ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಕನ್ನಡ ಅನುದಾನಿತ ಪ್ರಾಥಮಿಕ ಶಾಲೆಯ ಮಕ್ಕಳು ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ವೀರಾಗ್ರಣಿ ಪ್ರಶಸ್ತಿ ಪಡೆದು
ವಲಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆದ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಅದ್ಯಕ್ಷ ಎಸ್.ಆಯ್.ಜೋಗೂರ ನಮ್ಮ ಶಾಲೆಯ ಮಕ್ಕಳು ನಿರಂತರ ಆಟದ ಪ್ರಯತ್ನದ ಫಲವಾಗಿ ಓಟ, ಉದ್ದ ಜಿಗಿತ, ಡಿಸ್ಕಸ್ ಥ್ರೂ, ಗುಂಡು ಎಸೆತ ಹಾಗೂ ಖೋ-ಖೋ ಮತ್ತು ಕಬಡ್ಡಿಯಲ್ಲಿ ಉತ್ತಮ ಪ್ರದರ್ಶನ ನೀಡಿ ವಲಯ ಮಟ್ಟಕ್ಕೆ ಆಯ್ಕೆ ಆಗಿದ್ದು ಸಂತೋಷ ತಂದಿದೆ. ನಿಮ್ಮ ಕ್ರೀಡಾ ಸ್ಪೂರ್ತಿಯಿಂದ ನಿಮ್ಮ ಆರೋಗ್ಯ ಹಾಗೂ ಮಾನಸಿಕ ಶಕ್ತಿ ವೃಧ್ಧಿ ಆಗುತ್ತದೆ ಹಾಗಾಗಿ ಪಾಠದ ಜೊತೆಗೆ ಕ್ರೀಡೆಯೂ ಮುಖ್ಯ ಎಂದರು.
ಈ ವೇಳೆ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ದೈಹಿಕ ಶಿಕ್ಷಕಿಯರಾದ ಸೀತಾ ಆರೇಶಂಕರ, ಸರುಬಾಯಿ ಬಂಡಗರ, ಸುನೀತಾ ಗುಂಡದ, ವೀಣಾ ರಾಂಪೂರಮಠ, ರಕ್ಷಿತಾ ಹಡಪದ ಮುಂತಾದವರು ಇದ್ದರು