Author: editor.udayarashmi@gmail.com

ಹುಚ್ಚು ಮನಸಿದು ನಿನ್ನಹಚ್ಚಿಕೊಂಡಿದೆ ನಲ್ಲತುಚ್ಛವೆಣಿಸೇ ಕನಸುನುಚ್ಚು ನೂರೆಲ್ಲ ರಚ್ಚೆ ಹಿಡಿದಿದೆ ಹೃದಯಹೆಚ್ಚಿ ಪ್ರೀತಿಯ ಕಾವುಮುಚ್ಚು ಮರೆಯಿಲ್ಲದೆಬಿಚ್ಚಿಹುದು ಭಾವ ಹಚ್ಚೆ ಹಾಕಿಸಿಕೊಂಡೆಮೆಚ್ಚಿ ನಿನ್ನಯ ಹೆಸರವೆಚ್ಚವೇ ಇಲ್ಲದೆಯೆಸ್ವಚ್ಛ ಮನಸಾರ… ಕೊಚ್ಚಿಹೋಗುವೆ ನಾನುನೆಚ್ಚಿ ನೀಡಲು ಸ್ಥಾನಮುಚ್ಚಿ ನಿನ್ನೆದೆಯೊಳಗೆಬೆಚ್ಚಗಿರಿಸೆನ್ನ……

Read More

ಮನೆಯಲ್ಲಿ ಮಕ್ಕಳಿದ್ದರೆ ಆ ಮನೆಗೆ ಒಂದು ಕಳೆ. ಹೊರಗಡೆ ಹೋಗಿ ಎಷ್ಟೇ ಸುಸ್ತಾಗಿದ್ದರೂ ಮನೆಗೆ ಬಂದ ಕೂಡಲೇ ಮಗುವಿನ ಮುದ್ದಾದ ಮಾತು ಕೇಳಿದೊಡನೆ ಸುಸ್ತೆಲ್ಲಾ ಹೊರಟು ಹೋಗಿ ನವ ಚೈತನ್ಯ ಮೂಡುತ್ತದೆ. ಮುಗ್ಧ ಮನಸ್ಸಿನ ತೊದಲು ನುಡಿಯು ಜೀವ ಚೈತನ್ಯದ ಚಿಲುಮೆ. ಹೆಣ್ಣಿರಲಿ ಗಂಡಿರಲಿ ಮಕ್ಕಳು ಎಲ್ಲ ಒಂದೆ. ಆದಾಗ್ಯೂ ತುಲನಾತ್ಮಕವಾಗಿ ನೋಡಿದಾಗ ಹೆಣ್ಣು ಮಕ್ಕಳೇ ತುಸು ಹೆಚ್ಚು ತೂಗುತ್ತಾರೆ ಎಂದರೆ ತಪ್ಪಾಗಲಾರದೇನೋ.ಹೆಣ್ಣು ಚೆಲುವಿನ ಗಣಿಯು, ಸಂತಸದ ನಿಧಿಯು. ಹೆಣ್ಣು ಮಗುವಿನ ಶಾರೀರಿಕ ವಿನ್ಯಾಸ ಗಂಡು ಮಗುವಿಗಿಂತ ಹೆಚ್ಚು ಸುಂದರ. ಸ್ವರವೂ ಕೋಮಲವಾಗಿರುತ್ತದೆ. ಚೋಟುದ್ದ ಜಡೆ ಬಿಟ್ಟು ಮನೆ ತುಂಬಾ ಓಡಾಡುತ್ತ ತನ್ನ ಚುರುಕುತನದಿಂದ ಮನೆ ಹಾಗೂ ಸುತ್ತಲಿನ ಎಲ್ಲರ ಮನವನ್ನು ಬಹು ಬೇಗ ಗೆಲ್ಲುತ್ತಾಳೆ. ಪಕ್ಕದ ಮನೆಯವರು ” ನಿಮ್ಮ ಮಗಳು ತುಂಬಾ ಚೂಟಿಯಾಗಿದ್ದಾಳೆ, ಎಷ್ಟು ಶಾಂತ ಸ್ವಭಾವ ” ಅಂದಾಗ ತಾಯಿಯ ಹೃದಯ ತುಂಬಿ ಬರುತ್ತದೆ. ಇನ್ನು ಅಲಂಕಾರ ಮಾಡುವುದೂ ಅಷ್ಟೆ. ಗಂಡು ಮಕ್ಕಳಿಗೆ ಒಂದು ಚಡ್ಡಿ ಅಂಗಿ…

Read More

ಕಾದಿಹೆನು ನಲ್ಲ.. ನಿನಗಾಗಿ ಹಾದಿಗೆ ಹೂವ ಚೆಲ್ಲಿ…ಬೇಧಿಸಿ ಬಾ ಅಡೆತಡೆದಳ ನನ್ನೆಡೆಗೆ ನಗುವ ಚೆಲ್ಲಿ…ಕನಸು ಮನಸಲೂ ನಿನ ಹೊರತು ಬೇರಾರೂ ಇಲ್ಲ…ಮನಸು ಹಾರುತಿದೆ ಹಕ್ಕಿಯೊಲು ನಿನ್ನದೇ ಗುಂಗಲ್ಲಿ.‌. ತನು ನಿನ್ನದು ಮನ ನಿನ್ನದು,ಈ ಜೀವವೂ ನಿನ್ನದು…ಕ್ಷಣಕ್ಣಣವೂ ಕಾತರಿಸಿದೆ ನಿನ್ನ ಕಾಣಲು ಕಣ್ಣಿದು…ಅಣಿಯಾಗಿಹೆ ನಾ ಸ್ವಾಗತಿಸಲು ಸಿಂಗಾರಗೊಂಡು..ಹಣೆಬೆವರಿದೆ ಮೈನಡುಗಿದೆ ನಿನ್ನದೇ ಗುಂಗಲ್ಲಿ ನೋಡು ಬರಬಾರದೇ ಇನಿಯ ಬೇಗನೆ ರಾಧೆಯ ಶ್ಯಾಮನಂತೆ..ಇರಬಾರದೇ ಎನ್ನ ಸನಿಹ ಜಾನಕಿಯ ರಾಮನಂತೆ…ತೋರಬಾರದೇ ಒಲವ ನನ್ನೆಡೆಗೆ ಗಿರಿಜಾರಮಣನಂತೆ.ಅರಿಯದೇ ಕಾದಿಹೆ ನಿನ್ನದೇ ಗುಂಗಿನಲ್ಲಿ ವಿರಹಿಯಂತೆ.

Read More

ಆಲಮಟ್ಟಿ:ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಿಗೆ ಏಫ್ರೀಲ್ 30ರ ವರೆಗೆ ಎಲ್ಲಾ ಕಾಲುವೆಗಳಿಗೆ ನೀರು ಹರಿಸುವುದನ್ನು ಮುಂದುವರೆಸಿ ಬೇಸಿಗೆ ಸಂದರ್ಭದಲ್ಲಿ ಬೆಳೆಯುವ ಬೆಳೆಗಳಿಗೆ ಅನುವು ಮಾಡಿ ಕೊಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಒತ್ತಾಯಿಸಿದ್ದಾರೆ.ಈ ಮೊದಲು ಮಾರ್ಚ 30ರ ವರೆಗೆ ಮಾತ್ರ ಕಾಲುವೆಗೆ ನೀರು ಹರಿಸುವುದಾಗಿ ನವೆಂಬರ 23 ರಂದು ಬೆಂಗಳೂರಿನಲ್ಲಿ ನಡೆಸಿದ್ದ ಐ.ಸಿ.ಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಏ. 30ರ ವರೆಗೂ ಎಲ್ಲ ಕಾಲುವೆಗಳಿಗೂ ನೀರು ಹರಿಸಲು ಸಂಘಟನೆ ವತಿಯಿಂದ ಹಲವು ಭಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗಿತ್ತು. ನಮ್ಮ ಹೋರಾಟಕ್ಕೆ ಸ್ಪಂದಿಸಿದ ನೀರಾವರಿ ಸಲಹಾ ಸಮೀತಿ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಸಿ.ಸಿ. ಪಾಟೀಲ ಮತ್ತೆ ಏ. 10ರ ವರೆಗೆ ಮಾತ್ರ ನೀರು ಹರಿಸುವದನ್ನು ಮುಂದು ವರೆಸುವದಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಒಂದು ವೇಳೆ ಏ.10 ಕ್ಕೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೆ ಬೇಸಿಗೆ ಬೆಳೆಗಳು ರೈತರ…

Read More

ವಿಜಯಪುರ: ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಬಡ ಕಟ್ಟಡ ಕಾರ್ಮಿಕನಿಗೆ ಶಸ್ತ್ರಚಿಕಿತ್ಸೆಗೆ ನೆರವಾಗುವ ಮೂಲಕ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ವಿಜಯಪುರ ನಗರದ ಇಂಡಿ ರೋಡ್ ನಿವಾಸಿ ಹಣಮಂತ ಗೋಠೆ(28) ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಕಟ್ಟಡ ಕೂಲಿ ಕಾರ್ಮಿಕರಾಗಿರುವ ಈ ಯುವಕ ತಂದೆ, ತಾಯಿ ಮತ್ತು ಪತ್ನಿಯನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದರು. ಈ ವಿಷಯ ತಿಳಿದ ಸುನೀಲಗೌಡ ಪಾಟೀಲ ಅವರು, ಯುವಕನಿಗೆ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈಗ ಸಂಪೂರ್ಣ ಗುಣಮುಖನಾದ ಯುವಕ ಎಂಎಲ್ಸಿ ಸುನೀಲಗೌಡ ಅವರ ಮನೆಗೆ ಆಗಮಿಸಿ ಕೃತಜ್ಞತೆ ಸಲ್ಲಿಸಿದ್ದಾನೆ. ಈ ಸಂದರ್ಭಲ್ಲಿ ಮಾತನಾಡಿದ ಅಪ್ಪುಗೌಡ ಇಂಡಿ, ಶಬ್ಬೀರ ಪಾಟೀಲ, ಗೋವಿಂದ ಪವಾರ, ಕಿಟ್ಟು ಗಾಡಿವಡ್ಡರ ಮುಂತಾದವರು, ಹಣಮಂತ ಗೋಠೆ ಅವರಿಗೆ ಹಾರ್ಟ್ ಪ್ರಾಬ್ಲೆಮ್ ಆಗಿತ್ತು. ಖಾಸಗಿ ಚಿಕಿತ್ಸೆಗೆ ಹೋದಾಗ ರೂ. 1.20 ಲಕ್ಷ ಖರ್ಚಾಗುತ್ತದೆ ಎಂದು ಹೇಳಿದರು. ಮೇಲಾಗಿ…

Read More

ವಿಜಯಪುರ: ಧರಣಿ ಮುಗಿಸುವ ದಿ‌ನ ನೀಡಿದ ಭರವಸೆಯಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಮೀಸಲಾತಿ ಹೆಚ್ಚಳ ಆದೇಶದ ಅಧಿಕೃತ ಪ್ರತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪಡೆದು, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀಗಳಿಗೆ ನೀಡಿದರು. ಎರಡು ವರ್ಷಗಳಿಗಿಂತ ಹೆಚ್ಚು ನಿರಂತರವಾಗಿ ಹೋರಾಟ ಮಾಡಿದ ಪ್ರತಿಫಲವಾಗಿ ಇಡೀ ಲಿಂಗಾಯತ ಸಮುದಾಯದವರಿಗೆ ಹೊಸ 2d ವರ್ಗ ಸೃಷ್ಟಿಸಿ, ಶೇ 5 ರಿಂದ 7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕಾರಣವಾಯಿತು. ಮೀಸಲಾತಿ ಘೋಷಣೆ ಮಾಡಿದಂತೆ, ಅಧಿಕೃತ ಆದೇಶ ಪ್ರತಿಯನ್ನು ಸಿಎಂ ಅವರಿಂದ ಪಡೆದು, ಶ್ರೀಗಳಿಗೆ ಹಸ್ತಾಂತರಿಸಿದೆ. ನಂತರ ಶ್ರೀಗಳೊಂದಿಗೆ, ಸಮಾಜದ ಮುಖಂಡರು ಮುಖ್ಯಮಂತ್ರಿ ಗಳ ಮನೆಗೆ ತೆರಳಿ ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಕೇವಲ ಪಂಚಮಸಾಲಿ ಸಮಾಜಕ್ಕೆ ಸೀಮಿತವಾಗದೆ, ನ್ಯಾಯಯುತವಾಗಿ ಮೀಸಲಾತಿ ಸಿಗಬೇಕಾದ ಎಲ್ಲ ಸಮುದಾಯಗಳ ಪರವಾಗಿ ಧ್ವನಿ ಎತ್ತಿರುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳರು ತಿಳಿಸಿದ್ದಾರೆ. ಶಾಸಕರಾದ ಸಿದ್ದು ಸವದಿ, ಕರ್ನಾಟಕ ದ್ರಾಕ್ಷಿ ಮತ್ತು ವೈನ್…

Read More

ಬಸವನಬಾಗೇವಾಡಿ: ರಾಮನಗರ ಜಿಲ್ಲೆಯ ಬೇಡ ಸಮುದಾಯದ ಅಪ್ರಾಪ್ತ ವಿದ್ಯಾರ್ಥಿನಿ ನಿರ್ಭಯಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆಯನ್ನು ಖಂಡಿಸಿ ತಾಲೂಕಾ ಬೇಡ ಜಂಗಮಭಿವೃದ್ದಿ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ರಾಮನಗರ ಉಪವಿಭಾಗದ ಕಗ್ಗಲಿಪುರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿ ನಿರ್ಭಯಳ ಅತ್ಯಾಚಾರ ಎಸಗಿ,ಕೊಲೆ ಸಂಭAದಿಸಿ ಕುರಿತು ಪ್ರಕರಣ ದಾಖಲಾಗಿದೆ.ಅಪ್ರಾಪ್ತ ನಿರ್ಭಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳ ಶೀಘ್ರವಾಗಿ ಬಂಧಿಸಿ ಉಗ್ರ ಶೀಕ್ಷೆ ಗುರಿಪಡಿಸಬೇಕು.ಆರೋಪಿಗಳನ್ನು ಜಾಮಿನಿನ ಮೇಲೆ ಹೊರ ಬರದಂತೆ ಸರ್ಕಾರ ನೋಡಿಕೊಂಡು ನಿರ್ಭಳ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಬದಲ್ಲಿ ಸ್ಥಳೀಯ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ರುದ್ರಮುನಿ ಸಾರಂಗಮಠ,ಪAಚಾಕ್ಷರಿ ಕಾಳಹಸ್ತೇಶ್ವರಮಠ,ಶಿವಲಿಂಗಯ್ಯ ತೆಗ್ಗಿನಮಠ,ಎಂ ಕೆ ಮಠ,ಎಸ್ ಆರ್ ಮಠ,ಪಿ ಎಲ್ ಹಿರೇಮಠ,ಸುಬಾಸ ಪುರಾಣಿಕಮಠ,ಸುಬಾಸ ಗಣಾಚಾರಿ,ಬಳಬಟ್ಟಿ ಸ್ವಾಮಿ ಸೇರಿದಂತೆ ಮುಂತಾದವರು ಇದ್ದರು.

Read More