ಕಲಕೇರಿ: ಈಗಿನ ಯುವ ಜನತೆ ಹಾಗೂ ಸಮುದಾಯಗಳು ಸರ್ಕಾರದ ಜೊತೆ ಕೈಜೋಡಿಸಿದರೆ ಹೆಚ್.ಐ.ವಿ ಏಡ್ಸ್ ರೋಗವನ್ನು ಇಡೀ ವಿಶ್ವದಿಂದ ತೊಲಗಿಸಬಹುದು ಇದರ ಬಗ್ಗೆ ಯುವಕರು ಅರಿಯುಕೊಳ್ಳಬೇಕು ಸರ್ಕಾರ ಇದರ ಜಾಗೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ವೈದ್ಯರಾದ ನವೀನ ಶಂಕರ ಅವರು ಮಾತನಾಡಿದರು
ಏ.ಕೆ ಸಿರಸಗಿ ಪಿ.ಯು ವಿಜ್ಞಾನ ಹಾಗೂ ಆಲಮೀನ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಏಡ್ಸ್ ಜಾಗೃತಿಯ ಕುರಿತು ವಿವಿಧ ಘೋಷಣೆಗಳನ್ನು ಕೂಗುತ್ತಾ ಜಾತಾ ಹಮ್ಮಿಕೊಂಡು ನಂತರದಲ್ಲಿ ಸಿರಸಗಿ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಕ್ರಮ ಜರುಗಿತು
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಜಹಾಂಗೀರ ಸಿರಸಗಿ, ವೈಧ್ಯಾಧಿಕಾರಿಗಳಾದ ನವೀನ ಶಂಕರ ಹಾಗೂ ಅತಿಥಿಗಳಾಗಿ ಪ್ರಾಚಾರ್ಯರಾದ ಶಿವಾನಂದ ಸಜ್ಜನ, ಎಂ.ಜಿ.ಮೊಮಿನ ಹಾಗೂ ರೇಷ್ಮಾ ಮುಜಾವರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಡಿ ಮೊತಿಬಾಯಿ, ಆಪ್ತ ಸಮಾಲೋಚಕರದ ಸಂತೋಷ ಟೆಂಗಳಿ, ಎಸ್.ಬಿ.ಜೇವೂರ ಭಾಗವಹಿಸಿ ಏಡ್ಸ್ ಕುರಿತು ವಿಸ್ತಾರವಾಗಿ ಮಾತನಾಡಿದರು
ಈ ವೇಳೆ ಆರೋಗ್ಯ ಇಲಾಖೆಯ ಫಾರೂಕ್ ವಲ್ಲಿಬಾಯಿ, ಸಿದ್ದು ಬ್ಯಾಲ್ಯಾಳ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿವರ್ಗ, ಆಶಾ ಕಾರ್ಯಕರ್ತೆಯರು, ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

