Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಟೀಕೆ | ಶಿಕ್ಷಣ ಕ್ಷೇತ್ರ ಕಲುಷಿತಗೊಳಿಸುವ ಕೆಲಸ | ಸಿಎಂ ವಿರುದ್ಧ ವಾಗ್ದಾಳಿ ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಹಿಜಾಬ್ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಮತ್ತೆ ಹಿಜಾಬ್‍ಗೆ ಅವಕಾಶ ಮಾಡಿಕೊಡುವುದಾಗಿ ಹೇಳುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಕೈಹಾಕಿರುವುದು ಈ ನಾಡಿನ ಒಂದು ದುರದೃಷ್ಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕರಾದ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು.ಈ ಕುರಿತು ದೆಹಲಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಅವರಿಂದ ಇಂಥ ಹೇಳಿಕೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಕನಿಷ್ಠ ಪಕ್ಷ ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳನ್ನಾದರೂ ರಾಜಕೀಯದಿಂದ ದೂರ ಇಡುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕಿತ್ತು ಎಂದು ಆಕ್ಷೇಪಿಸಿದರು.ಮಾತೆತ್ತಿದರೆ ಕಾಂಗ್ರೆಸ್ಸಿಗರು ಅಲ್ಪಸಂಖ್ಯಾತರ ಕುರಿತು ಮಾತ್ರ ಮಾತನಾಡುತ್ತಾರೆ. ಕಾಂಗ್ರೆಸ್ಸಿಗರು, ತುಷ್ಟೀಕರಣ ನೀತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದ ಅವರು, ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯದ ನಂತರ 50ರಿಂದ 60 ವರ್ಷಗಳ ಕಾಲ ದೇಶ,…
ಮುದ್ದೇಬಿಹಾಳ: ನಗರವು ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆಗಳನ್ನು ಹೊಂದಿದೆ. ತಾಲೂಕಿನ ನೆರೆಹೊರೆಯ ತಾಲೂಕುಗಳಾದ ನಿಡಗುಂದಿ, ತಾಳಿಕೋಟಿ, ಬಸವನ ಬಾಗೇವಾಡಿ, ಕೋಲ್ಹಾರ ಹಾಗೂ ದೇವರ ಹಿಪ್ಪರಗಿ ಇವೆಲ್ಲವುಗಳನ್ನು ಸೇರಿಸಿ ನೂತನ ಮುದ್ದೇಬಿಹಾಳ ಜಿಲ್ಲೆ ರಚಿಸಿದಲ್ಲಿ ಈ ಭಾಗದ ಎಲ್ಲಾ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೇ ಮುದ್ದೇಬಿಹಾಳದಿಂದ ವಿಜಯಪುರಕ್ಕೆ ೮೫ ಕಿಮೀ ಅಂತರವಿದ್ದು, ಇಲ್ಲಿಯ ಜನರು ವಿವಿಧ ಕೆಲಸಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ತುಂಬಾ ತೊಂದರೆ ಆಗುತ್ತಿದ್ದು, ಕೂಡಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮುದ್ದೇಬಿಹಾಳ ಜಿಲ್ಲೆ ರಚನೆಗೆ ಕ್ರಮ ಕೈಗೊಳ್ಳಲು ವಿನಂತಿಸಿ ಹಿರಿಯ ನ್ಯಾಯವಾದಿ ಸಂಗಮೇಶ ಹೂಗಾರ ಆಗ್ರಹಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಷಯದ ಫೊನ್ ಇನ್ ಕಾರ್ಯಕ್ರಮ ವಿಜಯಪುರ: ಇಂಗ್ಲೀಷ್ ವಿಷಯದ ವ್ಯಾಕರಣ ಮತ್ತು ಪತ್ರಲೇಖನ ಪ್ಯಾರಾಗ್ರಾಫ್, ಪ್ರಬಂಧ ಬರವಣಿಗೆ ಹಾಗೂ ವಿಷಯ ಕರಗತ ಮಾಡಿಕೊಳ್ಳುವುದೂ ಸೇರಿದಂತೆ ತಮ್ಮ ಶೈಕ್ಷಣಿಕ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಸಂಪನ್ಮೂಲ ಶಿಕ್ಷಕರಿಂದ ಪರಿಹಾರ ಪಡೆದುಕೊಂಡರು. ಶಿಕ್ಷಕರು ವಿಷಯ ಸಮಸ್ಯೆ ಸೂಚಿಸುವುದರ ಜೊತೆಗೆ ಆತ್ಮವಿಶ್ವಾಸದ ಪಾಠ ಮಾಡಲಾಯಿತು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ ತಿಳಿಸಿದ್ದಾರೆ.ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಜಿಲ್ಲೆಯ ಎಸ್ಸೆಸ್ಸೆಲ್ಸಿಯ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಸಂಜೆ ೬ ರಿಂದ ರಾತ್ರಿ ೮.೩೦ರವರೆಗೆ ಇಂಗ್ಲೀಷ್ ವಿಷಯದ ಕುರಿತಾಗಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ೨ ಗಂಟೆಗಳ ಅವಧಿಯಲ್ಲಿ ೩೨೫ ವಿದ್ಯಾರ್ಥಿಗಳು ಕೇಳಿದ ೪೫೮ ಪ್ರಶ್ನೆಗಳಿಗೆ ವಿಷಯ ಶಿಕ್ಷಕರು ಪರಿಹಾರ ಸೂಚಿಸಿದರು.ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂಬಲ ಹೆಚ್ಚಾಗುತ್ತಿದೆ. ಕೆಲ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಬೋಧನೆಯಿಂದ ಮತ್ತಷ್ಟು ವಿಷಯ ಕರಗತವಾಗಿ ಅವರ ಕಲಿಕಾ ಮಟ್ಟ ಹೆಚ್ಚಾಗುತ್ತದೆ. ಜಿಲ್ಲಾಧಿಕಾರಿಗಳು ಹಾಗೂ…
ಮುದ್ದೇಬಿಹಾಳ: ತಾಲೂಕಿನ ವಿಶ್ವ ಹಿಂದೂ ಪರಿಷದ್ ನ ಕಾರ್ಯದರ್ಶಿಯನ್ನಾಗಿ ರವಿ ಪವಾರ, ಸಹ ಕಾರ್ಯದರ್ಶಿಯನ್ನಾಗಿ ವಿರೇಶ ಢವಳಗಿ ಹಾಗೂ ಚಂದ್ರು ಬಿರಾದಾರ ನಗರ ಕಾರ್ಯದರ್ಶಿಯನ್ನಾಗಿ ಹಣಮಂತ ಕಲ್ಯಾಣಿ ಅವರನ್ನು ಆಯ್ಕೆ ಮಾಡಿ ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ ಆದೇಶಿಸಿದ್ದಾರೆ.
ಮುದ್ದೇಬಿಹಾಳ: ಭಗವದ್ಗೀತೆ ಕೇವಲ ಧರ್ಮಗ್ರಂಥವಲ್ಲ ಅದು ಹಿಂದೂಗಳ ಶಕ್ತಿ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ನುಡಿದರು.ಪಟ್ಟಣದ ಬಸವನಗರದ ಉದ್ಯಾನ ವನದಲ್ಲಿ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ಹಾಗೂ ಶ್ರೀ ಭಗವದ್ಗೀತಾ ಅಭಿಯಾನ ತಾಲೂಕಾ ಸಮಿತಿ ಮುದ್ದೇಬಿಹಾಳ ಮತ್ತು ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆ ಮುದ್ದೇಬಿಹಾಳ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಭಗವದ್ಗೀತಾ ಜಯಂತಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ಭಗವದ್ಗೀತೆ ಆತ್ಮಾಭಿಮಾನ, ಶಿಸ್ತು, ತಾಳ್ಮೆಯ ಜೊತೆಗೆ ಬದುಕಿನ ಪುಟಕ್ಕೆ ಹೊಸ ಜೀವನದ ಪಾಠ ಕಲಿಸುತ್ತದೆ. ರಾಜಕಾರಣಿ, ಸಂಸಾರಿಗಳಿಗೆ ಹೊಸದಾದ ನೀತಿಯನ್ನು ಬೋಧಿಸುತ್ತದೆ. ಮನುಷ್ಯ ಜೀವನದಲ್ಲಿ ಯಾರನ್ನೂ ಯಕಶ್ಚಿತ ಭಾವನೆಯಿಂದ ನೋಡಬಾರದು. ಧರ್ಮದ ಸದಾಚಾರ ವೃತ್ತಿಯನ್ನು ರೂಢಿಸಿಕೊಳ್ಳಬೇಕು. ಗುಣವಂತನಾಗಿರಬೇಕು, ಒಳ್ಳೆಯ ಮತ್ತು ಕೆಡುಕುಗಳನ್ನು ನಿರ್ಧರಿಸುವಲ್ಲಿ ಗೀತೆಯ ವಿಚಾರಗಳು ಪ್ರಧಾನ ಪಾತ್ರವಹಿಸುತ್ತದೆ. ಯಾವುದೇ ಕಾರಣಕ್ಕೂ ಉದಾಸೀನ, ತಾತ್ಸರ ಪ್ರವೃತ್ತಿ ರೂಢಿಸಿಕೊಳ್ಳದೇ ಉತ್ತಮ ಬದುಕನ್ನು ಕಟ್ಟಿಕೊಳ್ಳುವಂತೆ ಕಿವಿಮಾತು ಹೇಳಿದರು.ಮಾಜಿ ಶಾಸಕ ಎ.ಎಸ್.ಪಾಟೀಲ್…
ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಭವ್ಯ ಮೆರವಣಿಗೆಗೆ ಚಾಲನೆ ಮುದ್ದೇಬಿಹಾಳ: ಶ್ರೀ ರಾಮ ಅಂದರೆ ನಮ್ಮ ದೇಶದ ಸಂಸ್ಕಾರ ಮತ್ತು ಸಂಸ್ಕೃತಿ ಎಂದು ಧಾರವಾಡದ ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠದ ಪ.ಪೂ ವಿರೂಪಾಕ್ಷ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಹುಡ್ಕೋದಲ್ಲಿರುವ ಹನುಮಾನ ದೇವಸ್ಥಾನದಲ್ಲಿ ಶ್ರೀ ರಾಮನ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ ನ ವತಿಯಿಂದ ಹಮ್ಮಿಕೊಳ್ಳಲಾದ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಶ್ರೀ ರಾಮರಿಗೆ ಮರ್ಯಾದಾ ಪುರಶೋತ್ಥಮ ಎಂದು ಕರೆಯುತ್ತಾರೆ. ಅವರು ಯಾವ ರೀತಿಯಾಗಿ ಉತ್ತಮವಾಗಿ ಬಾಳಿ ಬದುಕಿ ತಮ್ಮ ಸಂದೇಶವನ್ನು ನಾಡಿಗೆ ನೀಡಿದರೋ ಆ ಸಂದೇಶದ ಪ್ರಕಾರ ಪ್ರತಿಯೊಬ್ಬರೂ ನಡೆಯೋಣ. ಕೆಲವೇ ದಿನಗಳಲ್ಲಿ ಶ್ರೀ ರಾಮ ಮಂದಿರದ ಉದ್ಘಾಟನಾ ಸಮಾರಂಭ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದರು.ಈ ವೇಳೆ ವಿಶ್ವ ಹಿಂದು ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯಕ, ಪುರಸಭೆ ಸದಸ್ಯ ಚನ್ನಪ್ಪ ಕಂಠಿ, ಬಿ.ಪಿ.ಕುಲಕರ್ಣಿ, ಕಾಶಿಬಾಯಿ ರಾಂಪೂರ, ಲಿಂಗರಾಜ ಮಹೇಂದ್ರಕರ,…
ಬ್ರಹ್ಮದೇವನಮಡು: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಪಾಲಕರ ಪಾತ್ರವೂ ಅಷ್ಟೇ ಮುಖ್ಯ ಎಂದು ಪ್ರಾಂಶುಪಾಲ ರವೀಂದ್ರ ಬಂಥನಾಳ ಹೇಳಿದರು.ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮದ ಮೊರಾಜಿ೯ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ನಡೆದ ಪಾಲಕರ ಸಭೆಯ ಅಧ್ಶಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ಸಾಧನೆ ಮಾಡಲು ಪಾಲಕರು ಸಹಕಾರ ನೀಡಬೇಕು. ಮಕ್ಕಳಲ್ಲಿ ಓದಿನ ಕಡೆ ಹೆಚ್ಚಿನ ಗಮನ ಹರಿಸುವಂತೆ ಮಾಡಬೇಕು. ಪಾಲಕರು ಶಿಕ್ಷಕರಿಗೆ ತಮ್ಮ ಮಗುವಿನ ವಿದ್ಯಾ ಅಭ್ಯಾಸದ ಪ್ರತಿ ತಿಂಗಳ ಅಭಿವೃದ್ಧಿಯ ಬಗ್ಗೆ ಚಚಿ೯ಸಬೇಕು ಎಂದು ಹೇಳಿದರು.ಪಾಲಕರ ಪ್ರತಿನಿಧಿ ರಾಮು ರಾಠೋಡ, ಶಾರದಾ ರಾಠೋಡ, ಸೋಮು ಭಾವಿಮನಿ ಮಾತನಾಡಿ, ಮಕ್ಕಳ ಉನ್ನತ ಶಿಕ್ಷಣದ ಸರ್ವಾಂಗೀಣ ಅಭಿವೃದ್ಧಿಗೆ ನಾವು ನಿಮಗೆ ಸಹಕಾರ ನೀಡುವುದಾಗಿ ಪಾಲಕರು ತಮ್ಮ ಅಭಿಪ್ರಾಯವನ್ನು ವ್ಶಕ್ತಪಡಿಸಿದರು.ಸಂಗೀತ ಶಿಕ್ಷಕ ರಮೇಶ ಗುಬ್ಬೆವಾಡ ನಿರೂಪಿಸಿದರು. ಶಿಕ್ಷಕ ಸುನೀಲ ಬಿರಾದಾರ ವಂದಿಸಿದರು.ವಿದ್ಯಾರ್ಥಿಗಳು, ಪಾಲಕರು, ಶಾಲೆಯ ಎಲ್ಲ ಸಿಬ್ಬಂದಿ ವರ್ಗ…
ಕೆಸರಟ್ಟಿ- ಅಂಬಳನೂರ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಭೂಮಿ ಪೂಜೆ ತಾಳಿಕೋಟಿ: ಜಲಜೀವನ ಮಿಷನ್( ಜೆಜೆಎಂ) ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿದೆ. ನಳ ಜೋಡಣೆ ಮೂಲಕ ಪ್ರತಿ ಮನೆಗೂ ಸಿದ್ಧ ಕುಡಿಯುವ ನೀರು ಪೂರೈಸುವುದು ಇದರ ಉದ್ದೇಶವಾಗಿದೆ. ಇದು ದೀರ್ಘಾವಧಿಯ ಯೋಜನೆ ಆಗಿದ್ದು ಕಾಮಗಾರಿಯು ಗುಣಮಟ್ಟದ್ದಾಗಿರುವಂತೆ ಗುತ್ತಿಗೆದಾರ ಹಾಗೂ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಹೇಳಿದರು.ಮತಕ್ಷೇತ್ರದ ಕೆಸರಟ್ಟಿ ಗ್ರಾಮದಲ್ಲಿ ರೂ. 106 ಲಕ್ಷ ಹಾಗೂ ಅಂಬಳನೂರ ಗ್ರಾಮದಲ್ಲಿ ರೂ. 66 ಲಕ್ಷ ಮೊತ್ತದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸಿಂದಗಿ 2022-23 ನೇ ಸಾಲಿನ ಜೆಜೆಎಂ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಕಾಮಗಾರಿ ನಡೆಯುವಾಗ ಗುತ್ತಿಗೆದಾರ ಹಾಗೂ ಇಲಾಖೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಿಸಬೇಕು ಎಷ್ಟು ಗ್ರಾಮಗಳಲ್ಲಿ ಕಳಪೆ ಕಾಮಗಾರಿಯಿಂದಾಗಿ ಮತ್ತೊಮ್ಮೆ ಕೆಲಸ ಮಾಡಿಸುವ ಅನಿವಾರ್ಯತೆ ಬಂದಿದೆ, ಹೀಗಾಗಬಾರದು. ಇದು ದೀರ್ಘಾವಧಿಯ ಯೋಜನೆಯಾಗಿರುವುದರಿಂದ ಗುಣಮಟ್ಟ ಕೆಡದಂತೆ ನೋಡಿಕೊಳ್ಳಬೇಕು. ಇದಕ್ಕೆ ಗ್ರಾಮದ…
ಶ್ರೀ ಗುರು ವೀರಘಂಟೈ ಮಡಿವಾಳೇಶ್ವರ ದೇವರ ಜೋಡು ತೇರಿನ ರಥೋತ್ಸವ *ಶಿವಾನಂದ ಎಮ್.ಸಜ್ಜನ* ಕಲಕೇರಿ: ಉತ್ತರ ಕರ್ನಾಟಕ ಧಾರ್ಮಿಕ ಪರಂಪರೆಯ ಇತಹಾಸದಲ್ಲಿ ಕಲಕೇರಿಯ ಆರಾಧ್ಯ ದೈವ ಶ್ರೀಗುರು ವೀರಘಂಟೈ ಮಡಿವಾಳೇಶ್ವರರು ಅಗ್ರಣೀಯರು. ೧೨ನೇ ಶತಮಾನದ ಬಸವ ಚಳುವಳಿಯ ಪ್ರಮುಖ ನೇತಾರರಾದ ಮಡಿವಾಳೇಶ್ವರರು ಕಲ್ಯಾಣ ಕ್ರಾಂತಿಯ ನಂತರ ಇಲ್ಲಿಯೇ ಬಂದು ತನ್ನ ಗುರುವಾದ ವೀರಘಂಟಿಯೊಂದಿಗೆ ಲಿಂಗೈಕ್ಯವಾಗಿದ್ದು, ಅದರ ಕುರುಹಾಗಿ ಶ್ರೀಗುರು ವೀರಘಂಟಿ ಮಡಿವಾಳೇಶ್ವರ ದೇವಸ್ಥಾನವು ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ತಮಿಳುನಾಡಿನಾದ್ಯಂತ ಭಕ್ತ ಸಮೂಹವನ್ನು ಹೊಂದಿ, ಗದ್ದುಗೆಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ. ಈ ದೇವಸ್ಥಾನವು ಹಿಂದು-ಮುಸ್ಲಿಂ ಭಾವಕೈತೆಯ ಸಂಕೇತವಾಗಿರುವುದಲ್ಲದೇ ಸರ್ವ ಜನಾಂಗದ ಬಹುದೊಡ್ಡ ಭಕ್ತ ಪರಂಪರೆಯನ್ನು ಹೊಂದಿದೆ.ಇಲ್ಲಿ ಪ್ರತಿವರ್ಷ ಹೊಸ್ತಿಲ ಹುಣ್ಣಿಮೆಯಂದು ನಡೆಯುವ ಜಾತ್ರೆಯು ಕರ್ನಾಟಕದಲ್ಲಿ ನಡೆಯುವ ಜಾತ್ರೆಗಳಲ್ಲಿಯೇ ವಿಶೇಷವಾಗಿದೆ. ಇಲ್ಲಿ ಗುರು ಶಿಷ್ಯರ ಪರಂಪರೆಯ ಸಂಕೇತವಾಗಿ ಜಾತ್ರೆಯಲ್ಲಿ ಇಂದಿಗೂ ಜೋಡು ಉಚ್ಚಾಯಿ ಉತ್ಸವ, ಜೋಡು ತೇರು ಎಳೆಯುವ, ಜೋಡು ಕೊಡೆ, ಜೋಡು ತೆಂಗಿನಕಾಯಿ ಒಡೆಯುವ, ಜೋಡು ಪಾದುಗಟ್ಟೆಯನ್ನು ಹೊಂದಿದ ವಿಶೇಷವಾದ ಜಾತ್ರೆಯಾಗಿದ್ದು, ಪ್ರತಿ ವರ್ಷವೂ…
ಶ್ರೀ ಗುರು ವೀರಘಂಟೈ ಮಡಿವಾಳೇಶ್ವರ ದೇವರ ಜೋಡು ತೇರಿನ ರಥೋತ್ಸವ *ಶಿವಾನಂದ ಎಮ್.ಸಜ್ಜನ* ಕಲಕೇರಿ: ಉತ್ತರ ಕರ್ನಾಟಕ ಧಾರ್ಮಿಕ ಪರಂಪರೆಯ ಇತಹಾಸದಲ್ಲಿ ಕಲಕೇರಿಯ ಆರಾಧ್ಯ ದೈವ ಶ್ರೀಗುರು ವೀರಘಂಟೈ ಮಡಿವಾಳೇಶ್ವರರು ಅಗ್ರಣೀಯರು. ೧೨ನೇ ಶತಮಾನದ ಬಸವ ಚಳುವಳಿಯ ಪ್ರಮುಖ ನೇತಾರರಾದ ಮಡಿವಾಳೇಶ್ವರರು ಕಲ್ಯಾಣ ಕ್ರಾಂತಿಯ ನಂತರ ಇಲ್ಲಿಯೇ ಬಂದು ತನ್ನ ಗುರುವಾದ ವೀರಘಂಟಿಯೊಂದಿಗೆ ಲಿಂಗೈಕ್ಯವಾಗಿದ್ದು, ಅದರ ಕುರುಹಾಗಿ ಶ್ರೀಗುರು ವೀರಘಂಟಿ ಮಡಿವಾಳೇಶ್ವರ ದೇವಸ್ಥಾನವು ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ತಮಿಳುನಾಡಿನಾದ್ಯಂತ ಭಕ್ತ ಸಮೂಹವನ್ನು ಹೊಂದಿ, ಗದ್ದುಗೆಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ. ಈ ದೇವಸ್ಥಾನವು ಹಿಂದು-ಮುಸ್ಲಿಂ ಭಾವಕೈತೆಯ ಸಂಕೇತವಾಗಿರುವುದಲ್ಲದೇ ಸರ್ವ ಜನಾಂಗದ ಬಹುದೊಡ್ಡ ಭಕ್ತ ಪರಂಪರೆಯನ್ನು ಹೊಂದಿದೆ.ಇಲ್ಲಿ ಪ್ರತಿವರ್ಷ ಹೊಸ್ತಿಲ ಹುಣ್ಣಿಮೆಯಂದು ನಡೆಯುವ ಜಾತ್ರೆಯು ಕರ್ನಾಟಕದಲ್ಲಿ ನಡೆಯುವ ಜಾತ್ರೆಗಳಲ್ಲಿಯೇ ವಿಶೇಷವಾಗಿದೆ. ಇಲ್ಲಿ ಗುರು ಶಿಷ್ಯರ ಪರಂಪರೆಯ ಸಂಕೇತವಾಗಿ ಜಾತ್ರೆಯಲ್ಲಿ ಇಂದಿಗೂ ಜೋಡು ಉಚ್ಚಾಯಿ ಉತ್ಸವ, ಜೋಡು ತೇರು ಎಳೆಯುವ, ಜೋಡು ಕೊಡೆ, ಜೋಡು ತೆಂಗಿನಕಾಯಿ ಒಡೆಯುವ, ಜೋಡು ಪಾದುಗಟ್ಟೆಯನ್ನು ಹೊಂದಿದ ವಿಶೇಷವಾದ ಜಾತ್ರೆಯಾಗಿದ್ದು, ಪ್ರತಿ ವರ್ಷವೂ…
