ಸಿಂದಗಿ: ಪಟ್ಟಣದ ದೇವತೆ ನೀಲಂಗಾದೇವಿಯ ಪಲ್ಲಕ್ಕಿಯು ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಸಾವಿರಾರು ಭಕ್ತರು ದಿಂಡರಕಿಗೈದರು. ಪಲ್ಲಕ್ಕಿ ಮಹೋತ್ಸವ ದೇವಸ್ಥಾನದಿಂದ ಹಳೆ ಬಜಾರ್ ರಸ್ತೆಯ ಮಾರ್ಗವಾಗಿ ಸ್ಥಳೀಯ ಶ್ರೀ ಬಸವಣ್ಣ ದೇವರ ಗುಡಿಗೆ ಸಾಗಿ ಬಂತು. ಮಾರ್ಗ ಮಧ್ಯದಲ್ಲಿ ಅನೇಕ ಮುತ್ತೈದರು, ಭಕ್ತರು ಆರತಿ ಬೆಳಗಿ ಆಶೀರ್ವಾದ ಪಡೆದುಕೊಂಡರು.
ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾದೇವಿ ಜಾತ್ರೆಯು ರವಿವಾರ ಅತ್ಯಂತ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಜರುಗಿತು.
ಗೌರಿ ಹುಣ್ಣಿಮೆಯಿಂದ ಪ್ರಾರಂಭವಾದ ನೂರಾರು ಭಕ್ತರ ನಿರಹಾರ ಸೇವೆ ಪಲ್ಲಕ್ಕಿ ದೇವಸ್ಥಾನಕ್ಕೆ ಮರಳಿ ಬಂದ ನಂತರ ಮುಕ್ತಾಯಗೊಳಿಸಿದರು. ಪಲ್ಲಕ್ಕಿಗೆ ಮಾಡಿದ ವಿವಿಧ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು. ಜಾತ್ರೆಯಲ್ಲಿ ಪುರವಂತರ ಸೇವೆ, ನಂದಿಕೋಲು ಸೇವೆ, ಡೊಳ್ಳು ಕುಣಿತ, ಸನಾದಿ, ಮ್ಯೂಸಿಕಲ್ ಬ್ರಾಂಡ್ ಸೇರಿದಂತೆ ವಿವಿಧ ವಾದ್ಯಗಳು ಕಂಡುಬಂದವು.
ಜಾತ್ರಾ ನೇತೃತ್ವವನ್ನು ಧರ್ಮದರ್ಶಿ ಸುನೀಲ ಶಿರೂಗೌಡ ದೇವರಮನಿ ವಹಿಸಿದ್ದರು. ಜಾತ್ರಾ ಮೆರವಣಿಗೆಯಲ್ಲಿ ಅಶೋಕಗೌಡ ದೇವರಮನೆ, ಅಶೋಕ ವಾರದ, ನೀಲಪ್ಪಗೌಡ ಬಿರಾದಾರ, ಗುಂಡಪ್ಪ ಪಡ ಗನೂರ, ದುಂಡಪ್ಪ ಸೊನ್ನದ, ಉಮೇಶ ಪಟ್ಟಣಶೆಟ್ಟಿ, ಬಾಬು ರೇಬಿನಾಳ, ಈಶಪ್ಪ ರೆಬಿನಾಳ ದಯಾನಂದ ಪತ್ತಾರ, ಡಾ. ವಿಜಯಕುಮಾರ ವಾರದ, ಮುತ್ತು ಮುಂಡೇವಾಡಗಿ, ಗೊಲ್ಲಾಳಪ್ಪ ಸಾವಳಗಿ, ಕಿರಣ್ ಕೋರಿ, ಸಿದ್ದಲಿಂಗ ಕಿಣಗಿ, ಪ್ರವೀಣ ಪತ್ತಾರ, ಶ್ರೀಧರ ಬೊಮ್ಮಣ್ಣಿ, ಕುಮಾರ ಕಿಣಗಿ, ಗಂಗಾಧರ ಕಿಣಗಿ, ರಾಹುಲ ಪಟ್ಟಣಶೆಟ್ಟಿ , ರಾಚು ಕಿಣಗಿ ಸೇರಿದಂತೆ ತಾಲೂಕಿನ ಸಮಸ್ತ ಭಕ್ತ ವೃಂದ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

