ಸಿಂದಗಿ: ಕನಕದಾಸರ ರಚಿಸಿದ ಐದು ಕೃತಿಗಳು ಸರ್ವಕಾಲಿಕ ಉಪಯುಕ್ತವಾದಂತಹ ಕೃತಿಗಳು. ಅವುಗಳು ಇಂದಿನ ಯುವಕರಿಗೆ ಓದುವ ಮೂಲಕ ಮೌಲ್ಯಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಎಚ್.ಜಿ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಹೇಳಿದರು.
ಪಟ್ಟಣದ ಮಹಾವಿದ್ಯಾಲಯದ ಸಭಾಭವನದಲ್ಲಿ ಸಿ.ಎಂ ಮನಗೂಳಿ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಐಕ್ಯೂಎಸಿ, ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಕುರಿತು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗಿದೆ. ಕನ್ನಡ ಸಾರಸತ್ವ ಲೋಕದಲ್ಲಿ ಅಪಾರವಾದ ಸ್ಥಾನವನ್ನು ಪಡೆಯುವ ಮೂಲಕ ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಚಿರಸ್ಮರಣೀಯರಾಗಿದ್ದಾರೆ. ಕನಕದಾಸರ ಕೀರ್ತನೆಗಳನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದರು,.
ಈ ವೇಳೆ ಸಾಹಿತಿ ಮ.ಚ.ಧರಿ ಮಾತನಾಡಿದರು.
ಈ ವೇಳೆ ಪ್ರಾಚಾರ್ಯ ಡಾ.ಬಿ.ಜಿ ಪಾಟೀಲ ಕನ್ನಡ ಪ್ರಾಧ್ಯಾಪಕ ರಾಹುಲ ಕಾಂಬಳೆ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅನನ್ಯ :ಫ್ರೊ.ಹೆಗ್ಗನದೊಡ್ಡಿ
Related Posts
Add A Comment
