Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಸ್ಪತ್ರೆಗಳಲ್ಲಿ ಹಣ್ಣು-ಚಹಾ ವಿತರಿಸಿದ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಸಿಂದಗಿ: ನಗರದ ತಾಲೂಕಾ ಸರಕಾರಿ ಆಸ್ಪತ್ರೆ ಹಾಗೂ ಜಾಲಗೇರಿ ಆಸ್ಪತ್ರೆಗೆ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಪದಾಧಿಕಾರಿಗಳು, ಕಾರ್ಯಕರ್ತರು ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿ ಚಹಾ ಮತ್ತು ಹಣ್ಣು-ಹಂಪಲು ವಿತರಿಸಿದರು.ಈ ಸಂದರ್ಭದಲ್ಲಿ ಮೌಲಾನಾ ದಾವೂದ್ ನದ್ವಿ ಮಾತನಾಡಿ, ನಾವೆಲ್ಲ ಸ್ವಾರ್ಥ ಮತ್ತು ಸ್ವಂತ ಲಾಭದ ಭಾವನೆಯನ್ನು ಮರೆತು ಮಾನವರ ಸೇವೆಗೆ ಮುಂದೆ ಬರುವುದು ಅವಶ್ಯವಾಗಿದೆ. ಸಮಾಜ ಸೇವೆಯ ಹಾಗೂ ದತ್ತಿ ಕಾರ್ಯಗಳ ಮೂಲಕ ಮಾನವರ ಸೇವೆ ಮಾಡುವುದರಿಂದ ಸುಂದರ ಸಮಾಜ ನಿರ್ಮಾಣವಾಗುತ್ತದೆ. ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಜೊತೆ ಸಹಾನುಭೂತಿ ತೊರಬೇಕು. ಮಾನವೀಯ ಮೌಲ್ಯಗಳನ್ನು ಉಳಿಸಿದರೆ ಹಾಗೂ ಸೂಕ್ತವಾದ ಪ್ರಾಯೋಗಿಕ ಕ್ರಮಗಳನ್ನು ಕೈಗೊಂಡರೆ ಮಾತ್ರ ಸಮೃದ್ಧ ದೇಶ ಮತ್ತು ಸಮಾಜವನ್ನು ನಿರ್ಮಿಸಲು ಸಾಧ್ಯ. ನೈತಿಕ ಅಧಃಪತನವನ್ನು ತಡೆಯದೆ ಹೊದರೆ, ದೇಶ ಮತ್ತು ದೇಶದಲ್ಲಿ ವಾಸಿಸುವ ಜನರ ಪರಿಣಾಮ ಕೆಟ್ಟು ಹೋಗುವುದು. ದೇಶದ ಅಖಂಡತೆ ಮತ್ತು ಜನರ ಕಲ್ಯಾಣಕ್ಕಾಗಿ…
ತಿಕೋಟಾ: ರಾಮಾನುಜನ್ ಅವರು ಸ್ವಯಂ-ಕಲಿಕೆಯ ಗಣಿತಶಾಸ್ತ್ರಜ್ಞರಾಗಿದ್ದು, ಅವರು ಸಂಖ್ಯೆ ಸಿದ್ಧಾಂತ, ಅನಂತ ಸರಣಿಗಳು ಮತ್ತು ವಿಶೇಷ ಕಾರ್ಯಗಳನ್ನು ಒಳಗೊಂಡಂತೆ ಗಣಿತದ ವಿವಿಧ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಪ್ರಾಚಾರ್ಯರಾದ ಎಂ ಎ ಹಿರೇಮಠ ಹೇಳಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿ ವಿ ಎಸ್ ಪ್ರೌಢ ಶಾಲೆಯಲ್ಲಿ ಗಣಿತಶಾಸ್ತ್ರಜ್ಞ ರಾಮಾನುಜನ್ ಜನ್ಮ ದಿನಾಚರಣೆ ನಿಮಿತ್ತ ಗಣಿತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ರಾಮಾನುಜನ್ ಅವರ ಜೀವನವನ್ನು ಅತ್ಯಂತ ಬಡತನ ಮತ್ತು ತೊಂದರೆಯಲ್ಲಿ ಕಳೆದರು, ಆದರೆ ಇದರ ಹೊರತಾಗಿಯೂ ರಾಮಾನುಜನ್ ಅವರ ಜೀವನದಲ್ಲಿ ಅನೇಕ ಗಣಿತದ ಸೂತ್ರಗಳು ಮತ್ತು ವಿಧಾನಗಳನ್ನು ನೀಡಿದರು. ಅನೇಕ ಸಂಶೋಧನೆಗಳನ್ನು ಮಾಡಿದರು ಎಂದು ವಿವರಿಸಿದರು.ರಾಮಾನುಜನ್ ಯವರ ಕನಸಿನಲ್ಲಿ ಚಲನೆಯ ಗಣಿತದ ಸಮೀಕರಣಗಳು ದೈವಿಕ ವರದಂತೆ ದೈವಿಕ ಅನುಗ್ರಹವಾಗಿ ಬಂದವು ಎಂದು ಸಹ ಶಿಕ್ಷಕ ಆಯ್ ಕೆ ನದಾಫ್ ಹೇಳಿದರು.ಎಂ ಜಿ ಕುಲಕರ್ಣಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಗಣಿತ ಶಿಕ್ಷಕ ಎಂ ಜಿ ಕುಲಕರ್ಣಿಯವರನ್ನು ಹತ್ತನೇಯ ತರಗತಿ ವಿದ್ಯಾರ್ಥಿಗಳು ಸನ್ಮಾನಿಸಿದರು.ವಿದ್ಯಾರ್ಥಿಗಳು ಗಣಿತದ ಅಂಕಿ…
ವಿದ್ಯಾರ್ಥಿ ವೇತನ ಕಡಿತಗೊಳಿಸಿರುವ ರಾಜ್ಯ ಸರಕಾರದ ಕ್ರಮಕ್ಕೆ ಖಂಡನೆ ವಿಜಯಪುರ: ೨೦೨೨-೨೩ ನೇ ಸಾಲಿನ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯ ಅಡಿಯಲ್ಲಿರುವ ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ಹಾಗೂ ವಿದ್ಯಾರ್ಥಿ ವೇತನ ಕಡಿತಗೊಳಿಸಿರುವ ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಉತ್ತರ ಪ್ರಾಂತ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ಮಾತನಾಡಿ, ರಾಜ್ಯದಲ್ಲಿ ಬಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅಪಾಯಕಾರಿ, ಅಸುರಕ್ಷಿತ, ಹಾಗೂ ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಮತ್ತು ಅವರ ಕುಟುಂಬದ ರಕ್ಷಣೆಗಾಗಿ ಸರಕಾರಗಳು ಬದ್ಧವಾಗಿರಬೇಕು, ಆದರೆ ರಾಜ್ಯ ಸರಕಾರ ೨೦೨೨-೨೩ ನೇ ಸಾಲಿನ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯ ಅಡಿಯಲ್ಲಿರುವ ವಿದ್ಯಾರ್ಥಿ ವೇತನ ಬಿಡುಗಡೆ ಕಾರ್ಯಕ್ರಮವನ್ನು ನವಂಬರ್ ೦೯ ರಂದು ಮಾಡಿದೆ ಆದರೆ ಇಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಜಮೆ ಆಗದೆ ಬಡ ವಿದ್ಯಾರ್ಥಿಗಳ ಜೀವನದ ಜೊತೆ ರಾಜ್ಯ…
ವಿಜಯಪುರ: ಕರ್ನಾಟಕ ರೈತ ಜಾಗೃತ ವೇದಿಕೆ ತಾಜಪೂರ ಎಚ್ ಹಾಗೂ ಜಿಲ್ಲಾ ಜಲ ಬಿರಾದರಿ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಾ ಮಟ್ಟದ ರೈತ ಸಂವಾದ ಕಾರ್ಯಕ್ರಮವನ್ನು ಶನಿವಾರ ಡಿ.೨೩ರಂದು ಸಾಯಂಕಾಲ ೪.೦೦ ಗಂಟೆಗೆ ತಾಜಪೂರ ಎಚ್. ಗ್ರಾಮ ಪಂಚಾಯತ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವದೆಹಲಿಯ ವಿಶ್ವ ಜಲ ಪುರುಷ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ರವರು ವಹಿಸುವರು. ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ಕೃಷಿ ಮಂತ್ರಾಲಯದ ಅಧಿಕಾರಿ ಅಶೋಕ ದಳವಾಯಿ, ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ರಾಜೇಂದ್ರ ಪೋತದಾರ, ಜಿಲ್ಲಾ ಜಲ ಬಿರಾದರಿ ಅಧ್ಯಕ್ಷ ಫೀಟರ್ ಅಲೆಕ್ಸಾಂಡರ್, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ವಹಿಸುವರು.ಈ ಕಾರ್ಯಕ್ರಮದಲ್ಲಿ ರೈತರು ಬೆಳೆಯುವ ಬೆಳೆಗೆ ಪರಿಹಾರ, ಔಷಧಿ ಸಂಪರಣೆ, ಆರ್ಥಿಕ ಲಾಭ ಕೊಡುವ ಬೆಳೆಗಳನ್ನು ಹೇಗೆ ಬೆಳೆಯುವುದು? ರೈತರ ಆರ್ಥಿಕ ಮಟ್ಟ ಸುಧಾರಣೆ, ನೀರಿನ ಸದ್ಭಳಕೆ ಹೇಗೆ ಮಾಡುವದು? ಇನ್ನು ಹಲವಾರು ವಿಷಯಗಳ ಕುರಿತು ಮುಕ್ತವಾದ ಸಂವಾದ…
ವಿಜಯಪುರ: ನಗರದ ಜ್ಞಾನಯೋಗಾಶ್ರಮದ ನಡೆದಾಡುವ ದೇವರು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಗುರುನಮನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಡಿ.೨೩ ರಿಂದ ೩೧ರವರೆಗೆ ಪ್ರತಿದಿನ ಸಂಜೆ ೫ ರಿಂದ ಕವಿಗೋಷ್ಠಿಗಳು ಜರುಗಲಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತಿದಿನ ಸಂಜೆ ೪ ಗಂಟೆಯಿಂದ ಕವಿಗೊಷ್ಠಿ ಮುಗಿಯುವರೆಗೆ ನಗರದ ವಿವಿಧ ಬಡಾವಣೆಗಳಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವತಿಯಿಂದ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.ಪ್ರಯಾಣಿಕರ ಅನುಕೂಲಕ್ಕಾಗಿ ಗಣೇಶನಗರ, ರೈಲು ನಿಲ್ದಾಣ, ಕೇಂದ್ರ ಬಸ್‌ನಿಲ್ದಾಣ, ಗಾಂಧಿಚೌಕ್, ತೊರವಿ ಸ್ಥಳಗಳಿಂದ ಆಶ್ರಮಕ್ಕೆ ಹೆಚ್ಚುವರಿ ನಗರ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಅದರಂತೆ ಜನವರಿ ೧ ಹಾಗೂ ೨ ರಂದು ಜರುಗುವ ಗುರುನಮನ ಮಹೋತ್ಸವ ಅಂಗವಾಗಿ ಮುಂಜಾನೆಯಿಂದ ಸಾಯಂಕಾಲದವರೆಗೆ ವಿವಿಧ ಬಡಾವಣೆಗಳಿಂದ ಹೆಚ್ಚುವರಿ ನಗರ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕರು ಸಾರಿಗೆ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣ ಪಂಚಾಯತಿಗೆ ಸಾರ್ವತ್ರಿಕ ಚುನಾವಣೆ, ಮುದ್ದೇಬಿಹಾಳ ಪುರಸಭೆಗೆ ವಿವಿಧ ಕಾರಣಗಳಿಂದ ತೆರವಾದ ವಾರ್ಡ ನಂ.೧೮ರ ಸ್ಥಾನಕ್ಕೆ ಉಪ ಚುನಾವಣೆ ಹಾಗೂ ಮನಗೂಳಿ ಪಟ್ಟಣ ಪಂಚಾಯತ್‌ಗೆ ವಿವಿಧ ಕಾರಣಗಳಿಂದ ತೆರವಾದ ವಾರ್ಡ ಸಂ.೭ರ ಸ್ಥಾನಕ್ಕೆ ಉಪ ಚುನಾವಣೆಗೆ ಡಿ.೨೭ ರಂದು ಮತದಾನ ನಡೆಯಲಿರುವುದರಿಂದ ಶಾಂತಿಯುತ ಮತದಾನಕ್ಕಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಡಿ.೨೫ರಂದು ಬೆಳಿಗ್ಗೆ ೭ ರಿಂದ ಡಿ.೨೭ರವರೆಗಿನ ಅವಧಿಯಲ್ಲಿ ಕಲಂ ೧೪೪ ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಚುನಾವಣೆ ನಡೆಯುವ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಮತಗಟ್ಟೆ ವ್ಯಾಪ್ತಿಯಲ್ಲಿ ೫ಕ್ಕಿಂತ ಹೆಚ್ಚು ಜನರು ಗುಂಪುಗೂಡಿ ಓಡಾಡುವುದನ್ನು ನಿಷೇಧಿಸಿದೆ. ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡಬಹುದಾದ ಯಾವುದೇ ಮಾರಕಾಸ್ತçಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಮತಗಟ್ಟೆ ವ್ಯಾಪ್ತಿಯ ೧೦೦ ಮಿಟರ್‌ಗಳ ಒಳಗೆ ಮತಕ್ಕಾಗಿ ಪ್ರಚಾರ ಮಾಡುವುದು,…
ಮುದ್ದೇಬಿಹಾಳ: ಪಟ್ಟಣದ ಹುಡ್ಕೋದಲ್ಲಿನ ಹನುಮಾನ ದೇವಸ್ಥಾನದಿಂದ ಬಜಾರ ನ ಹನುಮಾನ ದೇವಸ್ಥಾನದವರೆಗೆ ಡಿ.೨೩ ರಂದು ಬೆಳಿಗ್ಗೆ ೧೦ಕ್ಕೆ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.ಶ್ರೀ ರಾಮನ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ ನ ವತಿಯಿಂದ ಹಮ್ಮಿಕೊಳ್ಳಲಾದ ಈ ಮೆರವಣಿಗೆಯಲ್ಲಿ ಸಮಸ್ತ ಹಿಂದೂ ಬಾಂಧವರು ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.
ವಿಜಯಪುರ: ಅಬಕಾರಿ ಖಾತೆ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ ಅವರು ಡಿ.೨೩ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಅಂದು ಮಧ್ಯಾಹ್ನ ೩ ಗಂಟೆಗೆ ವಿಜಯಪುರಕ್ಕೆ ಆಗಮಿಸಿ, ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಗುರುನಮನ ಮಹೋತ್ಸವ ಪ್ರಯುಕ್ತ ಜ್ಞಾನ ಯೋಗಾಶ್ರಮದಲ್ಲಿ ನಡೆಯುವ ಜಾನಪದ ಕಲೆ ಗೋಷ್ಠಿಯಲ್ಲಿ ಭಾಗವಹಿಸಿ ಸಂಜೆ ೭ ಗಂಟೆಗೆ ವಿಜಯಪುರದಿಂದ ಜಮಖಂಡಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರ: ಕೆಪಿಟಿಸಿಎಲ್ ವತಿಯಿಂದ ೧೧೦/೧೧ಕೆವಿ ತಿಕೋಟ,೧೧೦/೧೧ಕೆವಿ ಹೊನವಾಡ ಹಾಗೂ ೩೩/೧೧ಕೆವಿ ಬಿಜ್ಜರಗಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ ೧೧ ಕೆವಿ ವಿದ್ಯುತ್ ಮಾರ್ಗಗಳಿಗೆ ಡಿ.೨೭ರ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೨:೩೦ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಜಯಪುರದಾದ್ಯಂತ ಮಿಂಚಿನ ಸಂಚಾರ ನಡೆಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶುಕ್ರವಾರ ವಿಜಯಪುರ ನಗರದ ವಿವಿಧೆಡೆ ಮಿಂಚಿನ ಸಂಚಾರ ನಡೆಸಿ, ಸ್ವಚ್ಛತೆ ಹಾಗೂ ವ್ಯವಸ್ಥೆ ಸುಧಾರಣೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಕಣಕಿ ಬಜಾರ್ ಪ್ರದೇಶದಿಂದ ಸಂಚಾರ ಆರಂಭಿಸಿದ ಜಿಲ್ಲಾಧಿಕಾರಿಗಳು, ಕಣಕಿ ಬಜಾರ್ ಪ್ರದೇಶಕ್ಕೆ ಭೇಟಿ ನೀಡಿ, ಕಸ-ಕಂಟಿಗಳನ್ನು ಬೆಳೆದಿರುವ ಕುರಿತು ಗಮನಿಸಿದ ಅವರು, ಕೂಡಲೇ ಮುಳ್ಳು-ಕಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಣಕಿ ಬಜಾರ್ ಪ್ರದೇಶಲ್ಲಿ ತಾತ್ಕಾಲಿಕವಾಗಿ ವಾಹನಗಳ ನಿಲುಗಡೆ ವ್ಯವಸ್ಥೆ ಕೈಗೊಳ್ಳಲು ಪರಿಶೀಲನೆ ನಡೆಸಿ ಸೂಕ್ತ ವರದಿ ಸಲ್ಲಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ನಿಲ್ದಾಣದ ಆವರಣ ಸೇರಿದಂತೆ ಒಳಭಾಗವನ್ನು ವೀಕ್ಷಣೆ ಮಾಡಿದ ಅವರು, ಫ್ಲಾಟಫಾರಂಗಳಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿವಿಧೆಡೆಯಿಂದ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಫ್ಲಾಟ್‌ಫಾರಂನಲ್ಲಿಯೇ ಕೂಡಲೇ ಪ್ರತ್ಯೇಕವಾಗಿ ಕುಡಿಯುವ ನೀರಿನ ವ್ಯವಸ್ಥೆ…
