ವಿಜಯಪುರ: ವಿಜಯಪುರ ರೇಲ್ವೆ ಪೋಲಿಸ್ ಠಾಣೆಯಲ್ಲಿ ಅಂದಾಜು ೫೫ ವರ್ಷ ವಯಸ್ಸಿನ ಅಪರಿಚಿತ ಮೃತ ವ್ಯಕ್ತಿ ಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಈ ಅಪರಿಚಿತ ವ್ಯಕ್ತಿಯ ವಾರಸುದಾರರ ಪತ್ತೆಗೆ ರೈಲ್ವೆ ಪೋಲಿಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೃತ ವ್ಯಕ್ತಿಯ ಅಂದಾಜು ೫೦ ರಿಂದ ೫೫ ವರ್ಷ ವಯಸ್ಸಿನವಾಗಿದ್ದು, ೫.೫ಅಡಿ ಎತ್ರ, ಸಾದಾಗಪ್ಪು ಮೈಬಣ್ಣ, ದಪ್ಪನೆಯ ಮೈಕಟ್ಟು, ಕೋಲು ಮುಖ, ಮೊಂಡ ಮೂಗು, ತಲೆಯಲ್ಲಿ ೧.೨ ಇಂಚ್ ಬಿಳಿ ಕಪ್ಪು ಕೂದಲು, ಬಿಳಿ ಕಪ್ಪು ಬಣ್ಣದ ದಾಡಿ, ಮೀಸೆವುಳ್ಳವನಾಗಿರುತ್ತಾನೆ. ಕಿವಿಯ ಅಲೆತಗಳು ತೂತು ಇದೆ. ಮೈಮೇಲೆ ಬೂದು ಬಣ್ಣದ ತೋಳಿನ ಜಾಕೆಟ್, ಕ್ರಿಮ್ ಕಲರ್ ರೆಡಿಮೇಡ್ ಪ್ಯಾಂಟ್, ಚಾಕಲೇಟ್ ಬಣ್ಣದ ಕೆಂಪು ಡಿಸೈನ್‌ವುಳ್ಳ ಬರಮೋಡಾ, ಕೊರಳಲ್ಲಿ ಕಪ್ಪು ದಾರ, ಸೊಂಟದಲ್ಲಿ ಕಪ್ಪುದಾರದ ಉಡದಾರ, ಸ್ಯಾಂಡಲ್ ಚಪ್ಪಲಿಗಳು ಧರಿಸಿದ್ದಾನೆ.ಈ ಚಹರೆಪಟ್ಟಿಯುಳ್ಳ ವ್ಯಕ್ತಿ ಬಗ್ಗೆ ಅಥವಾ ವಾರಸುದಾರರ ಕುರಿತು ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಆರಕ್ಷಕ ಉಪ ನಿರೀಕ್ಷಕರು ರೇಲ್ವೆ ಪೋಲಿಸ್ ಠಾಣೆ ವಿಜಯಪುರ ೦೮೩೫೨-೨೫೦೮೮೩, ಅಥವಾ ರೇಲ್ವೆ ಪೋಲಿಸ್ ಕಂಟ್ರೋಲ್ ರೂಂ.೦೮೦-೨೨೮೭೧೨೯೧ ಗೆ ಮಾಹಿತಿ ಒದಗಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

