ಬ್ರಹ್ಮದೇವನಮಡು: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಪಾಲಕರ ಪಾತ್ರವೂ ಅಷ್ಟೇ ಮುಖ್ಯ ಎಂದು ಪ್ರಾಂಶುಪಾಲ ರವೀಂದ್ರ ಬಂಥನಾಳ ಹೇಳಿದರು.
ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮದ ಮೊರಾಜಿ೯ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ನಡೆದ ಪಾಲಕರ ಸಭೆಯ ಅಧ್ಶಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಸಮಾಜದಲ್ಲಿ ಒಳ್ಳೆಯ ಸಾಧನೆ ಮಾಡಲು ಪಾಲಕರು ಸಹಕಾರ ನೀಡಬೇಕು. ಮಕ್ಕಳಲ್ಲಿ ಓದಿನ ಕಡೆ ಹೆಚ್ಚಿನ ಗಮನ ಹರಿಸುವಂತೆ ಮಾಡಬೇಕು. ಪಾಲಕರು ಶಿಕ್ಷಕರಿಗೆ ತಮ್ಮ ಮಗುವಿನ ವಿದ್ಯಾ ಅಭ್ಯಾಸದ ಪ್ರತಿ ತಿಂಗಳ ಅಭಿವೃದ್ಧಿಯ ಬಗ್ಗೆ ಚಚಿ೯ಸಬೇಕು ಎಂದು ಹೇಳಿದರು.
ಪಾಲಕರ ಪ್ರತಿನಿಧಿ ರಾಮು ರಾಠೋಡ, ಶಾರದಾ ರಾಠೋಡ, ಸೋಮು ಭಾವಿಮನಿ ಮಾತನಾಡಿ, ಮಕ್ಕಳ ಉನ್ನತ ಶಿಕ್ಷಣದ ಸರ್ವಾಂಗೀಣ ಅಭಿವೃದ್ಧಿಗೆ ನಾವು ನಿಮಗೆ ಸಹಕಾರ ನೀಡುವುದಾಗಿ ಪಾಲಕರು ತಮ್ಮ ಅಭಿಪ್ರಾಯವನ್ನು ವ್ಶಕ್ತಪಡಿಸಿದರು.
ಸಂಗೀತ ಶಿಕ್ಷಕ ರಮೇಶ ಗುಬ್ಬೆವಾಡ ನಿರೂಪಿಸಿದರು. ಶಿಕ್ಷಕ ಸುನೀಲ ಬಿರಾದಾರ ವಂದಿಸಿದರು.
ವಿದ್ಯಾರ್ಥಿಗಳು, ಪಾಲಕರು, ಶಾಲೆಯ ಎಲ್ಲ ಸಿಬ್ಬಂದಿ ವರ್ಗ ಸಭೆಯಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

