Author: editor.udayarashmi@gmail.com

ಜುಲೈ ತಿಂಗಳಿನಿಂದ ನರೇಗಾ ಬದಲಾಗಿ ವ್ಹಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನ ಉದಯರಶ್ಮಿ ದಿನಪತ್ರಿಕೆ ವರದಿ: ಬಸವರಾಜ ನಂದಿಹಾಳಬಸವನಬಾಗೇವಾಡಿ: ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ 2025 ವೇತನ ಉದ್ಯೋಗವನ್ನು ಸುಸ್ಥಿರ ಅಭಿವೃದ್ಧಿ ವಿಕಸಿತ ಭಾರತ್ @2047 ರ ದೃಷ್ಟಿಕೋನದೊಂದಿಗೆ ಜೋಡಿಸುವ ಮೂಲಕ ಗ್ರಾಮೀಣ ಉದ್ಯೋಗ ಚೌಕಟ್ಟನ್ನು ಪರಿವರ್ತಿಸಲು ಪ್ರಯತ್ನಿಸಲು ಕೇಂದ್ರ ಸರ್ಕಾರ ಮುಂದಾಗಿದೆ.ಈ ಕಾಯ್ದೆಯು ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷದಲ್ಲಿ ಶಾಸನಬದ್ಧ ಉದ್ಯೋಗ ಖಾತರಿಯನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸುತ್ತದೆ. ಫಲಿತಾಂಶ-ಆಧಾರಿತ ಕೆಲಸಗಳು ಮತ್ತು ಡಿಜಿಟಲ್ ಸಂಯೋಜಿತ ಯೋಜನೆಯ ಮೂಲಕ ನೀರಿನ ಸುರಕ್ಷತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಸ್ವತ್ತುಗಳು ಮತ್ತು ವಿಪತ್ತು ಸಿದ್ಧತೆಗೆ ಚೌಕಟ್ಟು ಆದ್ಯತೆ ನೀಡುತ್ತದೆ. ಬಯೋಮೆಟ್ರಿಕ್ ದೃಢೀಕರಣ, ಜಿಯೋ-ರೆಫರೆನ್ಸಿಂಗ್, ಡಿಜಿಟಲ್ ಮೇಲ್ವಿಚಾರಣೆ ಮತ್ತು ಸಮಯಕ್ಕೆ ಅನುಗುಣವಾಗಿ ವೇತನ ಪಾವತಿಗಳ ಮೂಲಕ ತಂತ್ರಜ್ಞಾನ-ಸಕ್ರಿಯಗೊಳಿಸಿದ ಆಡಳಿತವು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಕಡ್ಡಾಯ ಸಾಮಾಜಿಕ ಲೆಕ್ಕಪರಿಶೋಧನೆಗಳು,…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಅಖಿಲ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಪದಾಧಿಕಾರಿಗಳು ಬೆಳೆ ಸಮೀಕ್ಷೆದಾರರನ್ನು ಸರ್ಕಾರ ಕನಿಷ್ಠ ವೇತನ ನೀತಿಯಡಿ ದಿನಗೂಲಿ ಕಾರ್ಮಿಕರೆಂದು ನೇಮಕ ಮಾಡುವಂತೆ ಆಗ್ರಹಿಸಿ ಸಿಎಂ ಅವರಿಗೆ ಬರೆದ ಮನವಿಯನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಮಂಗಳವಾರ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ತಾಲೂಕಾ ವ್ಯಾಪ್ತಿಯಲ್ಲಿ 2025-26ರ ಮುಂಗಾರು ಹಂಗಾಮಿನ ನಿಖರವಾದ ಮಾಹಿತಿ ಮೇರೆಗೆ 95 ಜನರು ಸುಮಾರು 7-8 ವರ್ಷಗಳಿಂದ ಬೆಳೆ ಸಮೀಕ್ಷೆದಾರರಾಗಿ ಕೃಷಿ ಇಲಾಖೆಯಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲರೂ ಹೊಲ-ಗದ್ದೆಗಳಲ್ಲಿ ಜವಾಬ್ದಾರಿಯುತವಾದ ಕಾರ್ಯದಲ್ಲಿ ತೊಡಗಿಕೊಂಡು ಬೆಳೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಹಲವಾರು ಬಾರಿ ಅನೀರಿಕ್ಷಿತ ಅವಘಡಗಳಿಗೆ ತುತ್ತಾಗಿದ್ದರೂ ಕೂಡಾ ನಮ್ಮ ಮೇಲಾಧಿಕಾರಿಗಳ ಆಣತಿಯಂತೆ ಸರಿಯಾದ ಸಮಯದೊಳಗೆ ನಮ್ಮ ಜೀವದ ಹಂಗು ತೊರೆದು ನಮ್ಮ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ.ಇಷ್ಟಾಗಿಯೂ ನಮಗೆ ಮುಂಗಾರು, ಹಿಂಗಾರು, ಹಾಗೂ ಬೇಸಿಗೆ ಅಂತ ಹಂಗಾಮುಗಳಿಗೆ ಅನುಗುಣವಾಗಿ ನಮ್ಮನ್ನು ಬಳಸಿಕೊಂಡು ಒಂದು ವರ್ಷದಲ್ಲಿ ಕೇವಲ 2 ತಿಂಗಳುಗಳ ಕಾಲ ಕೆಲಸ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದಲ್ಲಿ ಮೇ 27ರಂದು ಬುಧವಾರದಂದು ಕುಲ್ಲೊಳ್ಳಿ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸರ್ವಿಸಸ್ ವತಿಯಿಂದ ಡಾ. ಕುಲ್ಲೊಳ್ಳಿ ಹಾಗೂ ಅವರ ನುರಿತ ವೈದ್ಯರ ತಂಡದಿಂದ ಕೊಲ್ಹಾರದ ಎಂ.ಪಿ.ಎಸ್ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.ಕೊಲ್ಹಾರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು, ರೈತ ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧೋಪಚಾರದ ಸೌಲಭ್ಯವನ್ನು ಪಡೆಯುವಂತೆ ಸಂಸ್ಥೆ ವಿನಂತಿಸಿದೆ.ಈ ಹಿಂದೆ ಯಾವುದೇ ರೀತಿಯ ಚಿಕಿತ್ಸೆಯನ್ನು ಪಡೆಯುತ್ತಿರುವವರು ತಮಗೆ ಚಿಕಿತ್ಸೆ ನೀಡಿದ ವೈದ್ಯರ ಫೈಲ್, ಔಷಧ ಚೀಟಿ ಹಾಗೂ ಸೇವಿಸುತ್ತಿರುವ ಮಾತ್ರೆಗಳ ವಿವರಗಳನ್ನು ಕಡ್ಡಾಯವಾಗಿ ಜೊತೆಯಲ್ಲಿ ತರಬೇಕೆಂದು ತಿಳಿಸಲಾಗಿದೆ.

Read More

ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ದಂಪತಿಗೆ ಮಲೆ ಮಹದೇಶ್ವರ ದೇಗುಲದ ಪಾರುಪತ್ತೇದಾರ ಮಾದಪ್ಪಸ್ವಾಮಿ ಅವರಿಂದ ಗೌರವ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಾಮರಾಜನಗರ ಜಿಲ್ಲೆಯ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಮಲೆಮಹಾದೇಶ್ವರ ಬೆಟ್ಟಕ್ಕೆ ಇತ್ತೀಚೆಗೆ ಭೇಟಿ ನೀಡಿದ ’ಉದಯರಶ್ಮಿ’ ಸಂಪಾದಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ದಂಪತಿಯನ್ನು ಮಲೆ ಮಹದೇಶ್ವರ ದೇಗುಲದ ಪಾರುಪತ್ತೇದಾರ (ಧರ್ಮದರ್ಶಿ) ಮಾದಪ್ಪಸ್ವಾಮಿ ಅವರು ಸನ್ಮಾನಿಸಿ ಗೌರವಿಸಿದರು.ಈ ವೇಳೆ ಮಾತನಾಡಿದ ಪಾರುಪತ್ತೇದಾರ ಮಾದಪ್ಪಸ್ವಾಮಿ ಅವರು, ಮುಜರಾಯಿ ಇಲಾಖೆಗೆ ಸೇರಿರುವ ಮಲೆ ಮಹದೇಶ್ವರ ದೇಗುಲಕ್ಕೆ ನಿತ್ಯವೂ ನಾಡಿನ ಎಲ್ಲೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ರಾಜ್ಯದ ಅತ್ಯಧಿಕ ಆದಾಯ (೨ನೇ ಸ್ಥಾನ) ತರುವ ಈ ದೇಗುಲದ ಆಡಳಿತ ಮಂಡಳಿಗೆ ಮಾನ್ಯ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ ಎಂದು ವಿವರಿಸಿದರು. ದೇವಾಲಯದ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿದ ಮಾದೇಸ್ವಾಮಿ ಅವರು, ಪತ್ರಿಕೆಯ ಧೋರಣೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.ಸನ್ಮಾನ ಸ್ವೀಕರಿಸಿದ ಇಂದುಶೇಖರ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸರ್ವರೂ ಶಾಂತಿ ಹಾಗೂ ಸೌಹಾರ್ದತೆಯಿಂದ ಬಕ್ರಿದ್ ಹಬ್ಬವನ್ನು ಆಚರಿಸಬೇಕು ಎಂದು ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.ಯುವ ಸಮುದಾಯ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜಾಗರೂಕರಾಗಿರಬೇಕು. ಅನಗತ್ಯವಾಗಿ ಬಕ್ರಿದ್ ಹಬ್ಬಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಬಾರದು ಎಂದು ಎಚ್ಚರಿಸಿದರು. ಹಬ್ಬ-ಹರಿದಿನಗಳನ್ನು ಅಚ್ಚುಕಟ್ಟಾಗಿ ಆಚರಿಸುವಲ್ಲಿ ಹಿರಿಯರ ಪಾತ್ರ ಮಹತ್ವದ್ದಾಗಿದ್ದು, ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬ ಆಚರಿಸಲು ಹಿರಿಯರು ಮುಂದಾಗಬೇಕು ಎಂದು ತಿಳಿಸಿದರು.ಪಿಎಸ್ಐ ಅಶೋಕ ನಾಯಕ್ ಮಾತನಾಡಿ, ಬಕ್ರಿದ್ ಹಬ್ಬದ ಆಚರಣೆಯಲ್ಲಿ ಅನಗತ್ಯ ಗೊಂದಲಗಳಿಗೆ ಆಸ್ಪದ ನೀಡದೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದರು. ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರಿದ್ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಜೊತೆಯಾಗಿ ಆಚರಿಸುವ ಮೂಲಕ ಭಾವೈಕ್ಯತೆಗೆ ಮಾದರಿಯಾಗಬೇಕು ಎಂದು ಸಲಹೆ…

Read More

ದಲಿತ ಮುಖಂಡರಿಂದ ಸುದ್ದಿಗೋಷ್ಟಿ | ಜಿತೇಂದ್ರ ಕಾಂಬಳೆ ರಿಂದ ಶಾಸಕರ ತೇಜೋವಧೆ ಸಲ್ಲದು ಎಂದ ಮುಖಂಡರು ಉದಯರಶ್ಮಿ ದಿನಪತ್ರಿಕೆ ಇಂಡಿ: ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಂದ ದಲಿತ ಸಮುದಾಯಕ್ಕೆ ಯಾವುದೇ ಅನ್ಯಾಯ, ಅವಮಾನ ಆಗಿರುವುದಿಲ್ಲ. ದಲಿತ ಸಮುದಾಯದ ವ್ಯಕ್ತಿಗೆ ಸಾಮಾನ್ಯ ಮೀಸಲಾತಿಯಲ್ಲಿ ಪುರಸಭೆ ಅಧ್ಯಕ್ಷರನ್ನಾಗಿ ಮಾಡಿದ್ದು, ಗ್ಯಾರಂಟಿ ಅನುಷ್ಟಾನ ಸಮಿತಿ ತಾಲ್ಲೂಕು ಅಧ್ಯಕ್ಷರನ್ನಾಗಿ ಮಾಡಿದ್ದು, ಸಮುದಾಯಕ್ಕೆ ಹೆಮ್ಮೆ ತರುವ ವಿಷಯ. ಜೀತೆಂದ್ರ ಕಾಂಬಳೆ ಅವರು ಶಾಸಕರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಛಲವಾದಿ ಸಮಾಜದ ಮುಖಂಡ ಭೀಮಾಶಂಕರ ಮೂರಮನ ಮತ್ತು ದಲಿತ ಮುಖಂಡ ಮುತ್ತಪ್ಪ ಪೊತೆ ಜಂಟಿಯಾಗಿ ಹೇಳಿದರು.ಅವರು ನಗರದ ಸರ್ಕಾರಿ ನೌಕರರ ಸಭಾ ಭವನದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಯಾವುದೇ ಸಮುದಾಯದವರು ಶಾಸಕರ ಭೇಟಿಗೆ ಹೋದರೆ ಎಲ್ಲರೊಂದಿಗೆ ಗೌರವಯುತವಾಗಿ ಮಾತನಾಡುತ್ತಾರೆ. ಅದರಲ್ಲಿಯೂ ದಲಿತ ಸಮುದಾಯದವರಿಗೆ ಕಾಳಜಿ ವಹಿಸಿ ಮಾತನಾಡುತ್ತಾರೆ. ದಲಿತ ಸಮುದಾಯದ ಕಾಲೋನಿಗಳಿಗೆ ಸಿಸಿ ರಸ್ತೆ, ಸಮುದಾಯ ಭವನ, ಗ್ರಂಥಾಲಯ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಬಿತ್ತನೆಗೆ ಮುಂಚಿತವಾಗಿ ಬೀಜಗಳಲ್ಲಿ ಬರನಿರೋಧಕತೆ ಹೆಚ್ಚಿಸಲು ಬೀಜೋಪಚಾರ ಅಗತ್ಯವಾಗಿದೆ ಎಂದು ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಹೇಳಿದರು.ಅವರು ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಜರುಗಿದ ಬೀಜೋಪಚಾರ ಅಂದೋಲನದಲ್ಲಿ ಪ್ರಾತಕ್ಷತೆಯೊಂದಿಗೆ ರೈತರಿಗೆ ಮಾಹಿತಿ ನೀಡಿ ಮಾತನಾಡಿದರು.ಬಿತ್ತನೆಗೆ ಮುಂಚೆ ಬೀಜಗಳನ್ನು ಶೇ ೨ ರ ಕ್ಯಾಲ್ಸಿಯಂ ಕ್ಲೋರೈಡ ದ್ರಾವಣದಲ್ಲಿ ಒಂದು ಗಂಟೆ ನೆನಸಿ ನಂತರ ನೆರಳಿನಲ್ಲಿ ಕನಿಷ್ಠ ೭ ಗಂಟೆ ಒಣಗಿಸಬೇಕು. ನಂತರ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ ೩ ಗ್ರಾಂ. ಶೀಲೀಂಧ್ರ ಮಿಶ್ರಣವಾದ ಕಾರ್ಬೇಡೈಜಿಯಂ ಶೇ ೧೨ ಹಾಗೂ ಮ್ಯಾಂಕೋಜೇಬ ಶೇ ೬೪ ಅಥವಾ ೧೦ ಗ್ರಾಂ ಜೈವಿಕ ಗೊಬ್ಬರಗಳಾದ ಟ್ರೆöÊಕೋಡರ್ಮ ಪಿಎಸ್‌ಬಿ ಹಾಗೂ ರೈಜೋಬಿಯಂಗಳಿಂದ ಬೀಜೋಪಚಾರ ಮಾಡಬೇಕು ಎಂದರು.ಕೃಷಿ ಅಧಿಕಾರಿ ಮಹಾಂತೇಶ ಶೆಟ್ಟೆಣ್ಣವರ ಮಾತನಾಡಿದರು.ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ಮನೋಜ ಪತ್ತಾರ, ಸವಿತಾ ಬಿರಾದಾರ, ಶ್ರೀಕಾಂತ ಚವ್ಹಾಣ, ಪ್ರಗತಿಪರ ರೈತರಾದ ಮಲ್ಲು ಗುಡ್ಲ, ಕೃಷಿ ಸಖಿಗಳು, ಅನುಗಾರರ ಸೇರಿದಂತೆ ರೈತರು ಉಪಸ್ಥಿತರಿದ್ದರು.

Read More

ಮೇ 30ರಂದು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ | ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಹೇಳಿಕೆ ಬೆಂಗಳೂರು: ಕಳೆದ 11 ದಿನಗಳಲ್ಲಿ ನಾಲ್ಕನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿರುವುದನ್ನು ಖಂಡಿಸಿ ಮೇ 30ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.ಕೇಂದ್ರ ಸರ್ಕಾರ ನಿರಂತರವಾಗಿ ಇಂಧನ ದರಗಳನ್ನು ಹೆಚ್ಚಿಸುವ ಮೂಲಕ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಹಾಕುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಕೇಂದ್ರ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 98.6 ಡಾಲರ್‌ಗೆ ಇಳಿದಿದ್ದರೂ ಭಾರತದಲ್ಲಿ ಕಳೆದ 11 ದಿನಗಳಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು.ಕಚ್ಚಾ ತೈಲದ ಬೆಲೆ ಇಳಿದಾಗ ಅದರ ಲಾಭವನ್ನು ಜನರಿಗೆ…

Read More

ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪವಿರುವ ಯರಹಳ್ಳಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದೆ. ಕತ್ತಲು ಅವರಿಸಿದರೆ ಮನೆಯಿಂದ ಜನ ಹೊರಗಡೆ ಬರಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಚಿಕ್ಕ ಮಕ್ಕಳು, ವೃದ್ಧರ ಜೀವಕ್ಕೆ ನಾಯಿಗಳಿಂದ ಕಂಟಕ ಎದುರಾಗಿದೆ. ರಾತ್ರಿ ವೇಳೆ ಸಾಕು ಪ್ರಾಣಿಗಳ ಮೇಲೆ ನಾಯಿಗಳು ದಾಳಿ ನಡೆಸಿ ಬಲಿ ಪಡೆಯುತ್ತಿವೆ.ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪವಿರುವ ಯರಹಳ್ಳಿಯಲ್ಲಿ ಸೋಮವಾರ ರಾತ್ರಿ ಬೀದಿನಾಯಿಯೊಂದು ಮೇಕೆಮರಿ ಮೇಲೆ ದಾಳಿ ಮಾಡಿ ತಿಂದು ಹಾಕಿದೆ. ಗ್ರಾಮದ ನಿವಾಸಿ ವೈ ಎಲ್ ಸದಾನಂದ ಅವರ ಪತ್ನಿ ಪವಿತ್ರಾ ಅವರಿಗೆ ಸೇರಿದ ಮೇಕೆ ಮರಿಯನ್ನು ದಾಳಿ ಮಾಡಿ ಸಾಯಿಸಿದೆ.. ನಾಯಿಗಳ ದಾಳಿಯಿಂದ ಆತಂಕಗೊಂಡಿರುವ ಕುಟುಂಬ ಬೀದಿನಾಯಿಗಳನ್ನು ಸೆರೆಹಿಡಿಯುವಂತೆ ಪುರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದೆ. ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳು ಜಾಸ್ತಿಯಾಗಿದ್ದು ಕೊಟ್ಟಿಗೆಯಲ್ಲಿ ಕಟ್ಟಿಹಾಕುವ ಸಾಕುಪ್ರಾಣಿಗಳ ದಾಳಿ ನಡೆಸುತ್ತಿವೆ. ಇದರಿಂದ ರೈತರು ಕಂಗಲಾಗಿದ್ದಾರೆ. ಹೀಗಾಗಿ ನಾಯಿಗಳನ್ನು ಸೆರೆಹಿಡಿದು ಬೇರೆಡೆಗೆ ಶಿಫ್ಟ್ ಮಾಡಬೇಕೆಂದು ರೈತ ಪರ್ವ ರಾಜ್ಯ ಕಾರ್ಯಧ್ಯಕ್ಷ ನವೀನ್…

Read More