ಮುದ್ದೇಬಿಹಾಳ: ಮಾಹಿತಿ ಹಕ್ಕು ಅಧಿನಿಯಮದ ಅಡಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಪ್ರಭಾರ ಬಿಇಓ ಯು.ಬಿ.ಧರಿಕಾರ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನಾಲ್ಕು ಜನರ ಮೇಲೆ ನ್ಯಾಯವಾದಿ ವಿರೇಶ ಹಿರೇಮಠ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ವಿರೇಶ ಕಳೆದ ದಿನಗಳ ಹಿಂದೆ ಕೆಲವು ಮಾಹಿತಿಗಳನ್ನು ಕೋರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯಕ್ಕೆ ಮಾಹಿತಿ ಹಕ್ಕು ಅಧಿನಿಯಮ ೨೦೦೫ ರ ಅಡಿ ಅರ್ಜಿ ಸಲ್ಲಿಸಿದ್ದು ಆ ಅರ್ಜಿಗೆ ಕೋರಲಾದ ದಾಖಲೆಗಳು ಇಟ್ಟಿರುವ ಕೊಠಡಿ ಮಳೆಯಿಂದ ಮೇಲ್ಛಾವಣಿ ಶಿಥಿಲಗೊಂದು ಸಾಕಷ್ಟು ಪ್ರಮಾಣದಲ್ಲಿ ಮಳೆ ನೀರು ಸೋರಿಕೆಯಾದ ಕಾರಣ ದಾಖಲೆಗಳು ನಾಶವಾಗಿವೆ ಎಂದು ಲಿಖಿತವಾಗಿ ಹಿಂಬರಹ ನೀಡಿದ್ದು ಇದು ಉದ್ದೇಶ ಪೂರ್ವಕವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ನಿರ್ಗಮಿತ ಬಿಇಓ ಎಸ್.ಜೆ.ನಾಯಕ, ಪತ್ರಾಂಕಿತ ವ್ಯವಸ್ಥಾಪಕ ಬಿ.ಎಸ್.ಪಾಟೀಲ, ಕೇಸ್ ವರ್ಕರ್ ಸಿದ್ದನಗೌಡ ಪಾಟೀಲ ಮೇಲೆ ಪ್ರಕರಣ ದಾಖಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
