ರಾಜಗುರು ಗೋದಾಮು ದುರಂತ | ಮೃತ ಕಾರ್ಮಿಕರ ಕುಟುಂಬಗಳಿಗೆ ಪರಿಹಾರಕ್ಕೆ ಸಂಘಟನೆಗಳ ಒತ್ತಾಯ
ವಿಜಯಪುರ: ರಾಜ ಗುರು ಕಾಳಿನ ವ್ಯಾಪಾರಸ್ಥನನ್ನು ಕೂಡಲೆ ಬಂಧಿಸಬೇಕು. ದುರ್ಮರಣಕ್ಕೀಡಾದ
ಕೂಲಿ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲೆಯ ಅಹಿಂದ ಪರ ಸಂಘಟನೆಗಳ ಪ್ರಮುಖರು ಆಗ್ರಹಿಸಿದ್ದಾರೆ.
ವಿಜಯಪುರದ ಕೆ.ಐಎ.ಡಿ.ಬಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ರಾಜಗುರು ಎಂಬ ಕಾಳಿನ ವ್ಯಾಪಾರಸ್ಥರು ತನ್ನ ಸುಸಜ್ಜಿತವಲ್ಲದ ಗೊಡಾವಣದಲ್ಲಿ ರೈತರ ಕಾಳಿನ ವ್ಯಾಪಾರವನ್ನು ಮಾಡಿಕೊಂಡು ದಾಸ್ತಾನು ಮಾಡುತ್ತಿದ್ದಾನೆ. ಅನೇಕ ವರ್ಷಗಳಿಂದ ಸುಸ್ಥಿತಿಯಲ್ಲಿ ಇಲ್ಲದೆ ಗೋಡಾವಣೆಯನ್ನು ಉಪಯೋಗಿಸಿಕೊಂಡು ವ್ಯಾಪಾರ ಮಾಡುವುದರಿಂದ ಸಣ್ಣಪುಟ್ಟ ತೊಂದರೆಗಳು ಮೊದಲು ಕೂಡ ನಡೆದು ಹೋಗಿರಬಹುದು ಈಗ ಅದೇ ಕಾಳಿನ ಬಡಾವಣೆಯಲ್ಲಿ ಕಾಳುಗಳನ್ನು ಸಂಗ್ರಹಣೆ ಮಾಡುವ ಸಂದರ್ಭದಲ್ಲಿ ಹೊಟ್ಟೆಪಾಡಿಗಾಗಿ ಹೊರರಾಜ್ಯಗಳಿಂದ ಬಂದ ಬಡ ಕೂಲಿಕಾರ್ಮಿಕರ ಏಳು ಜನರನ್ನು ಬಲಿಪಡದಿದೆ ಇಂತಹ ಸುಸ್ಥಿತಿಯಲ್ಲಿಲ್ಲದ ಗೊಡಾವನಗಳನ್ನು ನಿರ್ಮಿಸಿಕೊಂಡು ವ್ಯವಹಾರಗಳನ್ನು ನಡೆಸಿಕೊಂಡು ಬರುವುದು ಅಕ್ರಮ ಅಪರಾಧ ಇದಕ್ಕೆ ಸಂಬಂಧಪಟ್ಟ ಕಾರ್ಮಿಕ ಅಧಿಕಾರಿಗಳಾಗಲಿ ಅವುಗಳನ್ನು ವೀಕ್ಷಣೆ ಮಾಡುವುದರಲ್ಲಿ ಮಗ್ನ ಹೀನರಾಗಿದ್ದಾರೆ.
ಇದರಿಂದ ಬಡ ಕಾರ್ಮಿಕ ೭ ಜನರು ಕಾಳಿನ ಮೂಟೆಗಳು ಬಿದ್ದು ಪ್ರಾಣವನ್ನು ಕಳೆದುಕೊಂಡಿದ್ದಲ್ಲದೆ ಸುಮಾರು ೧೪ ಜನರು ಇನ್ನು ಒಳಗಡೆ ಸಿಲುಕಿಕೊಂಡಿರುವ ಶಂಕೆ ಇದೆ. ಹಾಗೂ ಇನ್ನೂ ಅದೆಷ್ಟೋ ಇನ್ನಿತರ ಹಾನಿಗಳಾಗುವ ಬಗ್ಗೆ ಲೆಕ್ಕಕ್ಕಿಲ್ಲದಂತಾಗಿದೆ. ಇದರಿಂದ ಕಾರ್ಮಿಕರಿಗೆ ಅವರ ಜೀವನದ ಸುರಕ್ಷತೆ ಇಲ್ಲದೆ ಜೀವನವನ್ನು ಮಾಡಿಕೊಂಡು ಬರುವುದು ಬಡ ಕಾರ್ಮಿಕರಿಗೆ ಅನಿವಾರ್ಯವಾಗಿರಬಹುದು. ಆದರೆ ಅವರನ್ನು ಹಗಲು ರಾತ್ರಿ ಎನ್ನದೆ ದುಡಿಸಿಕೊಳ್ಳುವ ರಾಜಗುರು ಎಂಬ ಕಾಳಿನ ದಲ್ಲಾಳಿಗಳು ಅವರ ಕಾರ್ಮಿಕರ ಕನಿಷ್ಠ ಸೌಲಭ್ಯಗಳನ್ನು ವೀಕ್ಷಣೆ ಮಾಡಬೇಕಾಗಿತ್ತು. ಅಥವಾ ತಾವೇ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಸಹಕಾರ ಮಾಡಬೇಕಾಗಿತ್ತು. ಅದನ್ನು ಕೂಡ ಮಾಡದೇ ಇರುವುದು ನಾಚಿಕೆಗೇಡು ಸಂಗತಿ.
೭ ಜನ ಕಾರ್ಮಿಕರು ದುರ್ಮರಣ ಆಗಿದ್ದಲ್ಲದೆ ಅವರ ಕುಟುಂಬಗಳು ಕೂಡ ಬೀದಿಗೆ ಬೀಳುತ್ತವೆ. ಆದ್ದರಿಂದ ಸುರಕ್ಷಿತವಲ್ಲದ ಗೋಡಾವನಗಳನ್ನು ನಿರ್ಮಿಸಿಕೊಂಡು ವ್ಯಾಪಾರವನ್ನು ನಡೆಸಿಕೊಂಡ ಬಂದ ಮಾಲೀಕನನ್ನು ಕೂಡಲೇ ಬಂಧಿಸಬೇಕು. ಹಾಗೂ ಕಾರ್ಮಿಕರಿಗೆ ಹಾಗೂ ಗೋಡಾವನಗಳನ್ನು ಸರಿಯಾಗಿ ವೀಕ್ಷಣೆ ಮಾಡದೇ ಇರುವ ಅಧಿಕಾರಿಗಳನ್ನು ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ತತ್ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಮೃತ ಕಾರ್ಮಿಕರಿಗೆ ತಲಾ ೧೦ ಲಕ್ಷ ರೂ. ಪರಿಹಾರ ಹಾಗೂ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡುವಂತಾಗಬೇಕು. ಮತ್ತು ಈ ಬಗ್ಗೆ ಕ್ರಮಕೈಗೊಳ್ಳದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ವಿಜಯಪುರ ಜಿಲ್ಲೆಯ ಅಹಿಂದ ಪರ ಸಂಘಟನೆಗಳ ಪ್ರಮುಖರು, ಜಿಲ್ಲೆಯ ಹಿರಿಯ ರೈತ ಹೋರಾಟಗಾರ ಭೀಮಸಿ ಕಲಾದಗಿ, ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ, ಎಸ್ ಎಂ ಪಾಟೀಲ, ವಿಜಯಪುರ ಜಿಲ್ಲಾ ಕುರಿಗಾರ ಸಂಘದ ಅಧ್ಯಕ್ಷರು, ಇಂಡಿಯನ್ ನ್ಯಾಷನಲ್ ಬಿಲ್ಡಿಂಗ್ ಕಸ್ಟ್ರಕ್ಷನ್ ವಿಜಯಪುರ ಜಿಲ್ಲಾ ಅಧ್ಯಕ್ಷ ಬೀರಪ್ಪ ಜುಮನಾಳ, ನಗರ ಘಟಕ ಕುರುಬ ಸಂಘದ ಅಧ್ಯಕ್ಷ, ರಾಜು ಕಗ್ಗೋಡ, ವಿಜಯಕುಮಾರ ಕಲಾದಗಿ ಮುಂತಾದವರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.

