ವಿಜಯಪುರ: ರೈತರ ಹಕ್ಕು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಜಿ.ಎನ್.ವೆಂಕಟಲಕ್ಷ್ಮಯ್ಯ (ಜಿ.ಎನ್.ವಿ.ಬಾಬು) ಇವರ ಆದೇಶದ ಮೇರೆಗೆ ಶ್ರೀಮತಿ ದಾನಮ್ಮ ಸೊ. ತೆಗ್ಗಳ್ಳಿ ರವರನ್ನು ರಾಜ್ಯ ಮಹಿಳಾ ಉಪಾಧ್ಯಕ್ಷರನ್ನಾಗಿ, ಸದಾಶಿವಯ್ಯಾ ನೀಲಕಂಠಯ್ಯ ಅರಕೇರಿಮಠ ರವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ, ಶ್ರೀಮತಿ ರೂಪಾ ಕಾರ್ತಿಕ ಪಾಟೀಲ ಇವರನ್ನು ವಿಜಯಪುರ ಜಿಲ್ಲಾ ಮಹಿಳಾ ಅಧ್ಯಕ್ಷರನ್ನಾಗಿ ಹಾಗೂ ಅರವಿಂದ ಕಾಂತಪ್ಪ ಓಜಿ ರವರನ್ನು ವಿಜಯಪುರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಸಂಘದ ತತ್ವಸಿದ್ದಾಂತಗಳಿಗೆ ಬದ್ಧರಾಗಿ ಯಾವುದೇ ಬೇರೆ ರಾಜಕೀಯ ಆಸೆ ಆಮಿಷಗಳಿಗೆ ಒಳಗಾಗಿ ಸಾಮಾಜಿಕ ಪಿಡುಗುಗಳಿಂದ ದೂರವಿರಬೇಕು. ಹಾಗೂ ಪ್ರಾಮಾಣಿಕತೆ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಂತೆ ಈ ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

