ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಗೌಂಡಿ, ವೆಲ್ಡಿಂಗ್, ಟೈಲ್ಸ್, ರೋಡ್ ವರ್ಕ ಕಿಟ್ ಗಳನ್ನು ವಿತರಿಸಲು ಅರ್ಜಿ ಆವ್ಹಾನಿಸಲಾಗಿದೆ.
ಫಲಾನುಭವಿಯ ಗುರಿತಿನ ಚೀಟಿ, ಆಧಾರ ಕಾರ್ಡ ಮತ್ತು ಭಾವಚಿತ್ರದೊಂದಿಗೆ ಮುದ್ದೇಬಿಹಾಳ ಹಾಗೂ ತಾಳಿಕೋಟೆ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಎ೮ ರಿಂದ ಎ೧೯ ರವರೆಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಕಿಟ್‌ಗಳನ್ನು ಜೇಷ್ಟತಾ ಆಧಾರದ ಮೇಲೆ ವಿತರಿಸಲಾಗುವದು ಎಂದು ಕಾರ್ಮಿಕ ನಿರೀಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
