ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ನಾಡಿನ ಪ್ರತಿಯೋಂದು ಹಳ್ಳಿ ಪಟ್ಟಣ ನಗರ ಪ್ರದೇಶಗಳಲ್ಲಿ ಸಂಗೀತ ಲೋಕದ ಜ್ಞಾನ ಪಡೆಯಲು ಹೊಸ ಹೊಸ ಪ್ರತಿಭೆಗಳು ಉದಯಿಸಬೇಕು ಎಂದು ಜಾನಪದ ಕಲಾವಿದ ಬೀಮಪ್ಪ ಸಂಗಪ್ಪ ಬೀಳಗಿ ಹೇಳಿದರು.
ಕೊಲ್ಹಾರ ತಾಲೂಕ ಜಾನಪದ ಪರಿಷತ್ ಹಾಗೂ ಕಲಾವಿದರ ಬಳಗದವರು ಪಟ್ಟಣದಲ್ಲಿ ಹಮ್ಮಿಕೊಂಡ ಗದುಗಿನ ವಿರೇಶ್ವರ ಪುಣ್ಯಾಶ್ರಮದ ಹಿಂದಿನ ಪೀಠಾಧಿಕಾರಿಗಳಾದ ಪಂಡಿತ ಪುಟ್ಟರಾಜ ಗವಾಯಿವರ ಹದಿನೈದನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಕ್ಕೆ ಗಾಯನ ಲೋಕವನ್ನಷ್ಟೆ ಅಲ್ಲದೆ ವಿವಿಧ ಸಂಗೀತ ಕ್ಷೇತ್ರದಲ್ಲಿ ಪ್ರತಿಭಾನ್ವೀತ ಕಲಾವಿದರನ್ನು ಪರಿಚಯಿಸಿದ ಮಹಾನ್ ದೈವಿಶಕ್ತಿಯ ಗುರು ಪುಟ್ಟರಾಜ ಗವಾಯಿಗಳು ಎಂದರು.
ಜಾನಪದ ಪರಿಷತ್ ತಾಲೂಕಾ ಅಧ್ಯಕ್ಷ ಮಲ್ಲಪ್ಪ ಈಶ್ವರಪ್ಪ ಗಣಿ ಮಾತನಾಡಿ ಆದುನಿಕ ಜಗತ್ತಿನಲ್ಲಿ ಹಿಂದಿನ ತಲೆಮಾರಿನ ಹಳೇ ಕಾಲದ ಭಜನೆ ಕೀರ್ತನೆ ಹರಿದಾಸ ಇನ್ನೀತರ ಕಲೆಯನ್ನು ಉಳಿಸಿಕೊಂಡು ಮುಂದಿನ ಕಲೆಯನ್ನು ಆರಾಧಿಸುವ ಆಸಕ್ತ ಯುವ ಸಮೂಹ ಕಲಿಕೆಯಲ್ಲಿ ತೊಡಗಿಕೊಂಡು ಸಂಗೀತ ಕ್ಷೇತ್ರದಲ್ಲಿ ನವತಾರೆಗಳು ಉದಯಿಸಲು ಪುಟ್ಟರಾಜರ ಕ್ರಪೆ ಆಗಲಿ ಎಂದರು.
ಈ ಸಂದರ್ಭದಲ್ಲಿ ಈರಯ್ಯ ಹಲಗಯ್ಯ ಮಠಪತಿ ಸಾನೀಧ್ಯ ವಹಿಸಿದ್ದರು ರಾಚಪ್ಪ ಏಕಪ್ಪ ಗಣಿ ಶ್ರೀಶೈಲ ಸಂಗಪ್ಪ ಏಳಗಂಟಿ ಬಸಪ್ಪ ಮಲ್ಲಪ್ಪ ಮುರನಾಳ ಪ್ರಭುಕುಮಾರ ಪರಶುರಾಮ ಗಣಿ ಅನೇಕರು ಉಪಸ್ಥಿತರಿದ್ದರು.