ಮೋರಟಗಿ: ದೀಪಾವಳಿ ಎಂದರೆ ಭಕ್ತಿ ಪ್ರೀತಿಯ ಹಬ್ಬ ಮತ್ತು ಕೃತಜ್ಞತೆ ಸಮರ್ಪಣೆಗೆ ವೇದಿಕೆ. ಸಂಬಂಧಗಳ ನಂಟನ್ನು ಮತ್ತಷ್ಟು ಗಾಢವಾಗಿಸುವ ಬೆಸುಗೆ. ನಕ್ಷತ್ರಗಳ ಲೋಕದಂತೆ ಹೊಳೆಯುವ ಹಣತೆಗಳ ಸಾಲು ಮನೆ – ಮನಗಳನ್ನು ಬೆಳಗುತ್ತವೆ. ಇಂದು ಹಣತೆಗಳ ಬೆಳಕು ಬರೀ ಕಣ್ಣಿಗಲ್ಲ ಮುಚ್ಚಿದ ಮನದ ಬಾಗಿಲೋಳಗೂ ಬೆಳಕು ಸೋಕುತ್ತದೆ. ಹೊಸ ಬೆಳಕು ಚೆಲ್ಲಿ, ಹಳೆ ನೋವು ಸಂಕಟಗಳನ್ನು ಕಿತ್ತೆಸೆದು ಸಂಭ್ರಮಕ್ಕೆ ಮುನ್ನುಡಿ ಬರೆಯುವ ಈ ಬೆಳಕು ಕೃತಜ್ಞತೆ ಸಮರ್ಪಣೆಗೆ ವೇದಿಕೆ. ಏಕೆಂದರೆ ಶ್ರೀ ರಾಮನು ರಾವಣನನ್ನು ಗೆದ್ದು ಸೀತೆಯೊಂದಿಗೆ ಅಯೋದ್ಯೆಗೆ ಮರಳಿ ಹಣತೆಯೊಂದು ಹಚ್ಚಿದ ಸಮಯವೂ ಕೃತಜ್ಞತೆ ಸಮರ್ಪಣೆಗೆ ವೇದಿಕೆಯಾಗಿದೆ ಎಂಬ ವಾಡಿಕೆಯು ವಿಜಯಪುರದ ಮೋರಟಗಿಯಲ್ಲಿ ಇಂದಿಗೂ ಜೀವಂತವಾಗಿದೆ.
ಇಲ್ಲಿನ ಕಲ್ಪವೃಕ್ಷ ವಿದ್ಯಾಸಂಸ್ಥೆಯ ಸಂಸ್ಥಾಪಕ ಶಿವಶರಣಗೌಡ ಬಿರಾದಾರ ಅವರು ಇಂದಿಗೂ ದೀಪಾವಳಿಯಂದು ಲಕ್ಷ್ಮೀದೇವಿಯ ಪೂಜೆಯೊಂದಿಗೆ ಶ್ರೀರಾಮನಿಗೂ ವಿಶೇಷ ಪೂಜೆ ಹಾಗೂ ಹನ್ನೊಂದು ದೇವರ ಫೋಟೋ ಪೂಜೆಯ ಗದ್ದುಗೆ ನಿರ್ಮಿಸಿ ಪ್ರತಿ ವರ್ಷ ವಿಶೇಷ ಪೂಜೆಸಲ್ಲಿಸುವ ಮೂಲಕ ಬೆಳಕಿನ ಹಬ್ಬಕ್ಕೆ ಹೊಸ ಮುನ್ನುಡಿ ಬರೆದಿದ್ದಾರೆ.
ಹಣತೆಗಳಿಂದ ಬೆಳಕನ್ನು ಉಕ್ಕಿಸಿದ ನವೋಲ್ಲಾಸ, ಮನಸಲ್ಲಿನ್ನೂ ಹಿತವಾಗಿ ಹರಡಿಕೊಂಡಿರುವಂತೆಯೇ ಮುಸ್ಸಂಜೆ, ಖುಷಿ ಕೊಡುವ ಚಳಿಯನಡುವೆ ಮತ್ತೊಂದು ಸಂಭ್ರಮ ಮೈದಳೆದಿದೆ ಅದುವೇ ಅಯೋದ್ಯೆಗೆ ಮರಳಿದ ಭಕ್ತಿ ಪ್ರೀತಿಯ ಹಬ್ಬ.
ಮನುಷ್ಯ ಸದಾ ಇತಿ ಮಿತಿಗಳನ್ನು ಮೀರಿ ದೀಪದಂತೆ ಮೇಲಕ್ಕೆ ಬೆಳಗುತ್ತಾ ಹೋಗಬೇಕು. ದೀಪ ಹೇಗೆ ತನ್ನನ್ನು ತಾನು ಉರಿದುಕೊಂಡು ಸುತ್ತಲಿಗೆ ಬೆಳಕನ್ನು ಕೊಡುತ್ತದೆಯೋ ಮನುಷ್ಯ ಕೂಡಾ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು ಎಂಬ ಈ ಬೆಳಕಿನ ಹಬ್ಬದ ವೈಶಿಷ್ಟವಾಗಿದೆ.
“ದೀಪಾವಳಿಯಂದು ಕಾಳಿಕಾದೇವಿಯ ಪೂಜೆ “
ಲಕ್ಷ್ಮೀದೇವಿಯ ಪೂಜೆ, ರಾಮನ ಪೂಜೆ ಅಲ್ಲದೆ ಕಾಳಿಕಾ ದೇವಿಯ ಪೂಜೆಯು ನಡೆಯುವ ವಾಡಿಕೆಯೂ ಇದೆ ಜೀವನದ ಪ್ರಗತಿ ಮತ್ತು ಸರ್ವತೋಮುಖ ಏಳಿಗೆ ಬಯಸಿ ಕಾಳಿಕಾ ದೇವಿಯ ಪೂಜೆಯು ಬೆಳಕಿನ ಹಬ್ಬಕ್ಕೆ ಶೋಭೆ ತರುತ್ತದೆ.ಜನರ ಮನ ಸೆಳೆಯುವ ಮೋರಟಗಿಯ ಈ ಬೆಳಕಿನ ಹಬ್ಬ ಧಾರ್ಮಿಕ ಮತ್ತು ಆದ್ಯಾತ್ಮ ದೃಷ್ಟಿಯಿಂದ ಅರ್ಥಪೂರ್ಣವಾಗಿದೆ
Subscribe to Updates
Get the latest creative news from FooBar about art, design and business.
Related Posts
Add A Comment

