ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಭವ್ಯ ಮೆರವಣಿಗೆಗೆ ಚಾಲನೆ
ಮುದ್ದೇಬಿಹಾಳ: ಶ್ರೀ ರಾಮ ಅಂದರೆ ನಮ್ಮ ದೇಶದ ಸಂಸ್ಕಾರ ಮತ್ತು ಸಂಸ್ಕೃತಿ ಎಂದು ಧಾರವಾಡದ ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠದ ಪ.ಪೂ ವಿರೂಪಾಕ್ಷ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಹುಡ್ಕೋದಲ್ಲಿರುವ ಹನುಮಾನ ದೇವಸ್ಥಾನದಲ್ಲಿ ಶ್ರೀ ರಾಮನ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ ನ ವತಿಯಿಂದ ಹಮ್ಮಿಕೊಳ್ಳಲಾದ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀ ರಾಮರಿಗೆ ಮರ್ಯಾದಾ ಪುರಶೋತ್ಥಮ ಎಂದು ಕರೆಯುತ್ತಾರೆ. ಅವರು ಯಾವ ರೀತಿಯಾಗಿ ಉತ್ತಮವಾಗಿ ಬಾಳಿ ಬದುಕಿ ತಮ್ಮ ಸಂದೇಶವನ್ನು ನಾಡಿಗೆ ನೀಡಿದರೋ ಆ ಸಂದೇಶದ ಪ್ರಕಾರ ಪ್ರತಿಯೊಬ್ಬರೂ ನಡೆಯೋಣ. ಕೆಲವೇ ದಿನಗಳಲ್ಲಿ ಶ್ರೀ ರಾಮ ಮಂದಿರದ ಉದ್ಘಾಟನಾ ಸಮಾರಂಭ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದರು.
ಈ ವೇಳೆ ವಿಶ್ವ ಹಿಂದು ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯಕ, ಪುರಸಭೆ ಸದಸ್ಯ ಚನ್ನಪ್ಪ ಕಂಠಿ, ಬಿ.ಪಿ.ಕುಲಕರ್ಣಿ, ಕಾಶಿಬಾಯಿ ರಾಂಪೂರ, ಲಿಂಗರಾಜ ಮಹೇಂದ್ರಕರ, ಮಾಣಿಕ ದಂಡಾವತಿ, ವಿಕ್ರಂ ಓಸ್ವಾಲ, ಮೋಹನ ಪಟೇಲ, ಶಿವಾನಂದ ನಾಗರಾಳ, ಶ್ರೀಶೈಲ ದೊಡಮನಿ, ರವೀಂದ್ರ ಬಿರಾದಾರ, ಸಂತೋಷ ಬಾದರಬಂಡಿ, ರವಿ ಪವಾರ, ವಿರೇಶ ಢವಳಗಿ, ಚಂದ್ರು ಬಿರಾದಾರ, ಸಂತೋಷ ಬಾವೂರ, ಅಶೋಕ ರಾಠೋಡ, ಪರಶುರಾಮ ನಾಲತವಾಡ, ಸಂಜು ಬಾಗೇವಾಡಿ, ರಾಮಚಂದ್ರ ಹೆಗಡೆ, ದಾನೇಶ್ವರಿ ಹಿರೇಮಠ, ಸುಜಾತ ನಾವದಗಿ, ಅಂಬಿಕಾ ಬಳಗಾನೂರ, ಶಕುಂತಲಾ ಅಮಲ್ಯಾಳ, ಗುರುದೇವಿ ಹಿರೇಮಠ, ರೂಪಾ ಮೆರೆಖೋರ, ರೇಣುಕಾ ಮತ್ತತ್ತಿ, ಇಂದಿರಾ ಹೊಸಮನಿ, ಶಾಂತಾ ಚಳಗೇರಿ ಸೇರಿದಂತೆ ಮತ್ತೀತರರು ಇದ್ದರು.

