Author: editor.udayarashmi@gmail.com

ಸಿಂದಗಿ: ಪಟ್ಟಣದ ದೇವತೆ ನೀಲಂಗಾದೇವಿಯ ಪಲ್ಲಕ್ಕಿಯು ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಸಾವಿರಾರು ಭಕ್ತರು ದಿಂಡರಕಿಗೈದರು. ಪಲ್ಲಕ್ಕಿ ಮಹೋತ್ಸವ ದೇವಸ್ಥಾನದಿಂದ ಹಳೆ ಬಜಾರ್ ರಸ್ತೆಯ ಮಾರ್ಗವಾಗಿ ಸ್ಥಳೀಯ ಶ್ರೀ ಬಸವಣ್ಣ ದೇವರ ಗುಡಿಗೆ ಸಾಗಿ ಬಂತು. ಮಾರ್ಗ ಮಧ್ಯದಲ್ಲಿ ಅನೇಕ ಮುತ್ತೈದರು, ಭಕ್ತರು ಆರತಿ ಬೆಳಗಿ ಆಶೀರ್ವಾದ ಪಡೆದುಕೊಂಡರು.ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾದೇವಿ ಜಾತ್ರೆಯು ರವಿವಾರ ಅತ್ಯಂತ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಜರುಗಿತು.ಗೌರಿ ಹುಣ್ಣಿಮೆಯಿಂದ ಪ್ರಾರಂಭವಾದ ನೂರಾರು ಭಕ್ತರ ನಿರಹಾರ ಸೇವೆ ಪಲ್ಲಕ್ಕಿ ದೇವಸ್ಥಾನಕ್ಕೆ ಮರಳಿ ಬಂದ ನಂತರ ಮುಕ್ತಾಯಗೊಳಿಸಿದರು. ಪಲ್ಲಕ್ಕಿಗೆ ಮಾಡಿದ ವಿವಿಧ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು. ಜಾತ್ರೆಯಲ್ಲಿ ಪುರವಂತರ ಸೇವೆ, ನಂದಿಕೋಲು ಸೇವೆ, ಡೊಳ್ಳು ಕುಣಿತ, ಸನಾದಿ, ಮ್ಯೂಸಿಕಲ್ ಬ್ರಾಂಡ್ ಸೇರಿದಂತೆ ವಿವಿಧ ವಾದ್ಯಗಳು ಕಂಡುಬಂದವು.ಜಾತ್ರಾ ನೇತೃತ್ವವನ್ನು ಧರ್ಮದರ್ಶಿ ಸುನೀಲ ಶಿರೂಗೌಡ ದೇವರಮನಿ ವಹಿಸಿದ್ದರು. ಜಾತ್ರಾ ಮೆರವಣಿಗೆಯಲ್ಲಿ ಅಶೋಕಗೌಡ ದೇವರಮನೆ, ಅಶೋಕ ವಾರದ, ನೀಲಪ್ಪಗೌಡ ಬಿರಾದಾರ, ಗುಂಡಪ್ಪ ಪಡ ಗನೂರ, ದುಂಡಪ್ಪ ಸೊನ್ನದ, ಉಮೇಶ ಪಟ್ಟಣಶೆಟ್ಟಿ,…

Read More

ವಿವಿಧ ಸಂಘ-ಸಂಸ್ಥೆಗಳ ಸಭೆಯಲ್ಲಿ ಸಚಿವ ಡಾ. ಎಂ.ಬಿ.ಪಾಟೀಲ ಮನವಿ ವಿಜಯಪುರ: ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ವಿಜಯಪುರದಲ್ಲಿ ಡಿ.೨೪ರಂದು ಹಮ್ಮಿಕೊಂಡ ವೃಕ್ಷೋತ್ಥಾನ ಹೆರಿಟೇಜ್ ರನ್ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಾಯ-ಸಹಕಾರದೊಂದಿಗೆ ಯಶಸ್ವಿಯಾಗಿ ಆಯೋಜಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ಡಾ.ಎಂ.ಬಿ.ಪಾಟೀಲ ಹೇಳಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರವಿವಾರ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಸಭೆ ನಡೆಸಿದ ಅವರು, ಅರಣ್ಯೀಕರಣ ಅಭಿವೃದ್ಧಿಪಡಿಸುವುದರ ಜೊತೆಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವವಹನ್ನು ಸಾರುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ವೃಕ್ಷೋಥಾನ್ ಹೆರಿಟೇಜ್ ರನ್-೨೦೨೩ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ಯ ಅಗತ್ಯವಾಗಿದ್ದು, ವಿವಿಧ ಸಂಘ-ಸಂಸ್ಥೆಗಳು ತಮ್ಮ ಸಾಮಾಜಿಕ ಜವಾಬ್ದಾರಿಯಿಂದ ಹೆರಿಟೇಜ್ ರನ್ ಆಯೋಜನೆಗೆ ಕೈ ಜೋಡಿಸಬೇಕು. ಈ ಹೆರಿಟೇಜ್ ರನ್ ಸಿದ್ದೇಶ್ವರ ಶ್ರೀಗಳಿಗೆ ಸಮರ್ಪಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಈ ಓಟದಲ್ಲಿ ನಾನು ಭಾಗವಹಿಸುತ್ತಿದ್ದು,…

Read More

ವಿಜಯಪುರ: ಔರಾದ್ಕರ್ ವರದಿಯನ್ನು ಅನುಷ್ಠಾನಗೊಳಿಸಿ ರಾಜ್ಯದ ಆರಕ್ಷಕರ (ಪೊಲೀಸರ) ಪಿಂಚಣಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಇಂದು ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಘಟಕ ಬೆಂಗಳೂರು ವತಿಯಿಂದ ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ ಹಾಗೂ ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರು ಇವರಿಗೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದ ಆರಕ್ಷಕರ (ಪೊಲೀಸರ) ಹಾಗೂ ಅವರ ಮೇಲಾಧಿಕಾರಿಗಳ ಮಾಸಿಕ ಪಿಂಚಣಿ ಹೆಚ್ಚಿಸಲು ಹಿಂದಿನ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾಗಿದ್ದ ಔರಾದಕರ್ ವರದಿಯನ್ನು ಅನುಷ್ಠಾನಗೊಳಿಸಿ ರಾಜ್ಯದ ಪೊಲೀಸರಿಗೆ ಹಾಗೂ ಅವರ ಮೇಲಾಧಿಕಾರಿಗಳ ನೆರವಿಗೆ ಧಾವಿಸಬೇಕಿದೆ. ರಾಜ್ಯದ ವಿವಿಧ ಸರಕಾರಿ ನೌಕರಸ್ಥರಿಗೆ ಹಾಗೂ ಪೊಲೀಸ್ ಇಲಾಖೆಯವರ ಪಿಂಚಣಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ರಾಜ್ಯದ ಪೊಲೀಸ್ ಇಲಾಖೆಯವರಿಗೆ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವ ರಾಜ್ಯದ ಪೊಲೀಸರು ಹಗಲು-ರಾತ್ರಿ ಎನ್ನದೇ ಮಳೆ,ಗಾಳಿ,ಚಳಿ ಎನ್ನದೇ ತಮ್ಮ ಜೀವದ ಹಂಗು ತೊರೆದು ಜನರನ್ನು ರಕ್ಷೆ ಮಾಡಲು ಮುಂದುಗುತ್ತಾರೆ. ಅಂತವರಿಗೆ…

Read More

ಮುದ್ದೇಬಿಹಾಳ: ಮಾಹಿತಿ ಹಕ್ಕು ಅಧಿನಿಯಮದ ಅಡಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಪ್ರಭಾರ ಬಿಇಓ ಯು.ಬಿ.ಧರಿಕಾರ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನಾಲ್ಕು ಜನರ ಮೇಲೆ ನ್ಯಾಯವಾದಿ ವಿರೇಶ ಹಿರೇಮಠ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.ವಿರೇಶ ಕಳೆದ ದಿನಗಳ ಹಿಂದೆ ಕೆಲವು ಮಾಹಿತಿಗಳನ್ನು ಕೋರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯಕ್ಕೆ ಮಾಹಿತಿ ಹಕ್ಕು ಅಧಿನಿಯಮ ೨೦೦೫ ರ ಅಡಿ ಅರ್ಜಿ ಸಲ್ಲಿಸಿದ್ದು ಆ ಅರ್ಜಿಗೆ ಕೋರಲಾದ ದಾಖಲೆಗಳು ಇಟ್ಟಿರುವ ಕೊಠಡಿ ಮಳೆಯಿಂದ ಮೇಲ್ಛಾವಣಿ ಶಿಥಿಲಗೊಂದು ಸಾಕಷ್ಟು ಪ್ರಮಾಣದಲ್ಲಿ ಮಳೆ ನೀರು ಸೋರಿಕೆಯಾದ ಕಾರಣ ದಾಖಲೆಗಳು ನಾಶವಾಗಿವೆ ಎಂದು ಲಿಖಿತವಾಗಿ ಹಿಂಬರಹ ನೀಡಿದ್ದು ಇದು ಉದ್ದೇಶ ಪೂರ್ವಕವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ನಿರ್ಗಮಿತ ಬಿಇಓ ಎಸ್.ಜೆ.ನಾಯಕ, ಪತ್ರಾಂಕಿತ ವ್ಯವಸ್ಥಾಪಕ ಬಿ.ಎಸ್.ಪಾಟೀಲ, ಕೇಸ್ ವರ್ಕರ್ ಸಿದ್ದನಗೌಡ ಪಾಟೀಲ ಮೇಲೆ ಪ್ರಕರಣ ದಾಖಲಿಸಿದ್ದಾರೆ.

Read More

ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ-೫೦ರ ಅಂಗವಾಗಿ ನಗರದ ವಿವೇಕನಗರದಲ್ಲಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಡಿ.೬ ರಂದು ಚಿಗುರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಚಿಗುರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು.ಸುಮಯ್ಯಾ ಶೇಖ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ನಾಟ್ಯ ಕಲಾ ಅಕಾಡೆಮಿ ವತಿಯಿಂದ ಸಮೂಹ ನೃತ್ಯ, ಕು.ನಿಜಬಾಯಿ ಹೋಸಾಳಿ ಏಕತಾಪ್ರಾಭಿನಯ, ಕು.ಲಕ್ಷ್ಮೀ ಮುರನಕೇರಿ ಅವರಿಂದ ಜಾನಪದ ಗೀತೆಗಳು ಹಾಗೂ ಕು.ಸಮರ್ಥ ಸಂಕೊಂಡ ಮತ್ತು ಸಂಗಡಿಗರಿಂದ ನಲಿ-ಕಲಿ ನಾಟಕ ಪ್ರದರ್ಶನ ಜರುಗಲಿವೆ.ಅಂದು ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ. ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್.ಪಾಟೀಲ(ಯತ್ನಾಳ) ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-೨ ಪ್ರಕಾಶ ಹುಕ್ಕೇರಿ, ಸಂಸದ…

Read More

ವಿಜಯಪುರ: ೧೧೦/೧೧ ಕೆವಿ ಚಾಂದಕವಟೆ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ಈಗಿರುವ ೧೧೦ ಎಂ.ವಿ.ಎ ಶಕ್ತಿ ಪರಿವರ್ತಕ ಬದಲು ೧೨೦ ಎಂ.ವಿ.ಎ ಶಕ್ತಿ ಪರಿವರ್ತಕ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ದಿನಾಂಕ: ೦೬-೧೨-೨೦೨೩ರ ಬೆಳಿಗ್ಗೆ ೭.೦೦ ಗಂಟೆಯಿಂದ ದಿನಾಂಕ:೦೮.೧೨.೨೦೨೩ರ ಸಂಜೆ ೭:೦೦ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ೧೧ ಕೆವಿ ಮಾರ್ಗದ ಮೇಲೆ ಬರುವ ಎಲ್ಲಾ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಇಂಡಿ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಪಶು ಸಖಿ ತರಬೇತಿ ಕಾರ್ಯಾಗಾರದಲ್ಲಿ ಜಿಪಂ ಸಿಇಓ ರಾಹುಲ್ ಶಿಂಧೆ ಸಲಹೆ ವಿಜಯಪುರ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಡೇ-ಎನ್‌ಆರ್‌ಎಲ್‌ಎಂ) ಹಾಗೂ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವಿಜಯಪುರ ಇವರುಗಳ ಸಹಯೋಗದೊಂದಿಗೆ ರುಡಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ೦೬ ದಿನಗಳ ಮೊದಲನೇ ಮಾಡ್ಯೂಲ್ ಪಶು ಸಖಿಯರ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು “೦೬ ದಿನಗಳ ಈ ಒಂದು ಪಶು ಸಖಿಯರ ತರಬೇತಿ ಕಾರ್ಯಾಗಾರವು ಬಹಳ ಉಪಯುಕ್ತವಾದ ತರಬೇತಿಯಾಗಿದೆ. ಈಗಾಗಲೇ ಕಳೆದ ಒಂದು ವರ್ಷದಿಂದ ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳ ಪಶು ಚಿಕಿತ್ಸಾಲಯಗಳಲ್ಲಿ ಎಲ್ಲ ಪಶು ಸಖಿಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಪಂಚಾಯತ ವಿಜಯಪುರದಿಂದ ಈಗಾಗಲೇ ಒಂದು ವರ್ಷದ ಪಶು ಸಖಿಯರ ಗೌರವಧನವನ್ನು ಪಾವತಿಸಲಾಗಿದೆ. ಪಶು ಸಖಿಯರು ತರಬೇತಿಯಲ್ಲಿ ಕಲಿಯುವ ವಿಷಯಗಳನ್ನು ತಮ್ಮ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಎಲ್ಲ ರೈತ್ತರನ್ನು ಸಂಘಟಿಸುವುದು ನಿಮ್ಮ ಕಾರ್ಯವಾಗಬೇಕು.…

Read More

ಮುದ್ದೇಬಿಹಾಳ: ತಾಳಿಕೋಟೆ ತಾಲೂಕಿನ ಬಿಳೇಭಾವಿ ಗ್ರಾಮದಿಂದ ಬೊಮ್ಮನಹಳ್ಳಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಕರೆದೊಯ್ಯುವಾಗ ವಾಹನ ಅಪಘಾತವಾಗಿ ಓರ್ವ ಬಾಲಕಿ ಮೃತಪಟ್ಟು ಸುಮಾರು ೧೨ ಮಕ್ಕಳು ತೀವ್ರವಾಗಿ ಗಾಯಗೊಂಡ ಘಟನೆಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ವಿಷಾದ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಘಟನೆ ಕುರಿತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ವರದಿ ನೀಡಲು ದೂರವಾಣಿ ಮೂಲಕ ತಿಳಿಸಿದ್ದಾಗಿ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಗಳನ್ನುಇಲಾಖೆ ವೇತನಾನುದಾನಕ್ಕೆ ಒಳಪಡಿಸಲು ಪೂರ್ವಭಾವಿ ಪರಿವೀಕ್ಷಣೆ ಕೈಗೊಂಡಿದ್ದರೂ ಸರ್ಕಾರ ವೇತನಾನುದಾನ ನೀಡಲು ಮೀನಾಮೇಷ ಎಣಿಸುತ್ತಿರುವುದು ಖಂಡನೀಯವಾಗಿದೆ. ಈ ಕುರಿತು ಡಿ೬ ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುತ್ತಿದ್ದು ರಾಜ್ಯದ ಎಲ್ಲ ಖಾಸಗಿ ಐಟಿಐಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಹಾಗೂ ನೌಕರರು ಭಾಗಿಯಾಗುವಂತೆ ಕರ್ನಾಟಕ ರಾಜ್ಯ ಖಾಸಗಿ ಐಟಿಐಗಳ ಸಂಘದ ರಾಜ್ಯಾಧ್ಯಕ್ಷ ಎಸ್.ಎಂ.ನೆರಬೆಂಚಿ ಮನವಿ ಮಾಡಿಕೊಂಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಐಟಿಐ ತರಬೇತಿಗೆ ಬಡವರ್ಗದ ಮಕ್ಕಳು ಬರುವುದರಿಂದ ಅವರಿಂದ ಬರುವಂಥ ಶುಲ್ಕಗಳಿಂದ ಸಿಬ್ಬಂದಿಗೆ ಸರ್ಕಾರ ನಿಗದಿಪಡಿಸಿದ ಸೂಕ್ತ ಗೌರವಧನ ಕೊಡಲು ಸಹ ಆಗುವುದಿಲ್ಲ. ಹಾಗಾಗಿ ಸರ್ಕಾರದ ಸಹಾಯಾನುದಾನದ ಅಗತ್ಯವಿದೆ. ಇದನ್ನು ಮನಗಂಡು ಹಿಂದಿನ ಸರ್ಕಾರಗಳು ೧೯೯೭ರಲ್ಲಿಯೇ ವೇತನ ಅನುದಾನ ಸಂಹಿತೆ ಜಾರಿಗೆ ತಂದಿದ್ದು ಅದರಂತೆ ೭ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಐಟಿಐಗಳಿಗೆ ವೇತನಾನುದಾನ ಕೊಡುತ್ತ ಬಂದಿವೆ. ಈಗಾಗಲೇ ರಾಜ್ಯದಲ್ಲಿ ೧೯೨ ಅನುದಾನಿತ ಐಟಿಐಗಳಿವೆ. ಆದರೆ ೨೦೧೦ರಲ್ಲಿ…

Read More

ಮುದ್ದೇಬಿಹಾಳ: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ)ದ ಬಾಗಲಕೋಟೆ, ಬೆಳಗಾವಿ ನಗರ ಹಾಗೂ ಬೆಳಗಾವಿ ಗ್ರಾಮಾಂತರ ಜಿಲ್ಲೆಗಳ ಉಸ್ತುವಾರಿಯಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ ಅವರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷೆ ಕೀರ್ತಿ ಗಣೇಶ ಆದೇಶಿಸಿದ್ದಾರೆ.

Read More