ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜೈ ಶ್ರೀ ರಾಮ್, ಯಡಿಯೂರಪ್ಪ, ವಿಜಯೇಂದ್ರ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಇವರುಗಳಿಗೆ ಧಿಕ್ಕಾರ, ಹಿಂದು ಹುಲಿ ಬಸನಗೌಡ ಪಾಟೀಲ ಯತ್ನಾಳರಿಗೆ ಜಯವಾಗಲಿ ಈ ಆಕ್ರೋಷದ ಘೋಷಣೆಗಳು ಕೇಳಿ ಬಂದಿದ್ದು ಪಟ್ಟಣದಲ್ಲಿ.
ಬಿಜೆಪಿಯಿಂದ ಯತ್ನಾಳರನ್ನು ಉಚ್ಛಾಟಿಸಿದ ಹಿನ್ನೆಲೆ ಸೋಮುವಾರ ನಡೆದ ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರು, ಯತ್ನಾಳರ ಅಭಿಮಾನಿಗಳು, ಹಿಂದೂಪರ ಸಂಘಟನೆಗಳು ಉರಿ ಬಿಸಿಲನ್ನೂ ಲೆಕ್ಕಸದೇ ತಲೆಯ ಮೇಲೆ ಕೇಸರಿ ಟೋಪಿ, ಕೊರಳಲ್ಲಿ ಕೇಸರಿ ಶಾಲು ಧರಿಸಿ, ಇಲ್ಲಿನ ಬನಶಂಕರಿ ದೇವಸ್ಥಾನದಿಂದ ಮುಖ್ಯ ಬಜಾರ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ತಮ್ಮ ನಾಯಕನಿಗೆ ನ್ಯಾಯ ದೊರಕಬೇಕೆಂದು ಪ್ರತಿಭಟಿಸಿದರು.
ಈ ವೇಳೆ ಬಸವೇಶ್ವರ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಯತ್ನಾಳರ ಅಭಿಮಾನಿ ರಾಘವ ಅಣ್ಣಿಗೇರಿ ಮಾತನಾಡಿ, ಇವತ್ತಿನ ಹೋರಾಟ ಯಾರೊಬ್ಬರ ವಿರುದ್ಧ ಅಲ್ಲ. ಬಿಜೆಪಿಯ ವಿಚಾರ ಧಾರೆಯನ್ನು ವಿರೋಧ ಮಾಡಲಿಕ್ಕೆ ಅಲ್ಲ. ರಾಷ್ಟ್ರೀಯ ನಾಯಕರಿಗೆ ಟೀಕೆ ಟಿಪ್ಪಣಿಗಳನ್ನು ಮಾಡಲಿಕ್ಕಲ್ಲ. ಯಾರದೋ ಭಾವಚಿತ್ರಗಳಿಗೆ ಅಪಮಾನ ಮಾಡುದಕ್ಕಲ್ಲ. ನಿಜವಾದ ಹಿಂದೂ ನಾಯಕನ್ನು ಅಪ್ಪಾ ಮಕ್ಕಳ ಮಾತು ಕೇಳಿ ಪಕ್ಷದಿಂದ ಹೊರಹಾಕಿದ್ದೀರಲ್ಲಾ ಅದಕ್ಕೆ ಜನಾ ಇವತ್ತು ರೊಚ್ಚಿಗೆದ್ದು ಹೋರಾಟ ಮಾಡುತ್ತಿದೆ. ಆನಾಕ್ರೋಷ ಕೇವಲ ಇಲ್ಲಷ್ಟೇ ಅಲ್ಲ, ಬೀದರದಿಂದ ಚಾಮರಾಜ ನಗರದವರೆಗೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕದಲ್ಲೆಲ್ಲ ಜನ ರೊಚ್ಚಿಗೆದ್ದಿದೆ, ಜನಾಕ್ರೋಷ ಪ್ರಾರಂಭವಾಗಿದೆ. ರಾಜ್ಯದ ಜನತೆ ಇವತ್ತು ರಾಷ್ಟ್ರಭಕ್ತ, ಹಿಂದುತ್ವವಾದಿ ಯತ್ನಾಳರ ಪರವಾಗಿದ್ದೇವೆ ಎಂದು ತೀರ್ಪು ಕೊಟ್ಟಾಗಿದೆ. ವಿಜಯೇಂದ್ರ, ಯಡಿಯೂರಪ್ಪನವರು ಜನರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಳ್ಳಬೇಕು. ಇವತ್ತು ನೀವು ಕೇವಲ ಬಸನಗೌಡರನ್ನು ಹೊರಹಾಕಿಲ್ಲ, ಹಿಂದುತ್ವಕ್ಕೆ ಅಪಮಾನ ಮಾಡಿದ್ದೀರಿ ಎಂದೆಲ್ಲ ವಾಗ್ದಾಳಿ ನಡೆಸಿದರು.
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪಂಚಮಸಾಲಿ ಸಮಾಜದ ಮುಖಂಡ ಅರವಿಂದ ಕೊಪ್ಪ ಮಾತನಾಡಿ, ಯತ್ನಾಳರ ಅಭಿಮಾನಿಗಳಿಗೆ ಹೋರಾಟದಲ್ಲಿ ಭಾಗಿಯಾಗದಂತೆ ತಡೆಯುವ ಪ್ರಯತ್ನ ಮಾಡಲಾಗಿದೆ. ಮಾಜಿ ಶಾಸಕ ನಡಹಳ್ಳಿ ಅವರು ನಮ್ಮ ಯುವಕರಿಗೆ ಧಮಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಸುತ್ತಾರೆ ಎಂದು ತಮ್ಮ ಹಿಂಬಾಲಕರಿಂದ ದೂರು ಕೊಡಿಸುವ ಇವರು ನಿಜವಾಗಲು ಗಂಡಸರಾ? ಇಂತಹ ಕೆಲಸ ಮಾಡಿ ಈಗಾಗಲೇ ತಮ್ಮ ಖುರ್ಚಿಯನ್ನು ಕಳೆದುಕೊಂಡಿದ್ದಾರೆ. ಇದೇ ವೃತ್ತಿಯನ್ನು ಮುಂದುವರೆಸಿದರೆ ಮತಕ್ಷೇತ್ರದಲ್ಲಿ ನಿಮ್ಮ ಠೇವಣಿಯನ್ನು ಕಳೆದುಕೊಳ್ಳುತ್ತೀರಿ. ರಾಜಕಾರಣದಲ್ಲಿ ಸಣ್ಣತನ ಮಾಡಬೇಡಿ ಎಂದರು.
ಹೋರಾಟದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ಯುವ ಘಟಕದ ಅಧ್ಯಕ್ಷ ರವಿ ಕಮತ, ರುದ್ರಗೌಡ ಪಾಟೀಲ, ಎಂ.ಡಿ.ಕುಂಬಾರ ವಕೀಲರು, ಸಿದ್ದು ಹೆಬ್ಬಾಳ, ಸುರೇಶ ಪಾಟೀಲ, ಶರಣಪ್ಪ ಹೊಳಿ ಸೇರಿದಂತೆ ಹಲವರು ಇದ್ದರು.
ಅಧಿವೇಶನದಲ್ಲಿ ಮಾತನಾಡುವಾಗ ಬಿಜೆಪಿ ಪಕ್ಷ ಕೇವಲ ಒಂದು ಕುಟುಂಬದ ಪಕ್ಷವಲ್ಲ. ಈ ಪಕ್ಷ ೧೫ ಕೋಟಿಗೂ ಹೆಚ್ಚಿನ ರಾಷ್ಟç ಭಕ್ತರ ಪಕ್ಷ ಎಂದು ಹೇಳಿರುವ ಅಮೀತ ಶಾ ಅವರು ಕರ್ನಾಟಕದಲ್ಲೇನು ಆಗುತ್ತಿದೆ ಎಂಬ ಬಗ್ಗೆ ವಿವರಿಸಬೇಕು.
– ರಾಘವ ಅಣ್ಣಿಗೇರಿ
ಯತ್ನಾವಿವರಿಸಬೇಕು”
“ನಾನು ಕಟ್ಟಾ ಯತ್ನಾಳರ ಅಭಿಮಾನಿ. ಅವರು ಯಾವ ಪಕ್ಷದಲ್ಲಿರುತ್ತಾರೋ ನಾನೂ ಅದೇ ಪಕ್ಷದಲ್ಲೇ ಇರುತ್ತೇನೆ. ಅವರಿಗಾಗಿ ನಮ್ಮ ಪ್ರಾಣವನ್ನು ಬೇಕಾದರೂ ಕೊಡುತ್ತೇನೆ. ಸಧ್ಯ ಹುಲಿ ತುಂಬಾ ಬಿಸಿ ಆಗಿದೆ. ಇಲಿಗಳು ಹಾರಾಡುತ್ತಿವೆ. ಕೆಲವೇ ದಿನಗಳಲ್ಲಿ ಪಟ್ಟಣಕ್ಕೆ ಹುಲಿಯನ್ನು ಕರೆಸಿ ಬೃಹತ್ ಸಮಾವೇಶ ಮಾಡುತೇನೆ.”
– ಪ್ರಭುಗೌಡ ದೇಸಾಯಿ
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ

