ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ ೩ನೇ ಸ್ಥಾನ ಪಡೆದುಕೊಂಡ ಎಕ್ಸಲಂಟ್ ವಿಜ್ಞಾನ ಪ.ಪೂ ಕಾಲೇಜು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಸಕ್ತ ಸಾಲಿನ ಬಹು ನಿರೀಕ್ಷಿತ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಪ್ರಕಟಗೊಂಡಿದ್ದು ವಿಜಯಪುರ ನಗರದ ಪ್ರತಿಷ್ಠಿತ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಅದರಲ್ಲಿ ಇಶಾ ದೇಸಾಯಿ ೬೦೦ ಕ್ಕೆ ೫೮೬ ಅಂಕಗಳನ್ನು ಪಡೆಯುವುದರೊಂದಿಗೆ ಜಿಲ್ಲೆಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಗುಣಮಟ್ಟದ ಶಿಕ್ಷಣದ ಮೂಲಕ ಗುರುತಿಸಿಕೊಂಡಿರುವ ಕಾಲೇಜಿನಿಂದ ಪರೀಕ್ಷೆಗೆ ಹಾಜರಾಗಿದ ೬೨೯ ವಿದ್ಯಾರ್ಥಿಗಳ ಪೈಕಿ ೫೮೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅದರಲ್ಲಿ ೧೪೪ ಡಿಸ್ಟಿಂಗ್ಷನ್, ೪೧೪ ಪ್ರಥಮ ದರ್ಜೆ ಹಾಗೂ ೨೩ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ಒಟ್ಟು ೯೨.೩೬ ಪ್ರತಿಷತ ಫಲಿತಾಂಶವನ್ನು ದೊರೆತಿರುತ್ತದೆ.
ಕಾವ್ಯಾ ಸಿಂಧೆ(೫೮೪), ಅಶ್ವಿನಿ ಎಕ್ಕುಂಡಿ(೫೮೧), ಗಂಗಾಧರ ಮುತ್ತಗಿ(೫೭೭), ಮೇಘಾ ಭೂಶೆಟ್ಟಿ(೫೭೫), ಪ್ರಜ್ವಲ್ ಪುರಾಣಿಕ(೫೭೪) ಸಚೀನ್ ಸಜ್ಜನ(೫೭೧), ನಂದಿನಿ ಇಂಗಳೇಶ್ವರ(೫೭೦), ಇಸ್ರೆಲ್ ಮಳಗಿ(೫೭೦), ಆಶಾ ಬಿರಾದಾರ(೫೬೯), ಹರ್ಷ ಋಣವಾಲ(೫೬೮), ವಿಜಯಲಕ್ಷ್ಮಿ ಕಬಾಡೆ(೫೬೮), ಸುಮೀತ ಪತ್ತಾರ (೫೬೭), ಹರೀಶ ಚನಗೊಂಡ(೫೬೫), ಕೋಮಲ್ ಭಾವಿಕಟ್ಟಿ(೫೬೪), ವಿಜಯಲಕ್ಷ್ಮಿ ಬದ್ರಿ(೫೬೪), ಸೃಜನ್ ಕುಲಕರ್ಣಿ(೫೬೪), ಪವನ್ ನಾಯ್ಕರ್(೫೬೪), ಅಂಕಿತಾ ಕಟ್ಟಿ(೫೬೪), ವಿನಾಯಕ ಸಾತಪುತೆ(೫೬೩), ಸೃಷ್ಠಿ ಖುರ್ಪೆ(೫೬೩) ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದು; ಗಣಿತಶಾಸ್ತ್ರದಲ್ಲಿ ೬, ಕನ್ನಡದಲ್ಲಿ ೪, ಜೀವಶಾಸ್ತçದಲ್ಲಿ ೩, ಗಣಕವಿಜ್ಞಾನದಲ್ಲಿ ೨ ಹಾಗೂ ಭೌತಶಾಸ್ತ್ರದಲ್ಲಿ ಓರ್ವ ವಿದ್ಯಾರ್ಥಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಈ ಪರೀಕ್ಷೆಯ ನಂತರದಲ್ಲಿ ಎದುರಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಮೂಲಕ ಮಕ್ಕಳು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಿ ಹೆತ್ತರವರ ಕನಸನ್ನು ಈಡೇರಿಸಬೇಕು ಎಂದು ಹೇಳಿದರು. ಕಾಲೇಜಿನ ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಸೇರಿದಂತೆ ಸರ್ವ ಬೋಧಕ ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.

