Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಗೋಲಗೇರಿ: ಇಲ್ಲಿಯ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ ೪ ರಿಂದ ೨೮ ರವರೆಗೆ ಸಿಂದಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ ಹಾಗೂ ಗೋಲಗೇರಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಎಸ್.ಬಿರಾದಾರ ಅವರ ಮಹತ್ವಾಕಾಂಕ್ಷೆಯ ಕ್ರಿಯಾಯೋಜನೆ ಅಡಿಯಲ್ಲಿ ಕನ್ನಡ ಮಾಸಾಚರಣೆ ಆಚರಿಸಲಾಯಿತು.ಶಾಲೆಯ ಕನ್ನಡ ವಿಷಯ ಬೋಧಕರಾದ ಶಿಕ್ಷಕ, ಸಾಹಿತಿ, ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ದಿನದ ಕೊನೆಯ ಅವಧಿಯಲ್ಲಿ ಕರ್ನಾಟಕ ಏಕೀಕರಣ ಹೋರಾಟಗಾರರ ಪರಿಚಯದೊಂದಿಗೆ, ಕನ್ನಡ ವ್ಯಾಕರಣ ಮಾಹಿತಿ, ಕನ್ನಡ ಅಂಕಿಗಳ ಬಳಕೆ, ಕನ್ನಡ ಸಾಹಿತಿಗಳ ಪರಿಚಯ, ಕನ್ನಡ ಸಾಹಿತ್ಯ ಪರಿಷತ್ತಿನ ಪರಿಚಯ, ಕಥೆ ಕಟ್ಟುವಿಕೆ, ಪ್ರಬಂಧ ಬರಹ, ಭಿತ್ತಿಪತ್ರ ರಚನೆ, ರಸಪ್ರಶ್ನೆ, ಗಾಯನ ಸ್ಪರ್ಧೆ ಸೇರಿದಂತೆ ಹಲವು ನಿಗದಿತ ಚಟುವಟಿಕೆಗಳನ್ನು ಏರ್ಪಡಿಸಿ ಕನ್ನಡ ಮಾಸಾಚರಣೆಯನ್ನು ಯಶಸ್ವಿಗೊಳಿಸಲಾಯಿತು.ಕನ್ನಡ ಮಾಸಾಚರಣೆ ಅಂಗವಾಗಿ ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆ, ಕಥೆ ಕಟ್ಟುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ…
Udayarashmi kannada daily newspaper
ಮೋರಟಗಿ ರೇವಣಸಿದ್ಧೇಶ್ವರ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ ಉದ್ಘಾಟನೆ ಮೋರಟಗಿ: ಅಕ್ಷರ ಜ್ಞಾನದ ಜೊತೆಯಲ್ಲಿ ಭಾರತೀಯ ಸಂಸ್ಕೃತಿ ಸಂಸ್ಕಾರ ಮುಖ್ಯ ಎಂದು ಹೇಳಿದರು.ಸ್ಥಳೀಯ ರೇವಣಸಿದ್ಧೇಶ್ವರ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೆಳೆಯುವ ಮಕ್ಕಳ ಭವಿಷ್ಯ ಬರೆಯುವುದು ಪಾಲಕರ ಕರ್ತವ್ಯ. ಎಂಎಲ್ಎ, ಎಂಪಿ, ಡಿಸಿ, ಡಾಕ್ಪರ, ಇಂಜನೀಯರ ಹೀಗೆ ಹಲವು ಕನಸುಗಳನ್ನು ಮಕ್ಕಳ ಮೂಲಕ ಬೆಳಸುವುದು ತಪ್ಪಲ್ಲ. ಜೊತೆಯಲ್ಲಿ ಸಂಸ್ಕಾರ ಕಲಿಸುವುದು ಅಷ್ಠೆ ಮುಖ್ಯ. ತಂದೆ ತಾಯಿ ಅಕ್ಕ ತಂಗಿ ಅಣ್ಣ ತಮ್ಮ ಬಂಧು ಬಳಗ ಗಂಡ ಹೆಂಡತಿ ಎಂಬ ಅನೋನ್ಯತೆಯ ಮಹತ್ವ, ದೇವಸ್ಥಾನ, ಭಕ್ತಿ, ಸಂಪ್ರದಾಯ, ಆಚಾರ, ಪದ್ಧತಿ ಮುಂದುವರೆಸುವ ಜ್ಞಾನ ತುಂಬುವ ಕರ್ತವ್ಯ ಹಿರಿಯರದ್ದು ಎಂದ ಅವರು ನಾನು ಶಾಸಕನಾಗಲು ತಾವುಗಳು ಕಾರಣ. ನಿಮ್ಮಿಂದ ನಾನು. ನನ್ನಿಂದ ಮುಂಬರುವ ದಿನ ಮಾನಗಳಲ್ಲಿ ಗ್ರಾಮದ ಅಭಿವೃದ್ದಿಯ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುವೆ ಎಂದು ಹೇಳಿದರು.ಮೋರಟಗಿ ಗ್ರಾಮದ ಬಹುದಿನಗಳ ಕನಸು ಶ್ರೀ ಸಿದ್ಧರಾಮೇಶ್ವರ ಕಲ್ಯಾಣ…
ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಅಭಿನಂದನೆ ಬೆಂಗಳೂರು: ಪತ್ರಕರ್ತರು ಸಮಾಜದ ಮತ್ತು ಸರ್ಕಾರದ ಅಂಕು-ಡೊಂಕುಗಳನ್ನು ತಿದ್ದುವವರಾಗಿದ್ದು, ವೃತ್ತಿ ಬದ್ದತೆ ಕಾಪಾಡಿಕೊಳ್ಳುವಂತೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕರೆ ನೀಡಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಅವರು ಮಾತನಾಡಿದರು.ಈ ಬಾರಿ ಸಮರ್ಥ ಪತ್ರಕರ್ತರಿಗೆ ಪ್ರಶಸ್ತಿಗಳು ಅರಸಿ ಬಂದಿರುವುದು ನಿಜಕ್ಕೂ ಶ್ಲಾಘನೀಯ. ಪತ್ರಕರ್ತರು ದಿಟ್ಟತನದಿಂದ ಕಾರ್ಯ ನಿರ್ವಹಿಸಬೇಕಾದುದು ಅತ್ಯಗತ್ಯ. ಹಾಗಾಗಿ ಸಮರ್ಥರಿಗೆ ಮನ್ನಣೆ ನೀಡಬೇಕಾದುದು ಎಲ್ಲರ ಕರ್ತವ್ಯ ಎಂದರು.ನಾನು ಸದನಕ್ಕೆ ಬಂದ ಹೊಸದರಲ್ಲಿ ಏನೇನು ತಪ್ಪು ಮಾಡಿದೆ ಎನ್ನುವುದನ್ನು ಹಿರಿಯ ಪತ್ರಕರ್ತರೇ ತಿದ್ದಿ ಹೇಳುತ್ತಿದ್ದರು. ಹಾಗಾಗಿ ಬಹಳ ಕಲಿಯಲು ಸಾಧ್ಯವಾಯಿತು. ವೃತ್ತಿಪರವಾಗಿ ಅಷ್ಟು ಪ್ರಭುದ್ಧತೆ ಪತ್ರಕರ್ತರಿಗೆ ಇರಬೇಕು ಎಂದರು.ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ವೃತ್ತಿ ಭಾಂದವರ ಬಗ್ಗೆ ತೋರುತ್ತಿರುವ ಕಾಳಜಿಯು ನಿಜಕ್ಕೂ ಸ್ತುತ್ಯಾರ್ಹ. ಪತ್ರಿಕಾ ವಿತರಕರನ್ನೂ ಸರ್ಕಾರ ಈ ಬಾರಿ ಗುರುತಿಸಿ…
ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆಗೆ ವಾಪಸ್ | ಆತಂಕಗೊಂಡ ಪೋಷಕರು | ಡಿಸಿಎಂ ಭೇಟಿ ಬೆಂಗಳೂರು: ಬೆಂಗಳೂರಿನ ಅರವತ್ತು ಖಾಸಗಿ ಶಾಲೆಗಳಿಗೆ ಶುಕ್ರವಾರ ಬೆಳಗ್ಗೆ ಬಾಂಬ್ ಬೆದರಿಕೆ ಇರುವ ಇಮೇಲ್ ಬಂದಿದ್ದು, ಸಿಬ್ಬಂದಿ ಮತ್ತು ಪೋಷಕರಲ್ಲಿ ಭಯ ಹುಟ್ಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಶಾಲಾ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಪೊಲೀಸರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣವೇ ಶಾಲೆಯ ಆವರಣದಿಂದ ಹೊರಗೆ ಕಳುಹಿಸಿ, ತೀವ್ರ ತಪಾಸಣೆ ನಡೆಸಿದರು. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಇನ್ನೂ ಪತ್ತೆಯಾಗಿಲ್ಲ ಮತ್ತು ಪ್ರಾಥಮಿಕ ತನಿಖೆಯಿಂದ ಇದು ಹುಸಿ ಬಾಂಬ್ ಸಂದೇಶ ಎಂದು ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.”ಇದುವರೆಗೆ ಬೆಂಗಳೂರಿನ 60 ಶಾಲೆಗಳಿಗೆ ಬಾಂಬ್ ಬೆದರಿಕೆಯ ಬಗ್ಗೆ ಇಮೇಲ್ ಬಂದಿದೆ. ಬಾಂಬ್ ಬೆದರಿಕೆಯ ಬಗ್ಗೆ ಇಮೇಲ್ ಐಡಿಯಿಂದ ಸಂದೇಶವನ್ನು ಸ್ವೀಕರಿಸಲಾಗಿದೆ. ಶೋಧ ಕಾರ್ಯಾಚರಣೆ ಬಹುತೇಕ ಮುಗಿದಿದೆ ಮತ್ತು ಇಲ್ಲಿಯವರೆಗೆ, ನಮ್ಮ ತಂಡಗಳಿಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇದು…
ವಿಜಯಪುರ: ದೇಶದಲ್ಲಿ ಇದೇ ಮೊದಲ ಬಾರಿಗೆ ಚರ್ಮರೋಗ ತಜ್ಞರಿಗೆ ಲೇಸರಗಳ ನಿರಂತರ ತರಬೇತಿ ಮತ್ತು ಫೆಲೋಶಿಪ್ ಪ್ರೋಗ್ರಾಂ ಆಯೋಜಿಸುವ ಇಟಲಿಯ ಸಹಭಾಗಿತ್ವದ ಅಕಾಡೆಮಿಯೊಂದು ಬಸವ ನಾಡು ವಿಜಯಪುರದಲ್ಲಿ ಡಿಸೆಂಬರ್ 3 ರಂದು ಬಿ. ಎಲ್. ಡಿ. ಇ ಆಸ್ಪತ್ರೆಯಲ್ಲಿ ಆರಂಭವಾಗಲಿದೆ.ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ- ಡೆಕಾ ಲೇಸರ್ ಅಕಾಡೆಮಿ ಉದ್ಘಾಟನೆ ಕಾರ್ಯಕ್ರಮ ಕಾರ್ಯಕ್ರಮ ಡಿಸೆಂಬರ್ 3ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಬಿ.ಎಲ್.ಡಿ.ಇ ಆಸ್ಪತ್ರೆಯ ಹೊಸ ಟ್ರಾಮಾ ಸೆಂಟರ್ ನಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೋಳ್ಳಲಿದ್ದಾರೆ.ಇಟಲಿಯ ಎಲ್ ಎನ್ ಸ್ಪಾ(ಲೇಸರ್) ಗ್ರುಪ್ ಪ್ರಧಾನ ವ್ಯವಸ್ಥಾಪಕ ಡಾ. ಪಾಲೊ ಸಾಲ್ವೆಡೊ, ವಿವಿಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಸಿ. ಇನಾಮದಾರ, ಪ್ರಾಚಾರ್ಯ ಡಾ. ಅರವಿಂದ ವಿ. ಪಾಟೀಲ, ಕುಲಸಚಿವ…
ಸಚಿವ ಎಂ. ಬಿ. ಪಾಟೀಲ ಪುತ್ರ ಹಾಗೂ ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಬಸನಗೌಡರ ವಿವಾಹ ಆರತಕ್ಷತೆ ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಮತ್ತು ಆಶಾ ಎಂ. ಪಾಟೀಲ ದಂಪತಿಯ ಹಿರಿಯ ಪುತ್ರ ಹಾಗೂ ಬಿ.ಎಲ್.ಡಿ.ಇ ಸಂಸ್ಥೆ ನಿರ್ದೇಶಕ ಬಸನಗೌಡ ಪಾಟೀಲ ಹಾಗೂ ಹಿರಿಯ ಶಾಸಕ ಡಾ. ಶ್ಯಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳಾದ ಅಖಿಲಾ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮ ನಾಡಿನ ನಾನಾ ಕಡೆಗಳಿಂದ ಆಗಮಿಸಿದ್ದ ಸುಮಾರು 250 ಸ್ವಾಮೀಜಿಗಳ ಸಾನಿಧ್ಯದಲ್ಲಿ ಇಂದು ಶುಕ್ರವಾರ ನಗರದಲ್ಲಿ ನಡೆಯಿತು.ಗದಗ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮೀಜಿಗಳು, ಕಾಶಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಮೋಟಗಿ ಡಾ.…
ಕಲಕೇರಿ: ಈಗಿನ ಯುವ ಜನತೆ ಹಾಗೂ ಸಮುದಾಯಗಳು ಸರ್ಕಾರದ ಜೊತೆ ಕೈಜೋಡಿಸಿದರೆ ಹೆಚ್.ಐ.ವಿ ಏಡ್ಸ್ ರೋಗವನ್ನು ಇಡೀ ವಿಶ್ವದಿಂದ ತೊಲಗಿಸಬಹುದು ಇದರ ಬಗ್ಗೆ ಯುವಕರು ಅರಿಯುಕೊಳ್ಳಬೇಕು ಸರ್ಕಾರ ಇದರ ಜಾಗೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ವೈದ್ಯರಾದ ನವೀನ ಶಂಕರ ಅವರು ಮಾತನಾಡಿದರುಏ.ಕೆ ಸಿರಸಗಿ ಪಿ.ಯು ವಿಜ್ಞಾನ ಹಾಗೂ ಆಲಮೀನ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಏಡ್ಸ್ ಜಾಗೃತಿಯ ಕುರಿತು ವಿವಿಧ ಘೋಷಣೆಗಳನ್ನು ಕೂಗುತ್ತಾ ಜಾತಾ ಹಮ್ಮಿಕೊಂಡು ನಂತರದಲ್ಲಿ ಸಿರಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಕ್ರಮ ಜರುಗಿತುಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಜಹಾಂಗೀರ ಸಿರಸಗಿ, ವೈಧ್ಯಾಧಿಕಾರಿಗಳಾದ ನವೀನ ಶಂಕರ ಹಾಗೂ ಅತಿಥಿಗಳಾಗಿ ಪ್ರಾಚಾರ್ಯರಾದ ಶಿವಾನಂದ ಸಜ್ಜನ, ಎಂ.ಜಿ.ಮೊಮಿನ ಹಾಗೂ ರೇಷ್ಮಾ ಮುಜಾವರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಡಿ ಮೊತಿಬಾಯಿ, ಆಪ್ತ ಸಮಾಲೋಚಕರದ…
ವಿಜಯಪುರ: ವಿಜಯಪುರ ರೇಲ್ವೆ ಪೋಲಿಸ್ ಠಾಣೆಯಲ್ಲಿ ಅಂದಾಜು ೫೫ ವರ್ಷ ವಯಸ್ಸಿನ ಅಪರಿಚಿತ ಮೃತ ವ್ಯಕ್ತಿ ಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಈ ಅಪರಿಚಿತ ವ್ಯಕ್ತಿಯ ವಾರಸುದಾರರ ಪತ್ತೆಗೆ ರೈಲ್ವೆ ಪೋಲಿಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಮೃತ ವ್ಯಕ್ತಿಯ ಅಂದಾಜು ೫೦ ರಿಂದ ೫೫ ವರ್ಷ ವಯಸ್ಸಿನವಾಗಿದ್ದು, ೫.೫ಅಡಿ ಎತ್ರ, ಸಾದಾಗಪ್ಪು ಮೈಬಣ್ಣ, ದಪ್ಪನೆಯ ಮೈಕಟ್ಟು, ಕೋಲು ಮುಖ, ಮೊಂಡ ಮೂಗು, ತಲೆಯಲ್ಲಿ ೧.೨ ಇಂಚ್ ಬಿಳಿ ಕಪ್ಪು ಕೂದಲು, ಬಿಳಿ ಕಪ್ಪು ಬಣ್ಣದ ದಾಡಿ, ಮೀಸೆವುಳ್ಳವನಾಗಿರುತ್ತಾನೆ. ಕಿವಿಯ ಅಲೆತಗಳು ತೂತು ಇದೆ. ಮೈಮೇಲೆ ಬೂದು ಬಣ್ಣದ ತೋಳಿನ ಜಾಕೆಟ್, ಕ್ರಿಮ್ ಕಲರ್ ರೆಡಿಮೇಡ್ ಪ್ಯಾಂಟ್, ಚಾಕಲೇಟ್ ಬಣ್ಣದ ಕೆಂಪು ಡಿಸೈನ್‌ವುಳ್ಳ ಬರಮೋಡಾ, ಕೊರಳಲ್ಲಿ ಕಪ್ಪು ದಾರ, ಸೊಂಟದಲ್ಲಿ ಕಪ್ಪುದಾರದ ಉಡದಾರ, ಸ್ಯಾಂಡಲ್ ಚಪ್ಪಲಿಗಳು ಧರಿಸಿದ್ದಾನೆ.ಈ ಚಹರೆಪಟ್ಟಿಯುಳ್ಳ ವ್ಯಕ್ತಿ ಬಗ್ಗೆ ಅಥವಾ ವಾರಸುದಾರರ ಕುರಿತು ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಆರಕ್ಷಕ ಉಪ ನಿರೀಕ್ಷಕರು ರೇಲ್ವೆ ಪೋಲಿಸ್ ಠಾಣೆ ವಿಜಯಪುರ ೦೮೩೫೨-೨೫೦೮೮೩, ಅಥವಾ…
ವಿಜಯಪುರ: ಪ್ರಸಕ್ತ ಸಾಲಿನಲ್ಲಿ ೧ ರಿಂದ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ : ೦೮-೧೨-೨೦೨೩ರವರೆಗೆ ವಿಸ್ತರಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.ಅರ್ಹ ಅಭ್ಯರ್ಥಿಗಳು ಮೆಟ್ರಿಕ್ ಪೂರ್ವ ಆನ್‌ಲೈನ್ ವೆಬ್‌ಸೈಟ್ https://ssp.karnataka.gov.in ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ https://dom.karnataka.gov.in ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.
