ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಕಳೆದ ಎರಡು ತಿಂಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಬಿತ್ತಿದ ಬೆಳೆಗಳು ಕೈಗೆ ಬಾರದ ಸ್ಥಿತಿಯನ್ನು ಅರಿತು ವಿವಿಧ ಬೇಡಿಕೆಗಳನ್ನು ಇಡೇರಿಸಲು ತಹಸೀಲ್ದಾರ ಸುರೇಶ ಚವಲರ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ತಾಲ್ಲೂಕಾಧ್ಯಕ್ಷ ಸಾತಲಿಂಗಯ್ಯ ಸಾಲಿಮಠ ಅತಿ ಹೆಚ್ಚು ಮಳೆಯಾಗುತ್ತಿರುವದರಿಂದ ತಾಲ್ಲೂಕಿನ ರೈತರು ತಲೆಯ ಮೇಲೆ ಕೈಹೊತ್ತು ಕುಳಿತುಕೋಳ್ಳುವಂತಾಗಿದೆ. ತೋಗರಿ, ಗೋವಿನ ಜೋಳ, ಹೆಸರು, ಉದ್ದು, ಶೇಂಗಾ ಬಿತ್ತನೆಯಾಗಿದ್ದು ಬೆಳೆಗಳು ಹಾಳಾಗಿವೆ ಎಂದರು.
ರೈತ ಮುಖಂಡ ಯಾಕುಬ ಜತ್ತಿ ಮಾತನಾಡಿ ದ್ರಾಕ್ಷಿ, ದಾಳಿಂಬೆ, ಕಬ್ಬು ಬೆಳೆಯುವ ರೈತರಿಗೆ ಅಂಗಡಿ ವ್ಯಾಪಾರಸ್ಥರು ಗೊಬ್ಬರ, ಔಷಧ ಹಾಗೂ ಕೀಟನಾಶಕ ಕಳಪೆ ನೀಡುತ್ತಿದ್ದು ಮತ್ತು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ಇದ್ದು ಇದ್ದನ್ನು ನ್ಯಾಯುತವಾಗಿ ತನಿಕೆ ನಡೆಸಿ ಸೂಕ್ತ ಕ್ರಮ ಕೈಗೋಳ್ಳಬೇಕು. ದ್ರಾಕ್ಷಿ ಬೆಳೆ ವಿಮೆ ಬಿಡುಗಡೆ ಬಗ್ಗೆ ಶೀಘ್ರವೇ ಕ್ರಮ ಕೈಗೋಳ್ಳಬೇಕೆಂದು ಆಗ್ರಹಿಸಿದರು.
ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಲ್ಲಿ ಸಾಕಷ್ಟು ಮೋಸ ನಡೆಯುತ್ತಿದ್ದು ಮೂರನಾಲ್ಕು ವರ್ಷಗಳಿಂದ ಬೆಳೆ ನಷ್ಟಗೊಂಡ ರೈತರಿಗೆ ವಿಮಾ ಪರಿಹಾರ ಬಂದಿರುವದಿಲ್ಲ ಇದರ ಬಗ್ಗೆ ಕ್ರಮ ತೆಗೆದುಕೋಳ್ಳಬೇಕೆಂದು ಮನವಿ ಸಲ್ಲಿಸಲಾಯಿತು. ಒಂದು ವೇಳೆ ಇದಕ್ಕೆ ಕ್ರಮ ಕೈಗೋಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುದೆಂದು ರೈತರು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಗೀತಾ ರಾಠೋಡ, ನಜೀರ ನಂದರಗಿ,, ಸಿದಗೊಂಡ ರುದ್ರಗೌಡರ, ಶಾನೂರ ನಂದರಗಿ, ಹಣಮಂತ ಬ್ಯಾಡಗಿ, ಧರೆಪ್ಪ ಆರ ಅನಂತಪೂರ, ಶಿವಪ್ಪಾ ಪಟ್ಟಣಶೆಟ್ಟಿ, ರಾಮಚಂದ್ರ ಅಗಸರ, ಸುರೇಶ ಕೋಣ್ಣುರ, ಮಲ್ಲು ಕೊಂಡಿ, ಬಸು ಮಾಳಿ, ಮಹಾದೇವ ಕದಂ, ರೀಯಾಜ ವಾಲೀಕಾರ, ಶಮ್ಮು ಉಮರಾಣಿ, ಸುರು ಕಾಡಪ್ಪಗೋಳ, ದಾವಲಸಾಬ ನಂದರಗಿ, ಸಿದ್ದು ಕೋಟ್ಟಲಗಿ, ಸಂತು ಹೊನವಾಡ, ಪ್ರಸಾಂತ ಬಡಕುರಿ, ಬುಳ್ಳಪ್ಪ ಬಡಕುರಿ ಇದ್ದರು.