ವಿಜಯಪುರ: ಔರಾದ್ಕರ್ ವರದಿಯನ್ನು ಅನುಷ್ಠಾನಗೊಳಿಸಿ ರಾಜ್ಯದ ಆರಕ್ಷಕರ (ಪೊಲೀಸರ) ಪಿಂಚಣಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಇಂದು ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಘಟಕ ಬೆಂಗಳೂರು ವತಿಯಿಂದ ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ ಹಾಗೂ ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರು ಇವರಿಗೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದ ಆರಕ್ಷಕರ (ಪೊಲೀಸರ) ಹಾಗೂ ಅವರ ಮೇಲಾಧಿಕಾರಿಗಳ ಮಾಸಿಕ ಪಿಂಚಣಿ ಹೆಚ್ಚಿಸಲು ಹಿಂದಿನ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾಗಿದ್ದ ಔರಾದಕರ್ ವರದಿಯನ್ನು ಅನುಷ್ಠಾನಗೊಳಿಸಿ ರಾಜ್ಯದ ಪೊಲೀಸರಿಗೆ ಹಾಗೂ ಅವರ ಮೇಲಾಧಿಕಾರಿಗಳ ನೆರವಿಗೆ ಧಾವಿಸಬೇಕಿದೆ. ರಾಜ್ಯದ ವಿವಿಧ ಸರಕಾರಿ ನೌಕರಸ್ಥರಿಗೆ ಹಾಗೂ ಪೊಲೀಸ್ ಇಲಾಖೆಯವರ ಪಿಂಚಣಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ರಾಜ್ಯದ ಪೊಲೀಸ್ ಇಲಾಖೆಯವರಿಗೆ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವ ರಾಜ್ಯದ ಪೊಲೀಸರು ಹಗಲು-ರಾತ್ರಿ ಎನ್ನದೇ ಮಳೆ,ಗಾಳಿ,ಚಳಿ ಎನ್ನದೇ ತಮ್ಮ ಜೀವದ ಹಂಗು ತೊರೆದು ಜನರನ್ನು ರಕ್ಷೆ ಮಾಡಲು ಮುಂದುಗುತ್ತಾರೆ. ಅಂತವರಿಗೆ ಸರಕಾರ ಪಿಂಚಣಿ ಹೆಚ್ಚಿಸಲು ಮೀನಾಮೇಷ ಮಾಡುತ್ತಿದೆ. ಅವರ ಗೋಳನ್ನು ಯಾರೂ ಕೇಳದಂತಾಗಿದೆ. ಪ್ರಸ್ತುತ ದಿನಗಳಲ್ಲಿ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿರುವದು ಹಾಗೂ ಮಕ್ಕಳ ಶಿಕ್ಷಣ ಇವೆಲ್ಲವುಗಳನ್ನು ನಿಭಾಯಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಸರಕಾರ ಈಗಾಲಾದರೂ ಪೊಲೀಸರ ಸಂಕಷ್ಟವನ್ನು ಅರಿತುಕೊಂಡು ಔರಾದ್ಕರ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸವನ ಬಾಗೇವಾಡಿ ಗೌರವಾಧ್ಯಕ್ಷ ಈರಣ್ಣ ದೇವರಗುಡಿ, ತಾ.ಪ್ರಧಾನ ಕಾರ್ಯದರ್ಶಿ ಪ್ರಲ್ಹಾದ ನಾಗರಾಳ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ಬ.ಬಾಗೇವಾಡಿ ತಾಲೂಕ ಉಪಾಧ್ಯಕ್ಷರಾದ ಹೊನಕೇರಪ್ಪ ತೆಲಗಿ, ಎನ್.ಬಿ. ಬಿರಾದಾರ, ನಂದುಗೌಡ ಬಿರಾದಾರ ಇನ್ನಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

