ಆಲಮಟ್ಟಿ: ಅಂಚೆ ಕಚೇರಿಯು ಗ್ರಾಮೀಣ ಜನರ ಜೀವನಾಡಿಯಾಗಿದ್ದು, ಶತಮಾನಗಳಿಂದ ಗ್ರಾಮೀಣರ ಬದುಕಿನಲ್ಲಿ ಸ್ನೇಹ ಸೇತುವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವಿಜಯಪುರ ಜಿಲ್ಲಾ ಅಂಚೆ ಅಧೀಕ್ಷಕ ಜಿ.ಬಿ.ನಾಯಕ ಹೇಳಿದರು.
ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಜರುಗಿದ ‘ ಅಂಚೆ ಜನ ಸಂಪರ್ಕ ಅಭಿಯಾನ ‘ ವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಅಟಲ್ ಪೆನ್ ಶಿನ್ ಯೋಜನೆ, ಸಿ.ಎಸ್.ಸಿ.ಡಿಜಿಟಲ್ ಇಂಡಿಯಾ, ಆಧಾರ್, ಪಾಸ್ ಪೋರ್ಟ್ ಸೇವಾ, ಆರ್.ಪಿ.ಎಲ್.ಐ, ಪೋಸ್ಟಲ್ ಲೈಫ್ ಇನ್ಸೂರೆನ್ಸ್ ಸೇರಿದಂತೆ ಹಲವಾರು ಯೋಜನೆಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.
ಮುದ್ದೇಬಿಹಾಳ ಉಪ ವಿಭಾಗದ ಅಂಚೆ ನಿರೀಕ್ಷಕಿ ಸರೋಜಾ ಇಳಕಲ್, ಅಂಚೆ ಇಲಾಖೆಯಲ್ಲಿರುವ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಬಿ.ಎಚ್. ಗಣಿ, ಆರ್.ಎಂ.ಜಿ.ಎಫ್. ಅಧ್ಯಕ್ಷ ನೇತಾಜಿಗಾಂಧಿ ಮಾತನಾಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ್ ವಂದಾಲ ಅಧ್ಯಕ್ಷತೆ ವಹಿಸಿದ್ದರು.
ಬಿ.ಬಿ.ಚಂದ್ರಗಿರಿ, ಟಿ.ಎಸ್.ಬಿರಾದಾರ, ಮಹಾದೇವಪ್ಪ ಐಹೊಳೆ, ದಾನಪ್ಪ ಕುಂಬಾರ, ಸೋಮಲಿಂಗಪ್ಪ ಗಣಿ, ಬಸಯ್ಯ ಹಿರೇಮಠ, ಸೇನಪ್ಪ ಪೂಜಾರಿ,ಎಂ.ಟಿ.ಕೆರೂಟಗಿ, ಹನುಮಂತಪ್ಪ ಇಲಾಳ, ಸುಷ್ಮಾ ಕಡಕೋಳ, ಚಂದ್ರಶೇಖರ ಹೊಸಮನಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

