ಆಲಮಟ್ಟಿ: ಕ್ರಿಸ್ತಪೂರ್ವದಿಂದಲೂ ಅಸ್ತಿತ್ವದಲ್ಲಿದ್ದ ಸನಾತನ ಧರ್ಮದಲ್ಲಿ “ಮೇಲು-ಕೀಳು’ ಎಂಬ ಕೆಟ್ಟ ವ್ಯವಸ್ಥೆ ಇತ್ತು, ಮುಂದೆ ರಾಜರ ಕಾಲದಲ್ಲಿಯೂ ಒಂದೇ ಧರ್ಮ ಪೋಷಿಸಲ್ಪಟ್ಟಿತು, ಒಟ್ಟಾರೇ ಹಿಂದಿನ ಕಾಲದಲ್ಲಿ ದಲಿತ ಜನಾಂಗಕ್ಕೆ ಅತಿ ಹೆಚ್ಚಿನ ಅನ್ಯಾಯವಾಗಿದೆ, ಪ್ರಾಣಿಗಳಿಗಿಂತಲೂ ಕಡೆಯಾಗಿದ್ದು ಸುಳ್ಳಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎಸ್.ಕೆ. ಬೆಳ್ಳುಬ್ಬಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ ಸೈನ್ಯ ಜಿಲ್ಲಾ ಸಮಿತಿ ಗುರುವಾರ ಆಲಮಟ್ಟಿಯಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಜಾಗೃತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ಎಂದೂ ಸಂವಿಧಾನದ ಬದಲಾವಣೆಯ ಚಿಂತನೆಯೂ ಮಾಡಿಲ್ಲ, ಯಾರೋ ಹೇಳಿದ್ದು, ಅದು ಅವರ ವೈಯಕ್ತಿಕ ಹೇಳಿಕೆ, ಅದು ಪಕ್ಷ, ಸರ್ಕಾರದ ಹೇಳಿಕೆಯೂ ಅಲ್ಲ ಎಂದರು.
ಭಾರತದಲ್ಲಿ ಏಕರೂಪ ಕಾನೂನು ವ್ಯವಸ್ಥೆ, ಅಖಂಡ ಭಾರತ ಎಂಬುದು ಮಾತ್ರ ಬಿಜೆಪಿ, ಆರ್.ಎಸ್.ಎಸ್. ಸಿದ್ಧಾಂತ, ಅದಕ್ಕೂ ಸಂವಿಧಾನ ಬದಲಾವಣೆಗೂ ಯಾವುದೇ ಸಂಬಂಧವೂ ಇಲ್ಲ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಮರೆಪ್ಪ ಹೆಬ್ಬಾಳ ಮಾತನಾಡಿದರು.
ಬೀದರನ ಶ್ರೀ ಭಂತೆ ವರಜ್ಯೋತಿ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವನಾಗಿ ದೇವರು ಬುದ್ಧ ವಂದನೆ ಸಲ್ಲಿಸಿದರು.
ದಲಿತ ಮುಖಂಡರಾದ ಧಾರವಾಡದ ಶಂಕ್ರಪ್ಪ ದೊಡಮನಿ, ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಪ್ರಕಾಶ ದೊಡಮನಿ, ಸಂಘಟನಾ ಸಂಚಾಲಕ ಗ್ಯಾನಪ್ಪ ಬೇವೂರ, ಮಲ್ಲು ಬಿಜ್ಜೂರ, ಉಮೇಶ ಅಲಕಪುರ, ಶ್ರೀಶೈಲ ದೊಡಮನಿ, ಯಲ್ಲಪ್ಪ ದೊಡಮನಿ, ಶಿವಾನಂದ ಚಲವಾದಿ, ಚಂದ್ರು ಚಲವಾದಿ, ಸುನಿಲ ದಾಸರ, ಶಂಕರ ಚಲವಾದಿ, ನಾಗರಾಜ ಚಲವಾದಿ, ಬಸಲಿಂಗಪ್ಪ ಚಲವಾದಿ, ಸುನಿತಾ ಹೆಬ್ಬಾಳ, ಸುಲೋಚನಾ ಹಳ್ಳದಮನಿ, ಯಲ್ಲವ್ವ ಹೆಬ್ಬಾಳ, ಮಲ್ಲಮ್ಮ ಹುಣಶ್ಯಾಳ, ರಾಜು ಅಡಿಯಾಳ, ಹಣಮವ್ವ ಆಲಮಟ್ಟಿ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

