ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ೨೦೨೫ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗ್ರಾಮದ ಕಲ್ಪವೃಕ್ಷ ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಉತ್ತಮ ಫಲಿತಾಂಶ ಮಾಡಿದ್ದು ವಿಜ್ಞಾನ ವಿಭಾಗದಲ್ಲಿ ೧೮೮ ವಿದ್ಯಾರ್ಥಿಗಳಲ್ಲಿ ೧೭ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ೩೧ ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಪಡೆದುಕೊಂಡಿದ್ದಾರೆ ಮತ್ತು ಕಲಾ ವಿಭಾಗದಲ್ಲಿ ೭೫ ವಿದ್ಯಾರ್ಥಿಗಳಲ್ಲಿ ೬ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದುಕೊಂಡಿದ್ದಾರೆ
ವಿಷಯವಾರು, ಗಣಿತದಲ್ಲಿ ೨ , ಜೀವಶಾಸ್ತç ೧ , ಇತಿಹಾಸದಲ್ಲಿ ೧, ಕನ್ನಡ ೧ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.
ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳು
ವಿಜ್ಞಾನ ವಿಭಾಗ
ಕರವೀರ ಸಂಕೊಂಡ ೫೪೬ (೯೧%)
ಶ್ವೇತಾ ಬಿರಾದಾರ ೫೪೬ (೯೧%)
ದತ್ತತ್ರಾಯ ಬಂದ್ರಾಡ ೫೪೩ (೯೦.೫೦%)
ವಾಣಿಜ್ಯ ವಿಭಾಗ
ಮಾಯಮ್ಮ ಪೂಜಾರಿ ೫೩೧ (೮೮.೫೦%)
ದೇವಮ್ಮ ಬಡಿಗೇರ ೫೨೯ (೮೮.೧೭%)
ಸಿದ್ಧರಾಮ ಹುಲಿ ೪೭೫ (೭೯.೧೭%)
ಕಲಾ ವಿಭಾಗ
ವಂದನಾ ಹಿರೇಮಠ ೫೫೯ (೯೩.೧೭%)
ಶ್ರೀದೇವಿ ಗಾಣೂರ ೫೩೩ (೮೮.೮೩%)
ಸಿದ್ದು ಪಾಟೀಲ ೫೩೨ (೮೮.೬೭%)
ಉತ್ತಮ ಸಾಧನೆ ಮಾಡಿ ಕಾಲೇಜಿನ ಕೀರ್ತಿ ಹೆಚ್ಚಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರು, ಆಡಳಿತಾಧಿಕಾರಿಗಳು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿ ವಿದ್ಯಾರ್ಥಿಗಳ ಜೀವನ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.
