ವಿಜಯಪುರ: ಕರ್ನಾಟಕ ರೈತ ಜಾಗೃತ ವೇದಿಕೆ ತಾಜಪೂರ ಎಚ್ ಹಾಗೂ ಜಿಲ್ಲಾ ಜಲ ಬಿರಾದರಿ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಾ ಮಟ್ಟದ ರೈತ ಸಂವಾದ ಕಾರ್ಯಕ್ರಮವನ್ನು ಶನಿವಾರ ಡಿ.೨೩ರಂದು ಸಾಯಂಕಾಲ ೪.೦೦ ಗಂಟೆಗೆ ತಾಜಪೂರ ಎಚ್. ಗ್ರಾಮ ಪಂಚಾಯತ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವದೆಹಲಿಯ ವಿಶ್ವ ಜಲ ಪುರುಷ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ರವರು ವಹಿಸುವರು. ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ಕೃಷಿ ಮಂತ್ರಾಲಯದ ಅಧಿಕಾರಿ ಅಶೋಕ ದಳವಾಯಿ, ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ರಾಜೇಂದ್ರ ಪೋತದಾರ, ಜಿಲ್ಲಾ ಜಲ ಬಿರಾದರಿ ಅಧ್ಯಕ್ಷ ಫೀಟರ್ ಅಲೆಕ್ಸಾಂಡರ್, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ವಹಿಸುವರು.
ಈ ಕಾರ್ಯಕ್ರಮದಲ್ಲಿ ರೈತರು ಬೆಳೆಯುವ ಬೆಳೆಗೆ ಪರಿಹಾರ, ಔಷಧಿ ಸಂಪರಣೆ, ಆರ್ಥಿಕ ಲಾಭ ಕೊಡುವ ಬೆಳೆಗಳನ್ನು ಹೇಗೆ ಬೆಳೆಯುವುದು? ರೈತರ ಆರ್ಥಿಕ ಮಟ್ಟ ಸುಧಾರಣೆ, ನೀರಿನ ಸದ್ಭಳಕೆ ಹೇಗೆ ಮಾಡುವದು? ಇನ್ನು ಹಲವಾರು ವಿಷಯಗಳ ಕುರಿತು ಮುಕ್ತವಾದ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರಣ ಈ ಕಾರ್ಯಕ್ರಮದ ಬಬಲೇಶ್ವರ -ತಿಕೋಟಾ ತಾಲೂಕಿನ ಎಲ್ಲ ರೈತ ಬಾಂಧವರು, ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆಂದು ಕರ್ನಾಟಕ ರೈತ ಜಾಗೃತಿ ವೇದಿಕೆಯ ಅಧ್ಯಕ್ಷ ಆರ್.ಜಿ. ಯರನಾಳ ಹಾಗೂ ಪ್ರಗತಿಪರ ರೈತರಾದ ಮೆಹಬೂಬ ಮಾಲಬಾವಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
