Author: editor.udayarashmi@gmail.com

ಮುದ್ದೇಬಿಹಾಳ: ಬೆಳೆ ಉತ್ಪಾದನಾ ತಂತ್ರಜ್ಞಾನಗಳ ಜೊತೆ ಪೀಡೆ, ಪೋಷಕಾಂಶ ನಿರ್ವಹಣೆಯಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿ ಕೈಗೊಳ್ಳಲಾಗುವ ಬೇಸಾಯ ಪದ್ಧತಿಗಳಿಂದ ಅಧಿಕ ಇಳುವರಿ ಪಡೆಯುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ರೈತರಿಗೆ ಸಾಧ್ಯವಾಗಲಿದೆ ಎಂದು ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಹೇಳಿದರು.ತಾಲೂಕಿನ ಬಸರಕೋಡ ಗ್ರಾಮದ ಶ್ರೀಮಂತ ಶ್ರೀ ಶ್ರೀಶೈಲ ಸೂಳಿಭಾವಿಯವರ ತೋಟದಲ್ಲಿ ಯುನೈಟೆಡ್ ಫಾಸ್ಫರಸ್ ಲಿಮಿಟೆಡ್ ಕಂಪನಿಯವರು ಏರ್ಪಡಿಸಿದ್ದ ಮೆಕ್ಕೆಜೋಳ ಬೆಳೆ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯನ ಆರೋಗ್ಯ ದೃಷ್ಠಿಯಿಂದಲೂ ಉತ್ತಮ ಆಹಾರ ಉತ್ಪನ್ನವಾಗಿ ಕಂಡು ಬರುವ ಮೆಕ್ಕೆಜೋಳ ಬೆಳೆ ಪ್ರದೇಶ ವಿಸ್ತರಣೆ ಇರುವ ಅವಕಾಶವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಪಶು ಸಂಗೋಪನೆಯಲ್ಲಿ ಮುಖ್ಯ ಆಹಾರವಾಗಿ ಪರಿಗಣಿಸಲಾಗುತ್ತಿರುವ ಮೆಕ್ಕೆಜೋಳ ಬೆಳಯಲ್ಲಿ ಇಳುವರಿ ಅಧಿಕಗೊಳಿಸುವ ತಾಂತ್ರಿಕತೆಯ ನೆರವು ಪಡೆಯಲು ರೈತರು ಮುಂದಾಗಬೇಕೆಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಬಸರಕೋಡ ಮಂಡಳ ಪಂಚಾಯತ ಮಾಜಿ ಪ್ರಧಾನ ಶ್ರೀಶೈಲ ಸೂಳಿಭಾವಿ ಮಾತನಾಡಿದರು.ಅತಿಥಿ ಉಪನ್ಯಾಸ ನೀಡಿದ ಯುಪಿಎಲ್ ಕಂಪನಿ ನೋಡಲ ಅಧಿಕಾರಿ ಮಂಜುನಾಥ ಮಾತನಾಡಿದರು.ಕಂಪನಿಯ ತಾಲೂಕು ವಿತರಕ…

Read More

ಆಲಮಟ್ಟಿ: ಗ್ರಾಮದ ಆರ್.ಎಸ್. ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಗುರುವಾರ ವಯೋನಿವೃತ್ತಿಗೊಂಡ ದೈಹಿಕ ಶಿಕ್ಷಣ ಶಿಕ್ಷಕಿ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಕೆ.ಎಸ್. ಧನಶೆಟ್ಟಿ ಅವರನ್ನು ಗುರುವಾರ ಆಲಮಟ್ಟಿಯಲ್ಲಿ ಸನ್ಮಾನಿಸಲಾಯಿತು. ವಿವಿಧ ಗಣ್ಯರು ಮಾತನಾಡಿ ಅವರ ಸೇವಾ ಮನೋಭಾವನೆಯ ಗುಣಗಾನ ಮಾಡಿದರು. 20 ಕ್ಕೂ ವಿವಿಧ ಸಂಘಟನೆಯವರು, ಗ್ರಾಮಸ್ಥರು ಧನಶೆಟ್ಟಿ ಅರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಯು.ವೈ. ಬಶೆಟ್ಟಿ, ಎಸ್.ಎಂ. ಜಲ್ಲಿ, ಬಿ.ಟಿ. ಗೌಡರ, ಎಂ.ಎಸ್. ಮುಕಾರ್ತಿಹಾಳ, ಆರ್.ಎಸ್. ಕಮತ, ಸಲೀಂ ದಡೆದ, ಆರ್.ಬಿ. ಗೌಡರ, ಎಂ.ಆರ್. ಮಕಾನದಾರ್, ಬಿ.ಡಿ. ಚಲವಾದಿ, ಎಂ.ಎಂ. ಮುಲ್ಲಾ, ಎಂ.ಬಿ. ಹೆಬ್ಬಾಳ, ಮುತ್ತು ಯಳಮೇಲಿ, ರಾಜು ಹಲಗಿ ಮತ್ತೀತರರು ಇದ್ದರು

Read More

ಆಲಮಟ್ಟಿ: ಕ್ರಿಸ್ತಪೂರ್ವದಿಂದಲೂ ಅಸ್ತಿತ್ವದಲ್ಲಿದ್ದ ಸನಾತನ ಧರ್ಮದಲ್ಲಿ “ಮೇಲು-ಕೀಳು’ ಎಂಬ ಕೆಟ್ಟ ವ್ಯವಸ್ಥೆ ಇತ್ತು, ಮುಂದೆ ರಾಜರ ಕಾಲದಲ್ಲಿಯೂ ಒಂದೇ ಧರ್ಮ ಪೋಷಿಸಲ್ಪಟ್ಟಿತು, ಒಟ್ಟಾರೇ ಹಿಂದಿನ ಕಾಲದಲ್ಲಿ ದಲಿತ ಜನಾಂಗಕ್ಕೆ ಅತಿ ಹೆಚ್ಚಿನ ಅನ್ಯಾಯವಾಗಿದೆ, ಪ್ರಾಣಿಗಳಿಗಿಂತಲೂ ಕಡೆಯಾಗಿದ್ದು ಸುಳ್ಳಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎಸ್.ಕೆ. ಬೆಳ್ಳುಬ್ಬಿ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ ಸೈನ್ಯ ಜಿಲ್ಲಾ ಸಮಿತಿ ಗುರುವಾರ ಆಲಮಟ್ಟಿಯಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಜಾಗೃತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಿಜೆಪಿ ಎಂದೂ ಸಂವಿಧಾನದ ಬದಲಾವಣೆಯ ಚಿಂತನೆಯೂ ಮಾಡಿಲ್ಲ, ಯಾರೋ ಹೇಳಿದ್ದು, ಅದು ಅವರ ವೈಯಕ್ತಿಕ ಹೇಳಿಕೆ, ಅದು ಪಕ್ಷ, ಸರ್ಕಾರದ ಹೇಳಿಕೆಯೂ ಅಲ್ಲ ಎಂದರು.ಭಾರತದಲ್ಲಿ ಏಕರೂಪ ಕಾನೂನು ವ್ಯವಸ್ಥೆ, ಅಖಂಡ ಭಾರತ ಎಂಬುದು ಮಾತ್ರ ಬಿಜೆಪಿ, ಆರ್.ಎಸ್.ಎಸ್. ಸಿದ್ಧಾಂತ, ಅದಕ್ಕೂ ಸಂವಿಧಾನ ಬದಲಾವಣೆಗೂ ಯಾವುದೇ ಸಂಬಂಧವೂ ಇಲ್ಲ ಎಂದರು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಮರೆಪ್ಪ ಹೆಬ್ಬಾಳ ಮಾತನಾಡಿದರು.ಬೀದರನ ಶ್ರೀ…

Read More

ಆಲಮಟ್ಟಿ: ಅಂಚೆ ಕಚೇರಿಯು ಗ್ರಾಮೀಣ ಜನರ ಜೀವನಾಡಿಯಾಗಿದ್ದು, ಶತಮಾನಗಳಿಂದ ಗ್ರಾಮೀಣರ ಬದುಕಿನಲ್ಲಿ ಸ್ನೇಹ ಸೇತುವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವಿಜಯಪುರ ಜಿಲ್ಲಾ ಅಂಚೆ ಅಧೀಕ್ಷಕ ಜಿ.ಬಿ.ನಾಯಕ ಹೇಳಿದರು.ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಜರುಗಿದ ‘ ಅಂಚೆ ಜನ ಸಂಪರ್ಕ ಅಭಿಯಾನ ‘ ವನ್ನು ಉದ್ಘಾಟಿಸಿ ಮಾತನಾಡಿದರು.ಭಾರತ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಅಟಲ್ ಪೆನ್ ಶಿನ್ ಯೋಜನೆ, ಸಿ.ಎಸ್.ಸಿ.ಡಿಜಿಟಲ್ ಇಂಡಿಯಾ, ಆಧಾರ್, ಪಾಸ್ ಪೋರ್ಟ್ ಸೇವಾ, ಆರ್.ಪಿ.ಎಲ್.ಐ, ಪೋಸ್ಟಲ್ ಲೈಫ್ ಇನ್ಸೂರೆನ್ಸ್ ಸೇರಿದಂತೆ ಹಲವಾರು ಯೋಜನೆಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.ಮುದ್ದೇಬಿಹಾಳ ಉಪ ವಿಭಾಗದ ಅಂಚೆ ನಿರೀಕ್ಷಕಿ ಸರೋಜಾ ಇಳಕಲ್, ಅಂಚೆ ಇಲಾಖೆಯಲ್ಲಿರುವ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.ಬಿ.ಎಚ್. ಗಣಿ, ಆರ್.ಎಂ.ಜಿ.ಎಫ್. ಅಧ್ಯಕ್ಷ ನೇತಾಜಿಗಾಂಧಿ ಮಾತನಾಡಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ್ ವಂದಾಲ ಅಧ್ಯಕ್ಷತೆ ವಹಿಸಿದ್ದರು.ಬಿ.ಬಿ.ಚಂದ್ರಗಿರಿ, ಟಿ.ಎಸ್.ಬಿರಾದಾರ, ಮಹಾದೇವಪ್ಪ ಐಹೊಳೆ, ದಾನಪ್ಪ ಕುಂಬಾರ, ಸೋಮಲಿಂಗಪ್ಪ ಗಣಿ,…

Read More

ಯಡ್ರಾಮಿ: ಕಲಬುರಗಿಯ ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂತೋಷ ನವಲಗುಂದ ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ. ” ಸಗರ ಕೃಷ್ಣಾಚಾರ್ಯರ ಸಾಹಿತ್ಯ – ಸ್ವರೂಪ ಮತ್ತು ವಿಶ್ಲೇಷಣೆ ” ಎಂಬ ವಿಷಯದ ಮೇಲೆ ಪಿಎಚ್.ಡಿ. ಮಹಾಪ್ರಬಂಧ ಮಂಡಿಸಿದ್ದಕ್ಕೆ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ. ಡಾ.ಪಾಟೀಲ ಶ್ರೀಕಾಂತ ಮಾರ್ಗದರ್ಶಕರಾಗಿದ್ದರು.

Read More

ಮುದ್ದೇಬಿಹಾಳ: ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಖಾಸಗಿ ಶಾಲೆಯವರನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಿಂಬಿಸಿದ ಇಲ್ಲಿನ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಿ.ಧರಿಕಾರ ಇವರ ಧೋರಣೆಯನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ ಕೊಪ್ಪ ಹೇಳಿದರು.ತಾಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ವೇದಿಕೆಯ ಮೇಲೆ ನಿಂತು ಮಾಧ್ಯಮದ ಎದುರು ತಮ್ಮ ಆಕ್ರೋಶವನ್ನು ಅವರು ಹೊರಹಾಕಿದರು.ಸಂಪೂರ್ಣವಾಗಿ ಈ ಕಾರ್ಯಕ್ರಮವೇ ಕಾಟಾಚಾರಕ್ಕಾದಂತಾಗಿದೆ. ಸರಿಯಾದ ಟೆಂಟ್ ವ್ಯವಸ್ಥೆ ಇಲ್ಲದೇ ಮಕ್ಕಳು ಬಿಸಿಲಿನ ತಾಪಕ್ಕೆ ತಲೆ ತಿರುಗಿ ಬಿದ್ದಿದ್ದಾರೆ. ಇಲಾಖೆಗೆ ಸಾಕಷ್ಟು ಅನುದಾನ ಬಂದಿದ್ದರೂ ಅದನ್ನು ಖರ್ಚು ಮಾಡದೇ ಎತ್ತಿ ಹಾಕುವ ಹುನ್ನಾರ ಇಲ್ಲಿನ ಬಿಇಓ ಧರಿಕಾರ ಅವರು ಮಾಡಿದ್ದಾರೆ. ಖಾಸಗಿ ಶಾಲೆಯವರನ್ನು ಹಣಕಾಸಿನ ನೆರವು ಬೇಕಾದಾಗ ಮಾತ್ರ ಕರೆಯುತ್ತಾರೆ. ಆದರೆ ಈ ಕಾರ್ಯಕ್ರಮದಲ್ಲಿ ಖಾಸಗಿ ಶಾಲೆಯವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಈ ಪ್ರತಿಭಾ ಕಾರಂಜಿ…

Read More

ಬೆಂಗಳೂರು: ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಮಂಡನೆ ಮಾಡಲು ರಾಜ್ಯ ಸರಕಾರ ಮುಂದಾಗಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಬೃಹತ್‌ ಚಳವಳಿ ನಡೆಸಿದರು.ಬುಧವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ದಲಿತ ಸಂಘರ್ಷ ಸಮಿತಿ ಸದಸ್ಯರು, ರಾಜ್ಯ ಸರಕಾರ ಈ ಬಾರಿಯ ಅಧಿವೇಶನದಲ್ಲಿ ಎ.ಜೆ.ಸದಾಶಿವ ಆಯೋಗದ ವರದಿ ಮಂಡಿಸಿ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಘೋಷಣೆ ಕೂಗಿ ಆಗ್ರಹಿಸಿದರು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಸಂಸ ಸಂಸ್ಥಾಪಕ ಎನ್.ಮೂರ್ತಿ, ಎ.ಜೆ. ಸದಾಶಿವ ಆಯೋಗದ ವರದಿಯನ್ನು ಉಭಯ ಸದನಗಳಲ್ಲಿ ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು, ಅದೇ ರೀತಿ, ಕೇಂದ್ರ ಸರಕಾರ ಚಳಿಗಾಲದ ಅಧಿವೇಶನದಲ್ಲಿ ಪರಿಶಿಷ್ಟ ಒಳ ಮೀಸಲಾತಿ ಬಗ್ಗೆ ಉಷಾಮಹ ಸಮಿತಿ (2008) ನೀಡಿರುವ ವರದಿಯಂತೆ ಸಂವಿಧಾನದ ಅನುಚ್ಛೇದ 341ಕ್ಕೆ ತಿದ್ದುಪಡಿ ಮಾಡಿ ಸಂವಿಧಾನದ ಷೆಡ್ಯೂಲ್ಡ್ 9ರಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.ಇನ್ನೂ ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಪೀಠದಲ್ಲಿರುವ ವಿವಿಧ ರಾಜ್ಯಗಳ ಒಳ…

Read More

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮಾಹಿತಿ ಬೆಂಗಳೂರು: ‘ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿನ ಭ್ರಷ್ಟಾಚಾರದ ಕುರಿತು ದಾಖಲೆ ಸಹಿತ ದೂರು ಸಲ್ಲಿಸಿದ್ದೇವೆ. ನಮ್ಮ ಬಳಿ ಲಭ್ಯವಿರುವ 600ಕ್ಕೂ ಹೆಚ್ಚು ಪುಟಗಳಷ್ಟು ದಾಖಲೆಗಳನ್ನು ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಆಯೋಗಕ್ಕೆ ಹಸ್ತಾಂತರಿಸಿದ್ದೇವೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ತಿಳಿಸಿದ್ದಾರೆ.ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರಕಾರದ ಅವಧಿಯಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿತ್ತು ಎಂದು ಪ್ರಧಾನಿ ಮೋದಿ ಹಾಗೂ ಅಂದಿನ ಮುಖ್ಯಮಂತ್ರಿಗೆ ದೂರು ಸಲ್ಲಿಸಲಾಗಿತ್ತು. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ದೂರಿದರು.ಬಿಜೆಪಿ ಸರಕಾರದಲ್ಲಿ ಶೇ.40ರಷ್ಟು ಕಮಿಷನ್ ಪಡೆದಿದ್ದರ ಬಗ್ಗೆ ತನಿಖೆ ನಡೆಸುವಂತೆ ಈಗ ಕಾಂಗ್ರೆಸ್ ಸರಕಾರವು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚಿಸಿದೆ. ಈಗಿನ ಕಾಂಗ್ರೆಸ್ ಸರಕಾರದಲ್ಲಿಯೂ ಭ್ರಷ್ಟಚಾರ ನಡೆಯುತ್ತಿದೆ. ಹಾಗಾಗಿ ಈಗ ನಡೆಯುತ್ತಿರುವ ಭ್ರಷ್ಟಚಾರದ ಬಗ್ಗೆಯೂ ದೂರು ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

Read More

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸ್ಪಷ್ಠನೆ | ಚುನಾವಣಾ ಆಯೋಗದ ಪತ್ರಕ್ಕೆ ಸರಕಾರದಿಂದ ಉತ್ತರ ಬೆಂಗಳೂರು: ತೆಲಂಗಾಣದಲ್ಲಿ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ದಿನಪತ್ರಿಕೆಗಳಲ್ಲಿ ರಾಜ್ಯ ಸರ್ಕಾರದ ಕೆಲಸಗಳ ಕುರಿತು ರಾಜ್ಯ ಸರ್ಕಾರದ ಜಾಹೀರಾತುಗಳು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ. ಈ ಕುರಿತು ಚುನಾವಣಾ ಆಯೋಗದ ಪತ್ರಕ್ಕೆ ಸರಕಾರ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.ನವೆಂಬರ್ 30 ರಂದು ನಡೆಯಲಿರುವ ವಿಧಾನಸಭೆಯ ಮತದಾನಕ್ಕೆ ಮುನ್ನ ತೆಲಂಗಾಣ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ತನ್ನ ಸರ್ಕಾರದೊಂದಿಗೆ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಿ ಬಿಜೆಪಿ ಸೋಮವಾರ ಈ ವಿಚಾರದಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.ಅದೇ ದಿನ ಚುನಾವಣಾ ಆಯೋಗವು ತೆಲಂಗಾಣ ಪತ್ರಿಕೆಗಳಲ್ಲಿ ತನ್ನ ಕೆಲಸದ ಬಗ್ಗೆ ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿಲ್ಲಿಸುವಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಕೇಳಿದೆ ಮತ್ತು ಮಾದರಿ ನೀತಿ ಸಂಹಿತೆ (MCC) ಅಡಿಯಲ್ಲಿ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯದಿದ್ದಕ್ಕಾಗಿ…

Read More