’ಉದಯರಶ್ಮಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಅಧಿಕಾರಿಗಳು
ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ಬೀರಲಿಂಗೇಶ್ವರ ಬಡಾವಣೆ ಹತ್ತಿರ ಇರುವ ಸರ‍್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಹಾಯ್ದು ಹೋಗುವ ಇಂಗಳೇಶ್ವರ-ಬಸವನಬಾಗೇವಾಡಿ ಪ್ರಮುಖ ರಸ್ತೆಯು ಹದಗೆಟ್ಟು ಹೋಗಿ ಅಲ್ಲಲ್ಲಿ ಗುಂಡಿಗಳು ನಿರ‍್ಮಾಣವಾಗಿ ನೀರು ನಿಂತಿರುವದರಿಂದಾಗಿ ಶಾಲಾ ಮಕ್ಕಳಿಗೆ, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮುಂದೆ ಅಪಘಾತಗಳಾಗುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ರೈತ ಸಂಘದ ಮುಖಂಡ ಅರವಿಂದ ಕುಲಕರ‍್ಣಿ ಪತ್ರಿಕಾ ಪ್ರಕಟಣೆ ಮೂಲಕ ಹದಗೆಟ್ಟ ರಸ್ತೆ ದುರಸ್ತಿಗೆ ಶುಕ್ರವಾರ ಆಗ್ರಹಿಸಿದ್ದರು.
ಈ ಪತ್ರಿಕಾ ಪ್ರಕಟಣೆಯು ಶನಿವಾರದ “ಉದಯರಶ್ಮಿ” ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಇವರ ಪ್ರಕಟಣೆಗೆ ಸ್ಪಂದಿಸಿದ “ಉದಯರಶ್ಮಿ” ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಇದಕ್ಕೆ ಸ್ಪಂದಿಸಿದ ಲೋಕೋಪಯೋಗಿ ಅಧಿಕಾರಿಗಳು ಶನಿವಾರ ಈ ರಸ್ತೆಗೆ ಕಡಿ ಹಾಕಿ ದುರಸ್ತಿ ಮಾಡುವ ಕಾರ‍್ಯಕ್ಕೆ ಮುಂದಾಗಿರುವುದು ರೈತ ಮುಖಂಡ ಅರವಿಂದ ಕುಲಕರ‍್ಣಿ ಅವರ ಸಾರ‍್ವಜನಿಕ ಸೇವೆಗೆ ಜನರು ಶ್ಲಾಘಿಸಿದರು.