ತಿಕೋಟಾ: ರಾಮಾನುಜನ್ ಅವರು ಸ್ವಯಂ-ಕಲಿಕೆಯ ಗಣಿತಶಾಸ್ತ್ರಜ್ಞರಾಗಿದ್ದು, ಅವರು ಸಂಖ್ಯೆ ಸಿದ್ಧಾಂತ, ಅನಂತ ಸರಣಿಗಳು ಮತ್ತು ವಿಶೇಷ ಕಾರ್ಯಗಳನ್ನು ಒಳಗೊಂಡಂತೆ ಗಣಿತದ ವಿವಿಧ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಪ್ರಾಚಾರ್ಯರಾದ ಎಂ ಎ ಹಿರೇಮಠ ಹೇಳಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿ ವಿ ಎಸ್ ಪ್ರೌಢ ಶಾಲೆಯಲ್ಲಿ ಗಣಿತಶಾಸ್ತ್ರಜ್ಞ ರಾಮಾನುಜನ್ ಜನ್ಮ ದಿನಾಚರಣೆ ನಿಮಿತ್ತ ಗಣಿತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಾನುಜನ್ ಅವರ ಜೀವನವನ್ನು ಅತ್ಯಂತ ಬಡತನ ಮತ್ತು ತೊಂದರೆಯಲ್ಲಿ ಕಳೆದರು, ಆದರೆ ಇದರ ಹೊರತಾಗಿಯೂ ರಾಮಾನುಜನ್ ಅವರ ಜೀವನದಲ್ಲಿ ಅನೇಕ ಗಣಿತದ ಸೂತ್ರಗಳು ಮತ್ತು ವಿಧಾನಗಳನ್ನು ನೀಡಿದರು. ಅನೇಕ ಸಂಶೋಧನೆಗಳನ್ನು ಮಾಡಿದರು ಎಂದು ವಿವರಿಸಿದರು.
ರಾಮಾನುಜನ್ ಯವರ ಕನಸಿನಲ್ಲಿ ಚಲನೆಯ ಗಣಿತದ ಸಮೀಕರಣಗಳು ದೈವಿಕ ವರದಂತೆ ದೈವಿಕ ಅನುಗ್ರಹವಾಗಿ ಬಂದವು ಎಂದು ಸಹ ಶಿಕ್ಷಕ ಆಯ್ ಕೆ ನದಾಫ್ ಹೇಳಿದರು.
ಎಂ ಜಿ ಕುಲಕರ್ಣಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗಣಿತ ಶಿಕ್ಷಕ ಎಂ ಜಿ ಕುಲಕರ್ಣಿಯವರನ್ನು ಹತ್ತನೇಯ ತರಗತಿ ವಿದ್ಯಾರ್ಥಿಗಳು ಸನ್ಮಾನಿಸಿದರು.
ವಿದ್ಯಾರ್ಥಿಗಳು ಗಣಿತದ ಅಂಕಿ ಸಂಖ್ಯೆಗಳನ್ನು ತೆಗೆದು ನಾಟಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಜೆ ಎಸ್ ಹಿರೇಮಠ, ಎಸ್ ಪಿ ಪಾತ್ರೊಟ, ಆರ್ ವಿ ಶೇಡ್ಯಾಳ, ಎಂ ಎಸ್ ಹಿರೇಮಠ, ಎಸ್ ಎ ವಾಲಿಕಾರ, ನಿವೇದಿತಾ ಹಿರೇಮಠ, ಧರೆಪ್ಪ ಸಿದ್ನಾಥ ಶಿಕ್ಷಕರು ಇದ್ದರು.
ವಿದ್ಯಾರ್ಥಿನಿ ಪೂಜಾ ಮಠಪತಿ ನಿರೂಪಿಸಿದರು. ಸಹನಾ ಕುರಗೋಡ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

