ವಿಜಯಪುರ: ದೇಶದಲ್ಲಿ ಇದೇ ಮೊದಲ ಬಾರಿಗೆ ಚರ್ಮರೋಗ ತಜ್ಞರಿಗೆ ಲೇಸರಗಳ ನಿರಂತರ ತರಬೇತಿ ಮತ್ತು ಫೆಲೋಶಿಪ್ ಪ್ರೋಗ್ರಾಂ ಆಯೋಜಿಸುವ ಇಟಲಿಯ ಸಹಭಾಗಿತ್ವದ ಅಕಾಡೆಮಿಯೊಂದು ಬಸವ ನಾಡು ವಿಜಯಪುರದಲ್ಲಿ ಡಿಸೆಂಬರ್ 3 ರಂದು ಬಿ. ಎಲ್. ಡಿ. ಇ ಆಸ್ಪತ್ರೆಯಲ್ಲಿ ಆರಂಭವಾಗಲಿದೆ.
ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ- ಡೆಕಾ ಲೇಸರ್ ಅಕಾಡೆಮಿ ಉದ್ಘಾಟನೆ ಕಾರ್ಯಕ್ರಮ ಕಾರ್ಯಕ್ರಮ ಡಿಸೆಂಬರ್ 3ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಬಿ.ಎಲ್.ಡಿ.ಇ ಆಸ್ಪತ್ರೆಯ ಹೊಸ ಟ್ರಾಮಾ ಸೆಂಟರ್ ನಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೋಳ್ಳಲಿದ್ದಾರೆ.
ಇಟಲಿಯ ಎಲ್ ಎನ್ ಸ್ಪಾ(ಲೇಸರ್) ಗ್ರುಪ್ ಪ್ರಧಾನ ವ್ಯವಸ್ಥಾಪಕ ಡಾ. ಪಾಲೊ ಸಾಲ್ವೆಡೊ, ವಿವಿಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಸಿ. ಇನಾಮದಾರ, ಪ್ರಾಚಾರ್ಯ ಡಾ. ಅರವಿಂದ ವಿ. ಪಾಟೀಲ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಪಾಲ್ಗೋಳ್ಳಲಿದ್ದಾರೆ. ಬಿ. ಎಲ್.ಡಿ.ಇ ಡೀಮ್ಡ್ ವಿವಿಯ ಚರ್ಮರೋಗ ವಿಭಾಗದ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಕೇಶವಮೂರ್ತಿ ಆದ್ಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಲೇಸರ ಅಕಾಡೆಮಿಯ ಸ್ಥಾಪನೆಯಿಂದ ಭಾರತದ ಚರ್ಮ ರೋಗ ತಜ್ಞರಿಗೆ ಇಟಲಿಯ ಸಹಯೋಗದಲ್ಲಿ ಲೇಸರಗಳ ನಿರಂತರ ತರಬೇತಿ ನೀಡಲು ಅನುಕೂಲವಾಗಲಿದೆ. ಅಲ್ಲದೇ, ಚರ್ಮರೋಗ ಕ್ಷೇತ್ರದಲ್ಲಿ ನಡೆಯುವ ಹೊಸ ಹೊಸ ಆವಿಷ್ಕಾರಗಳು ಬಗ್ಗೆಯೂ ಮಾಹಿತಿ ವಿನಿಮಯ ನಡೆಯಲಿದೆ. ಜೊತೆಗೆ ಈ ಅಕಾಡೆಮಿಯ ಅಡಿಯಲ್ಲಿ ಲೇಸರ ವಿಷಯದಲ್ಲಿ ಫೇಲೋಶಿಪ ಪ್ರೋಗ್ರಾಂ ನಡೆಸಲು ಇದರಿಂದ ಅನುಕೂಲವಾಗಲಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
