬಾಳಟ್ಟಿ ಮತ್ತು ಎ. ಎಚ್. ಪಾಟೀಲ ಪಾಲ್ಗೋಂಡಿದ್ದರು ಎಂದು ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026

ಬಿ.ವಿ.ಹಿರೇಮಠ ಗೆ ‘ಸಿಂದಗಿ ಸಿರಿ’ ಆದರ್ಶ ಶಿಕ್ಷಕ ಪ್ರಶಸ್ತಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 22, 2026

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026
    In (ರಾಜ್ಯ ) ಜಿಲ್ಲೆ
  • ಬಿ.ವಿ.ಹಿರೇಮಠ ಗೆ ‘ಸಿಂದಗಿ ಸಿರಿ’ ಆದರ್ಶ ಶಿಕ್ಷಕ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 22, 2026
    In ದಿನಪತ್ರಿಕೆ
  • ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!
    In (ರಾಜ್ಯ ) ಜಿಲ್ಲೆ
  • ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಎತ್ತರ ಹೆಚ್ಚಳ ೩ ವರ್ಷದಲ್ಲಿ ಪೂರ್ಣಗೊಳಿಸಲು ಬದ್ಧ
    In (ರಾಜ್ಯ ) ಜಿಲ್ಲೆ
  • ೧ ರಿಂದ ೫ ವರೆಗೆ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲಿರಲಿ
    In (ರಾಜ್ಯ ) ಜಿಲ್ಲೆ
  • 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹ.ಮ.ಪೂಜಾರ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.