Author: editor.udayarashmi@gmail.com

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ – ವಿವೇಕಾನಂದ ಎಚ್ ಕೆ, ಬೆಂಗಳೂರು ಕಳ್ಳರನ್ನು ಹಿಡಿಯುವ ಪೋಲೀಸರ ಕಾರ್ಯಾಚರಣೆಯಲ್ಲಿ ಪೋಲೀಸರೇ ಹತ್ಯೆಯಾದಂತಾಗಿದೆ ಅರ್ಜುನನ ಸಾವು. ಬಹುಶಃ ಖೆಡ್ಡಾ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತ ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯದಿಂದ ಅರ್ಜು‌ನನ ಸಾವು ಸಂಭವಿಸಿರುವ ಎಲ್ಲಾ ಸಾಧ್ಯತೆಗಳು ಇವೆ. ಒಂದಕ್ಕೊಂದು ಭಿನ್ನ ವರದಿಗಳು ಬರುತ್ತಿವೆ. ಸರ್ಕಾರ ಒಂದು ತಟಸ್ಥ ಅಧಿಕಾರಿಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸಿದರೆ ಸತ್ಯ ಹೊರಬರಬಹುದು. ಅದರಿಂದ ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಮುಂದೆ ಈ ರೀತಿಯ ಕಾರ್ಯಾಚರಣೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಚ್ಚರಿಕೆ ವಹಿಸಬಹುದು..ಹುಲಿ ಉಗುರು ಮತ್ತು ಇತರ ಪ್ರಾಣಿಯ ವಸ್ತುಗಳ ಬಗ್ಗೆ ವೀರೋಚಿತವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಅರ್ಜನನ ರಕ್ಷಣೆಗಾಗಿ ಇನ್ನಷ್ಟು ಶ್ರಮವಹಿಸಿದ್ದರೆ ಒಳ್ಳೆಯದಿತ್ತು ಎಂಬ ಸಾರ್ವಜನಿಕ ಅಭಿಪ್ರಾಯವನ್ನು ಮಂಡಿಸುತ್ತಾ..ಮೂಕ ಪ್ರಾಣಿಗಳ ವಿಷಯದಲ್ಲಿ ಮನುಷ್ಯ ಇನ್ನೂ ಹೆಚ್ಚು ಹೃದಯವಂತಿಕೆ ತೋರಬೇಕು. ಇಲ್ಲದಿದ್ದರೆ ಮನುಷ್ಯರೇ ಖೆಡ್ಡಾಗೆ ಬೀಳಬಹುದು..ಅರ್ಜುನನ ಸಾಧನೆಗಳನ್ನು ಮೆಲುಕು ಹಾಕುತ್ತಾ ಅದಕ್ಕೆ ನಮ್ಮ ಆಶ್ರು ತರ್ಪಣೆ..…

Read More

ವಿಜಯಪುರ: ಕರ್ನಾಟಕ ರಾಜ್ಯ 38ನೇ ರೇಡಿಯಾಲಾಜಿ- ಐಆರ್‌ಐಎ ಸಮ್ಮೇಳನ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ 8 ರಿಂದ 10ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ.ಕಟಿಂಗ್ ಎಡ್ಜ್ ಆಂಡ್ ಅಡ್ವಾನ್ಸಸ್ ವಿಷಯದಡಿ ಈ ಬಾರಿ ಸಮ್ಮೇಳನ ನಡೆಯುತ್ತಿದ್ದು, ಡಿಸೆಂಬರ್ 9 ರಂದು ಬೆಳಿಗ್ಗೆ 11 ಗಂಟೆಗೆ ವೈದ್ಯಕೀಯ ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಮ್ಮೇಳನ ಉದ್ಘಾಟಿಸಲಿದ್ದಾರೆ.ಈ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ ಮುಖ್ಯ ಅತಿಥಿಯಾಗಿ ಪಾಲ್ಗೋಳ್ಳಲಿದ್ದಾರೆ. ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಐ.ಆರ್.ಐಎ ರಾಷ್ಟ್ರೀಯ ಅಧ್ಯಕ್ಷ ಡಾ. ಉಮೇಶ ಕೃಷ್ಣಮೂರ್ತಿ, ರಾಜ್ಯಾಧ್ಯಕ್ಷ ಡಾ. ಪಿ. ಬಿ. ಶೆಟ್ಟಿ, ರಾಜ್ಯ ಕಾರ್ಯದರ್ಶಿ ಡಾ. ರವಿ,…

Read More

ವಿಜಯಪುರ: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿಯು ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆಯಿತು.ಈ ಪಂದ್ಯಾವಳಿಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿ. ಎಲ್. ಡಿ. ಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಎಸ್. ಎಸ್. ಕೋರಿ, ಸಹಾಯಕ ಕ್ರೀಡಾ ನಿರ್ದೇಶಕ ಕೈಲಾಸ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.ಈ ಪಂದ್ಯಾವಳಿಯಲ್ಲಿ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ರಾಜ್ಯದ ವೈದ್ಯಕೀಯ, ದಂತ ಆಯುರ್ವೇದ, ಹೊಮಿಯೋಪತಿ, ಯುನಾನಿ, ಫಾರ್ಮಸಿ, ನರ್ಸಿಂಗ್ ಮುಂತಾದ ಆರೋಗ್ಯ ವಿಜ್ಞಾನ ವಿದ್ಯಾಲಯಗಳು ಸೇರಿದಂತೆ ಒಟ್ಟು 35ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಪುರುಷರ ವಿಭಾಗದಲ್ಲಿ ಮೈಸೂರು ಮೆಡಿಕಲ್ ಕಾಲೇಜ್ ಹಾಗೂ ಸಂಶೋಧನಾ ಕೇಂದ್ರ, ಮೈಸೂರು ಪ್ರಥಮ ಸ್ಥಾನಗಳಿಸಿದರೆ, ಬಾಗಲಕೋಟೆಯ ಸಜ್ಜನ ಶ್ರೀ ನರ್ಸೀಂಗ್ ಕಾಲೇಜ್ ದ್ವಿತಿಯ ಸ್ಥಾನ ಗಳಿಸಿತು. ಮಹಿಳೆಯರ ವಿಭಾಗದಲ್ಲಿ ಹಾಸನ ಸರಕಾರಿ ನರ್ಸಿಂಗ್ ಕಾಲೇಜು ಪ್ರಥಮ, ಬೆಂಗಳೂರಿನ ಶೀಮತಿ ನಾಗರತ್ನಮ್ಮ ನರ್ಸೀಂಗ್ ಕಾಲೇಜು ದ್ವಿತಿಯ…

Read More

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ 15 ಕೃತಿಗಳ ಲೋಕಾರ್ಪಣೆ ಸಮಾರಂಭ ಡಿ.10 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ.ಉಪನ್ಯಾಸಕಿ, ಚಿಂತಕಿ, ಅಂಕಣಕಾರ್ತಿ, ಲೇಖಕಿ ಜಯಶ್ರೀ ಅಬ್ಬಿಗೇರಿ ಅವರ ನಿಮ್ಮನ್ನು ನೀವು ಯಶಸ್ವಿ ವ್ಯಕ್ತಿ ಎಂದು ಭಾವಿಸಿ, ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವಾ, ಜೀವನದಿ, ಜೀವ ನೀಡುವ ಜೀವ ಅಪಾಯದಲ್ಲಿದೆ, ವಚನ ವಾಹಿನಿ, ಸೋಲಿನ ಸುಳಿಯಲ್ಲಿ ಗೆಲುವಿನ ತುದಿ ಇದೆ, ಕುಂತರೂ ನಿಂತರೂ ನಿನ್ನದೇ ತುಂತುರು, ಹಬ್ಬ ಬಂತು ಹಬ್ಬ, ಸೋಲು ಒಪ್ಪಿಕೊಳ್ಳುವ ಮುನ್ನ ಕೊಂಚ ಪ್ರಶ್ನಿಸಿಕೊಳ್ಳಿ, ಮನೋಲ್ಲಾಸ ಭಾಗ-1, ಮನೋಲ್ಲಾಸ ಭಾಗ-2 ಹಾಗೂ ಹಾಸ್ಯ ಸಾಹಿತಿ ಜಯಪ್ರಕಾಶ ಅವರ ಶ್ರೀಮತಿಗಳ ಶೃಂಗಸಭೆಗಳು, ಬಾನುಲಿ ನಗೆ, ಹೃದಯವೀಣೆ ಮಿಡಿದಾಗ ಕೃತಿಗಳು ಹಾಗೂ ಡಾ. ಸಿದ್ದನಗೌಡ ಪಾಟೀಲ ಅವರ ನಾಲ್ಕು ಕೃತಿಗಳ ಲೋಕಾರ್ಪಣೆ ನಡೆಯಲಿದೆ ಎಂದು…

Read More

ಮುದ್ದೇಬಿಹಾಳ: ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಬಸಪ್ಪ ಶಂಕ್ರಪ್ಪ ಸಾವಳಗಿ ನೇಮಕಗೊಂಡಿದ್ದಾರೆ.ಹಿಂದಿನ ಬಿಇಓ ಎಸ್.ಜೆ.ನಾಯಕ ಅವರಿಂದ ತೆರವಾದ ಹುದ್ದೆಗೆ ಇವರನ್ನು ಆಯ್ಕೆ ಮಾಡಲಾಗಿದೆ.ಸಾವಳಗಿ ಅವರು ಈ ಮೊದಲು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಬಾಲ ಪೋಸ್ಟ್ ನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಈ ಆದೇಶ ಹೊರಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು ೧೯೫೮ರ ನಿಯಮ ೩೨ ರ ಅಡಿ ಗ್ರೂಪ್-ಎ ಶ್ರೇಣಿ ಸ್ವತಂತ್ರ ಪ್ರಭಾರದಲ್ಲಿರಿ ಮುಂದಿನ ಆದೇಶದವರೆಗೆ ಹುದ್ದೆ ಮತ್ತು ಸ್ಥಳ ನಿಯುಕ್ತಿಗೊಳಿಸಿದ ಬಗ್ಗೆ ನಮೂದಿಸಲಾಗಿದೆ.

Read More

ವಿಜಯಪುರ: ರೈತರ ಹಕ್ಕು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಜಿ.ಎನ್.ವೆಂಕಟಲಕ್ಷ್ಮಯ್ಯ (ಜಿ.ಎನ್.ವಿ.ಬಾಬು) ಇವರ ಆದೇಶದ ಮೇರೆಗೆ ಶ್ರೀಮತಿ ದಾನಮ್ಮ ಸೊ. ತೆಗ್ಗಳ್ಳಿ ರವರನ್ನು ರಾಜ್ಯ ಮಹಿಳಾ ಉಪಾಧ್ಯಕ್ಷರನ್ನಾಗಿ, ಸದಾಶಿವಯ್ಯಾ ನೀಲಕಂಠಯ್ಯ ಅರಕೇರಿಮಠ ರವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ, ಶ್ರೀಮತಿ ರೂಪಾ ಕಾರ್ತಿಕ ಪಾಟೀಲ ಇವರನ್ನು ವಿಜಯಪುರ ಜಿಲ್ಲಾ ಮಹಿಳಾ ಅಧ್ಯಕ್ಷರನ್ನಾಗಿ ಹಾಗೂ ಅರವಿಂದ ಕಾಂತಪ್ಪ ಓಜಿ ರವರನ್ನು ವಿಜಯಪುರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.ಸಂಘದ ತತ್ವಸಿದ್ದಾಂತಗಳಿಗೆ ಬದ್ಧರಾಗಿ ಯಾವುದೇ ಬೇರೆ ರಾಜಕೀಯ ಆಸೆ ಆಮಿಷಗಳಿಗೆ ಒಳಗಾಗಿ ಸಾಮಾಜಿಕ ಪಿಡುಗುಗಳಿಂದ ದೂರವಿರಬೇಕು. ಹಾಗೂ ಪ್ರಾಮಾಣಿಕತೆ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಂತೆ ಈ ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ.

Read More

ರಾಜಗುರು ಗೋದಾಮು ದುರಂತ | ಮೃತ ಕಾರ್ಮಿಕರ ಕುಟುಂಬಗಳಿಗೆ ಪರಿಹಾರಕ್ಕೆ ಸಂಘಟನೆಗಳ ಒತ್ತಾಯ ವಿಜಯಪುರ: ರಾಜ ಗುರು ಕಾಳಿನ ವ್ಯಾಪಾರಸ್ಥನನ್ನು ಕೂಡಲೆ ಬಂಧಿಸಬೇಕು. ದುರ್ಮರಣಕ್ಕೀಡಾದಕೂಲಿ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲೆಯ ಅಹಿಂದ ಪರ ಸಂಘಟನೆಗಳ ಪ್ರಮುಖರು ಆಗ್ರಹಿಸಿದ್ದಾರೆ.ವಿಜಯಪುರದ ಕೆ.ಐಎ.ಡಿ.ಬಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ರಾಜಗುರು ಎಂಬ ಕಾಳಿನ ವ್ಯಾಪಾರಸ್ಥರು ತನ್ನ ಸುಸಜ್ಜಿತವಲ್ಲದ ಗೊಡಾವಣದಲ್ಲಿ ರೈತರ ಕಾಳಿನ ವ್ಯಾಪಾರವನ್ನು ಮಾಡಿಕೊಂಡು ದಾಸ್ತಾನು ಮಾಡುತ್ತಿದ್ದಾನೆ. ಅನೇಕ ವರ್ಷಗಳಿಂದ ಸುಸ್ಥಿತಿಯಲ್ಲಿ ಇಲ್ಲದೆ ಗೋಡಾವಣೆಯನ್ನು ಉಪಯೋಗಿಸಿಕೊಂಡು ವ್ಯಾಪಾರ ಮಾಡುವುದರಿಂದ ಸಣ್ಣಪುಟ್ಟ ತೊಂದರೆಗಳು ಮೊದಲು ಕೂಡ ನಡೆದು ಹೋಗಿರಬಹುದು ಈಗ ಅದೇ ಕಾಳಿನ ಬಡಾವಣೆಯಲ್ಲಿ ಕಾಳುಗಳನ್ನು ಸಂಗ್ರಹಣೆ ಮಾಡುವ ಸಂದರ್ಭದಲ್ಲಿ ಹೊಟ್ಟೆಪಾಡಿಗಾಗಿ ಹೊರರಾಜ್ಯಗಳಿಂದ ಬಂದ ಬಡ ಕೂಲಿಕಾರ್ಮಿಕರ ಏಳು ಜನರನ್ನು ಬಲಿಪಡದಿದೆ ಇಂತಹ ಸುಸ್ಥಿತಿಯಲ್ಲಿಲ್ಲದ ಗೊಡಾವನಗಳನ್ನು ನಿರ್ಮಿಸಿಕೊಂಡು ವ್ಯವಹಾರಗಳನ್ನು ನಡೆಸಿಕೊಂಡು ಬರುವುದು ಅಕ್ರಮ ಅಪರಾಧ ಇದಕ್ಕೆ ಸಂಬಂಧಪಟ್ಟ ಕಾರ್ಮಿಕ ಅಧಿಕಾರಿಗಳಾಗಲಿ ಅವುಗಳನ್ನು ವೀಕ್ಷಣೆ ಮಾಡುವುದರಲ್ಲಿ ಮಗ್ನ ಹೀನರಾಗಿದ್ದಾರೆ.ಇದರಿಂದ ಬಡ ಕಾರ್ಮಿಕ ೭ ಜನರು ಕಾಳಿನ ಮೂಟೆಗಳು ಬಿದ್ದು…

Read More

ಸಿಂದಗಿ: ಕನಕದಾಸರ ರಚಿಸಿದ ಐದು ಕೃತಿಗಳು ಸರ್ವಕಾಲಿಕ ಉಪಯುಕ್ತವಾದಂತಹ ಕೃತಿಗಳು. ಅವುಗಳು ಇಂದಿನ ಯುವಕರಿಗೆ ಓದುವ ಮೂಲಕ ಮೌಲ್ಯಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಎಚ್.ಜಿ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಹೇಳಿದರು.ಪಟ್ಟಣದ ಮಹಾವಿದ್ಯಾಲಯದ ಸಭಾಭವನದಲ್ಲಿ ಸಿ.ಎಂ ಮನಗೂಳಿ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಐಕ್ಯೂಎಸಿ, ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಕುರಿತು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗಿದೆ. ಕನ್ನಡ ಸಾರಸತ್ವ ಲೋಕದಲ್ಲಿ ಅಪಾರವಾದ ಸ್ಥಾನವನ್ನು ಪಡೆಯುವ ಮೂಲಕ ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಚಿರಸ್ಮರಣೀಯರಾಗಿದ್ದಾರೆ. ಕನಕದಾಸರ ಕೀರ್ತನೆಗಳನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದರು,.ಈ ವೇಳೆ ಸಾಹಿತಿ ಮ.ಚ.ಧರಿ ಮಾತನಾಡಿದರು.ಈ ವೇಳೆ ಪ್ರಾಚಾರ್ಯ ಡಾ.ಬಿ.ಜಿ ಪಾಟೀಲ ಕನ್ನಡ ಪ್ರಾಧ್ಯಾಪಕ ರಾಹುಲ ಕಾಂಬಳೆ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

Read More

ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ವಿಶೇಷ ತರಬೇತಿ ಸೇತುಬಂಧ ೨೦೨೩-೨೪ನೆಯ ಸಾಲಿನ ಪುನಶ್ಚೇತನ ಶಿಬಿರ ಉದ್ಘಾಟನೆ ಸಿಂದಗಿ: ಸಂಸ್ಕೃತ ಅಧ್ಯಯನದಿಂದ ಸಂಸ್ಕಾರ ಉಂಟಾಗುತ್ತದೆ. ಸಂಸ್ಕೃತ ಭಾಷೆ ಸಾಮಾನ್ಯ ಭಾಷೆಯಲ್ಲ. ಈ ಭಾಷೆ ದೇಶದೊಳಗೆ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಪ್ರಸಿದ್ಧವಾಗಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ಸಾತವೀರೇಶ್ವರ ಸಭಾಭವನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರಿನ ಸಂಸ್ಕೃತ ನಿರ್ದೇಶನಾಲಯ ಹಾಗೂ ಶ್ರೀ ಪದ್ಮರಾಜ ಸಂಸ್ಕೃತ ವೇದ ಪಾಠಶಾಲೆಯ ಸಹಯೋಗದಲ್ಲಿ ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ವಿಶೇಷ ತರಬೇತಿ ಸೇತುಬಂಧ ೨೦೨೩-೨೪ನೆಯ ಸಾಲಿನ ಪುನಶ್ಚೇತನ ಶಿಬಿರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕೃತವು ವಿಶ್ವದಲ್ಲೇ ಮಾನ್ಯವಾದದ್ದು, ಸಂಸ್ಕಾರದಿಂದಲೇ ಜ್ಞಾನ ಸಿಗುವಂತಾಗಿದೆ. ಭಾರತೀಯ ಶ್ರೇಷ್ಠ ಗ್ರಂಥಗಳಾದ ಭಗವದ್ಗೀತೆ, ರಾಮಾಯಣ, ಮಹಾಭಾರತದಂತಹ ಎಲ್ಲ ಮಹಾಕಾವ್ಯಗಳ ಮೂಲ ಸಂಸ್ಕೃತವೇ ಆಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸಂಸ್ಕೃತವು ಪ್ರಪಂಚದ ಅತ್ಯಂತ ಹಳೆಯ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತಹ ಸಂಸ್ಕೃತವನ್ನು ತಿಳಿಸಿಕೊಡುವ ಶಿಕ್ಷಕರ ಪುನಶ್ಚೇತನ ಶಿಬಿರ ಸಂಪನ್ನವಾಗಲಿ ಎಂದರು.ಈ ವೇಳೆ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ…

Read More