Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಪಟ್ಟಣದ ತಾಳಿಕೋಟಿ ರಸ್ತೆ ಮಿನಿ ವಿಧಾನಸೌಧ ಎದುರುಗಡೆ ಇರುವ ಗುರಸಂಗಪ್ಪ ಕೋಣಿನ ಅವರ ತೋಟದಲ್ಲಿರುವ ಶಿವಯೋಗೇಶ್ವರ ದೇವಸ್ಥಾನದ ಶಿವಯೋಗೇಶ್ವರ ಜಾತ್ರೆಯು ಸೋಮವಾರ ಸಡಗರ,ಸಂಭ್ರಮದಿಂದ ಜರುಗಿತು.ಬೆಳಗ್ಗೆ ಅಗ್ಗಿಪುಟು ಕಾರ್ಯಕ್ರಮ ಜರುಗಿತು. ನಂತರ ಎತ್ತಿನ ಬಂಡಿಯಲ್ಲಿ ಶಿವಪ್ಪ ಮುತ್ಯಾರವರ ಭಾವಚಿತ್ರ ಮೆರವಣಿಗೆ ಸಕಲ ವಾದ್ಯವೈಭವದೊಂದಿಗೆ ಬಸವ ತೀರ್ಥದಲ್ಲಿ ಪಲ್ಲಕ್ಕಿ ಉತ್ಸವದೊಂದಿಗೆ ಗಂಗಾಸ್ಥಳ ಮುಗಿಸಿ ಪುರವಂತರ ಸೇವೆಯೊಂದಿಗೆ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ವಾದ್ಯಮೇಳದೊಂದಿಗೆ, ಸುಮಂಗಲೆಯರ ಕುಂಭ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರಸಂಗಪ್ಪ ಕೋಣಿನ ಅವರ ತೋಟಕ್ಕೆ ಪಲ್ಲಕ್ಕಿ ಉತ್ಸವ ಮರಳಿತು.ಕತೃಗದ್ದುಗೆಗೆ ಕುಂಭಾಭಿಷೇಕ,ಮಹಾಪೂಜೆ ನೆರವೇರಿದ ನಂತರ ಶಿವಯೋಗೇಶ್ವರ ದೇವಸ್ಥಾನದ ಮುಂಭಾಗ ಭಕ್ತರು ಪಲ್ಲಕ್ಕಿಯೊಂದಿಗೆ ಅಗ್ಗಿ ಹಾಯ್ದರು. ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಶಿವಯೋಗೇಶ್ವರ ದೇವಸ್ಥಾನದಲ್ಲಿ ಪೂಜೆ, ಇತರೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮುತ್ಯಾರವರ ದರ್ಶನ ಪಡೆದು ಕೃತಾರ್ಥರಾದರು.ರಾತ್ರಿ ನಿಡೋಣಿಯ ಬೀರಲಿಂಗೇಶ್ವರ ಡೊಳ್ಳಿನ ಹಾಡಕಿ ಸಂಘ ಹಾಗೂ ನಾಗೂರಿನ ಅಮೋಘಸಿದ್ದೇಶ್ವರ ಡೊಳ್ಳಿನ ಹಾಡಕಿ ಸಂಘದಿಂದ…
ಮುದ್ದೇಬಿಹಾಳದಲ್ಲಿ ಆಮ್‌ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿಕೆ ಮುದ್ದೇಬಿಹಾಳ: ದೆಹಲಿಯಲ್ಲಿ ಆಪ್ ಜಾರಿಗೊಳಿಸಲಾದ ಉಚಿತ ಯೋಜನೆಗಳನ್ನು ಕದ್ದು ಕಾಂಗ್ರೇಸ್ ಸರ್ಕಾರ ಇಲ್ಲಿ ಜಾರಿಗೊಳಿಸಿದೆ ಎಂದು ಹಿರಿಯ ನಟ, ಆಮ್‌ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.ಪಟ್ಟಣದ ೧೮ನೇ ವಾರ್ಡಿನ ಉಪಚುನಾವಣೆ ಹಿನ್ನೆಲೆ ಪ್ರಚಾರಕ್ಕೆ ಆಗಮಿಸಿದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವರು ಉಚಿತ ಯೋಜನೆಗಳನ್ನು ಜಾರಿ ಮಾಡಿದ್ದು ಚುನಾವಣೆಗೋಸ್ಕರ. ಈ ಹಿಂದೆ ಇವರ ಸರ್ಕಾರ ಆಡಳಿತದಲ್ಲಿದ್ದಾಗ ಸಿದ್ಧರಾಮಯ್ಯನವರೇ ಸಿಎಂ ಆಗಿದ್ರು. ಆಗ ಈ ಸಮಸ್ಯೆಗಳು ಇವರ ಗಮನಕ್ಕಿರಲಿಲ್ಲವೇ. ಇದೆಲ್ಲ ನಮ್ಮಿಂದ ಕದ್ದಿದ್ದಾರೆ.ಸಧ್ಯ ಕುಟುಂಬ ರಾಜಕಾರಣ, ಜಾತಿ, ಕೋಮುವಾದ ಹೆಚ್ಚಾಗಿರುವದರಿಂದ ಆಪ್ ಜನಸಾಮಾನ್ಯರನ್ನು ಕಣಕ್ಕಿಳಿಸುತ್ತಿದೆ. ಚುನಾವಣೆ ನಡೆಸಲು ಸಿಕ್ಕಾಪಟ್ಟೆ ಹಣ ಖರ್ಚು ಮಾಡುವ ಪಕ್ಷ ನಮ್ಮದಲ್ಲ. ಸಧ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಇಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ಎಂದರು.ಬಳಿಕ ಪಕ್ಷದ ಅಭ್ಯರ್ಥಿ ನ್ಯಾಯವಾದಿ ನೂರಅಹ್ಮದ ಶಿವಣಗಿ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು, ಉಪಾಧ್ಯಕ್ಷರಾದ ವಿಜಯ್ ಶರ್ಮಾ, ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಅವರು…
ಸಿಂದಗಿಯ ಭೀಮಾ ಸೆಂಟ್ರಲ್ ಯುನಿವರ್ಸಲ್ ಶಾಲೆಯಲ್ಲಿ ಕ್ರೀಡಾ ಮಹೋತ್ಸವಕ್ಕೆ ಚಾಲನೆ ಸಿಂದಗಿ: ಸದೃಢ ದೇಹದಲ್ಲಿ ಸದೃಢ ಮನಸ್ಸಿದೆ. ಮಕ್ಕಳು ಆಟವಾಡುವುದರ ಮೂಲಕ ದೈಹಿಕವಾಗಿ ಬಲಿಷ್ಟರಾಗುತ್ತಾರೆ. ಮತ್ತು ಯಾವುದೇ ಅನಾರೋಗ್ಯಕ್ಕೆ ಒಳಗಾಗದೇ ಮಾನಸಿಕ ವಿಕಾಸಕ್ಕೆ ಪ್ರೇರೆಪಿಸುತ್ತದೆ ಎಂದು ದೈಹಿಕ ಶಿಕ್ಷಕ ಸಂಗಮೇಶ ಮಲ್ಲೇದ ಹೇಳಿದರು.ಪಟ್ಟಣದ ಹೊರವಲಯದ ಭೀಮಾ ಸೇಂಟ್ರಲ್ ಯುನಿವರ್ಸಲ್ ಶಾಲೆಯಲ್ಲಿ ಹಮ್ಮಿಕೊಂಡ ಕ್ರೀಡಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮೂಹ ಆಟಗಳಾದ ಖೋಖೋ, ವಾಲಿಬಾಲ್, ಥೋಬಾಲ್, ಫುಟ್ಬಾಲ್, ಹ್ಯಾಂಡ್‌ಬಾಲ್ ಆಡುವುದರ ಮೂಲಕ ಮಕ್ಕಳಲ್ಲಿ ಒಗ್ಗಟ್ಟಿನ ಮನೋಭಾವದ ಜೊತೆಗೆ ದೈಹಿಕವಾಗಿ ಸಧೃಡರಾಗುತ್ತಾರೆ ಎಂದರು.ಈ ವೇಳೆ ಶಾಲೆಯ ಪ್ರಾಂಶುಪಾಲೆ ಹೀಮಾಬಿಂದು ಮಾತನಾಡಿದರು.ಇದೇ ಸಂದರ್ಭದಲ್ಲಿ ಡಾ.ಎಂ.ಎಂ.ಪಡಶೆಟ್ಟಿ, ಜಿ.ಕೆ. ಪಡಗಾನೂರ, ಶ್ರೀಮಂತ್ ಮಲ್ಲೆದ, ಭೀಮಾಶಂಕರ ತಾರಾಪುರ, ಪ್ರಶಾಂತ ಕಮತಗಿ, ದತ್ತು ಮಾವೂರ, ಶರಣು ಮಾವೂರ, ಶಾಂತು ಕುಂಬಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಇದ್ದರು.
ಸಿಂದಗಿ: ತಾಲೂಕಿನ ಬೋರಗಿಯ ನಬಿರೋಶನ, ಪ್ರಕಾಶನ ವತಿಯಿಂದ ಬೆಂಗಳೂರಿನ ಕೋರಮಂಗಲ ಭವನದಲ್ಲಿ ಆರಕ್ಷಕ ಮೌಲಾಲಿ ಕೆ. ಆಲಗೂರ ಇವರ ’ನಲುಗದಿರಲಿ ಪರಿಸರ’ ಕೃತಿ ಬಿಡುಗಡೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.ಪಟ್ಟಣದ ಪ್ರವಚನಗಾರ್ತಿ, ಹಾಸ್ಯ ಭಾಷಣಗಾರ್ತಿ ಇಂದುಮತಿ ಸಾಲಿಮಠ ಇವರಿಗೆ ’ಕರುನಾಡ ಶ್ರೇಷ್ಠ ವಾಗ್ಮಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವೇದಿಕೆಯ ಮೇಲೆ ಡಿವೈಎಸ್ಪಿ ವಿನೋದ ಕುಮಾರ, ಇನ್ಸ್ಪೆಕ್ಟರುಗಳಾದ ಜ್ಯೋತಿರ್ಲಿಂಗ ಹೊನ್ನಕಟ್ಟಿ, ಎಂ.ರಮೇಶ, ಪಿಎಸ್‌ಐ ಟಿಪ್ಪು ನಾಯಕವಾಡಿ, ಸಾಹಿತಿ ಡಾ.ಸಮೀರ ಹಾದಿಮನಿ, ಡಾ.ರಾಜು ಆಲಗೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಿಂದಗಿ: ಸಂತೋಷದ ಸಮಯವಾಗಲಿ ಅಥವಾ ಕಷ್ಟದ ಸಮಯವಾಗಲಿ, ಒಂಟಿತನದ ಇದ್ದಾಗಲಿ ಅಥವಾ ಸ್ನೇಹಿತರೊಂದಿಗೆ ಆನಂದಿಸುವ ಸಮಯವಾಗಲಿ, ಪ್ರಯಾಣಿಸುವಾಗ ಅಥವಾ ಮನೆಯಲ್ಲಿ ಕೆಲಸ ಮಾಡುವಾಗ, ಸಂಗೀತವು ನಮ್ಮ ಜೀವನದ ಪ್ರತಿಯೊಂದು ಭಾಗದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗುರುರಾಜ ನಡುವಿನಕೇರಿ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಐಡಿಎಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಅಮೋಘಸಿದ್ದೇಶ್ವರ ಸಾಂಸ್ಕೃತಿಕ ಕಲಾ ತಂಡದಿಂದ ಹಮ್ಮಿಕೊಂಡ ಸಂಗೀತ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಗೀತ ನಮ್ಮ ಮನಸ್ಸು ಕದಡಿದಾಗ ಶಾಂತಗೊಳಿಸಲು ಅಥವಾ ಕೆಲವೊಮ್ಮೆ ಸಂತೋಷವನ್ನು ಯಾವುದೇ ಕಟ್ಟುಪಾಡಿಲ್ಲದೇ ಅನುಭವಿಸಲು ಸಾಧ್ಯ. ಯುವಕರು ಮೊಬೈಲ್ ಗೀಳಿನ ಹಿಂದೆ ಬಿದ್ದು ಸುಂದರ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.ಈ ವೇಳೆ ವಿವಿಧ ಕಲಾವಿದರು ಹಾಡುಗಳ ಮೂಲಕ ಮನರಂಜಿಸಿದರು. ಕಾರ್ಯಕ್ರಮದಲ್ಲಿ ಪರಶುರಾಮ ದೇಸುಣಗಿ, ಮಂಜುನಾಥ ಕೆಂಭಾವಿ. ರಮೇಶ ನಾಟಿಕಾರ, ಕಲಾವಿದರಾದ ರವಿ ವಿಭೂತಿ. ಭೀಮು ಕಟ್ಟಿಮನಿ. ಅಧ್ಯಕ್ಷ ಭೀಮಾಶಂಕರ ಕಟ್ಟಿಮನಿ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದರು.
ಸಿಂದಗಿ: ಮೈಸೂರಿನಲ್ಲಿ ನಡೆದ “ಇಂಡಿಯನ್ ಕೌನ್ಸಿಲ್ ಫಾರ್ ಸ್ಪೋರ್ಟ್ಸ್ ಆಂಡ್ ಎಜ್ಯುಕೇಶನ್”(ಐಸಿಎಸ್‌ಇ) ವತಿಯಿಂದ “ನ್ಯಾಷನಲ್ ಕರಾಟೆ ಚಾಂಪಿಯನಶಿಪ್‌ನಲ್ಲಿ ಪಟ್ಟಣದ ಹೊರವಲಯದ ಮಾತಾಲಕ್ಷ್ಮೀ ಪಬ್ಲಿಕ್ ಶಾಲೆ ೯ನೇ ತರಗತಿ ವಿದ್ಯಾರ್ಥಿ ಅದಿಶ. ಆರ್.ಹೊಸಮನಿ ಚಿನ್ನದ ಪದಕ ಗೆದ್ದು ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ.ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯ ಪ್ರಸನ್ನ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್.ಹೆಚ್.ಬಿರಾದಾರ, ಕ್ಷೇತ್ರ ಸಮನ್ವಯಧಿಕಾರಿ ಆಯ್ ಎಸ್ ಟಕ್ಕೆ ಅಭಿನಂದಿಸಿದ್ದಾರೆ.
ಸಿಂದಗಿ: ಮೈಸೂರಿನಲ್ಲಿ ನಡೆದ “ಇಂಡಿಯನ್ ಕೌನ್ಸಿಲ್ ಫಾರ್ ಸ್ಪೋರ್ಟ್ಸ್ ಆಂಡ್ ಎಜ್ಯುಕೇಶನ್” (ಐಸಿಎಸ್‌ಇ) ವತಿಯಿಂದ “ನ್ಯಾಷನಲ್ ಕರಾಟೆ ಚಾಂಪಿಯನಶಿಪ್‌ನಲ್ಲಿ ಪಟ್ಟಣದ ಹೊರವಲಯದ ಕಾವ್ಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಆಸ್ಮಾ ಬಾಬು ಮುಗುಳಿ ಚಿನ್ನದ ಪದಕ ಗೆದ್ದು ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.ವಿದ್ಯಾರ್ಥಿನಿಯ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್.ಹೆಚ್.ಬಿರಾದಾರ, ಕ್ಷೇತ್ರ ಸಮನ್ವಯಧಿಕಾರಿ ಆಯ್.ಎಸ್.ಟಕ್ಕೆ, ಸಂಸ್ಥೆಯ ಅಧ್ಯಕ್ಷೆ ಕಾಂಚನಾ ನಾಗರಬೆಟ್ಟ, ಕಾರ್ಯದರ್ಶಿ ಚಂದ್ರಶೇಖರ ನಾಗರಬೆಟ್ಟ, ಮುಖ್ಯೋಪಾಧ್ಯಾಯ ರಾಜಕುಮಾರ ಕಾಂಬಳೆ ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.
ಓಂ ಪ್ರಾಥಮಿಕ ಶಾಲೆಯಲ್ಲಿ ಆಧುನಿಕ ಸಂತೆ ಮೇಳ ಉದ್ಘಾಟಿಸಿದ ಶಾಸಕ ವಿಠ್ಠಲ ಕಟಕಧೋಂಡ ಅಭಿಮತ ಚಡಚಣ: ಮಕ್ಕಳಲ್ಲಿ ವ್ಯಾಪಾರ ವ್ಯವಹಾರ ಬೆಳಸಲು ಸಂತೆ ಮೇಳ ಸಹಕಾರಿಯಾಗಲಿದೆ ಎಂದು ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.ಪಟ್ಟಣದ ಓಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಲಾದ ಮಕ್ಕಳ ಆಧುನಿಕ ಸಂತೆ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.ಶಾಲೆಯಲ್ಲಿ ಸಂತೆಮೇಳ ಆಯೋಜಿಸುವದರಿಂದ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಯಲ್ಲಿ ವ್ಯವಹಾರ ಬೆಳೆಸಲು ಸಹಾಯವಾಗುತ್ತದೆ. ದಿನನಿತ್ಯ ಸೇವಿಸುವ ಆಹಾರ ವಸ್ತುಗಳು ರಸ್ತೆಮೇಲೆ ಇಟ್ಟು ಮಾರಾಟ ಮಾಡದೇ ಸೂಕ್ತ ಸ್ಥಳ ನಿಯೋಜನೆ ಮಾಡುವುದು ಅವಶ್ಯಕತೆ ಇದೆ. ಇಂದಿನ ಯುಗದಲ್ಲಿ ಇಡಬಾರದ ವಸ್ತುಗಳು ಶೋರೂಮದಲ್ಲಿ ಇಟ್ಟು, ದಿನ ನಿತ್ಯ ಸೇವಿಸುವ ಆಹಾರ ವಸ್ತುಗಳನ್ನು ರಸ್ತೆ ಮೇಲೆ ಇಟ್ಟು ಮಾರಾಟ ಮಾಡುತ್ತಿರುವುದು ದುರದೃಷ್ಠಕರ ಎಂದರು.ಸಂತೆಯಲ್ಲಿ ಮಕ್ಕಳು ಎಲ್ಲಾ ತರಹದ ತರಕಾರಿಗಳನ್ನು, ದವಸ-ಧಾನ್ಯಗಳನ್ನು, ಹಣ್ಣು-ಹಂಪಲುಗಳನ್ನು, ಸ್ಟೇಷನರಿ ವಸ್ತುಗಳನ್ನು, ಇಲೆಕ್ಟ್ರಿಕಲ್ ವಸ್ತುಗಳನ್ನು, ಮಾರಾಟಕ್ಕೆ ಇಟ್ಟಿದ್ದರು, ಸಂತೆಯಲ್ಲಿ ಉಪಜೀವನಕ್ಕಾಗಿ ಕರಡಿ ಆಡಿಸುವವರು, ಡೊಂಬರಾಟದವರು, ಗರದಿ ಗಮ್ಮತ್ತು ಆಡಿಸುವವರು ಹೀಗೆ ವಿವಿಧ…
ಆಲಮೇಲ: ಇಲ್ಲಿಯ ಹಿರಿಯ ಕಾದಂಬರಿಕಾರ,ಸಿದ್ಧರಾಮ ಉಪ್ಪಿನ ಅವರಿಗೆ ಸಮಗ್ರ ಸಾಹಿತ್ಯ ಮತ್ತು ಜೀವಮಾನ ಸಾಧನೆಯ ಗೌರವಾರ್ಥ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ.ಇದೇ ಡಿ.30ರಂದು ಸಾಯಂಕಾಲ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ”ದಲ್ಲಿ ಜರುಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿದ್ಧರಾಮ ಉಪ್ಪಿನ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.ಸಮಾವೇಶದ ಉದ್ಘಾಟನೆ,ಡಾ ಮಲ್ಲೇಶ್ವರಂ ಜಿ ವೆಂಕಟೇಶ ಹಾಗೂ ಪ್ರಶಸ್ತಿ ವಿತರಣೆ ಡಾ ಸತೀಶಕುಮಾರ, ನಿರ್ದೇಶಕರು ಸಾರ್ವಜನಿಕ ಕೇಂದ್ರ ಗ್ರಂಥಾಲಯ ಇಲಾಖೆ ಬೆಂಗಳೂರ ರವರು ಮಾಡುವರು. ಈ ಸಮಾವೇಶದಲ್ಲಿ ನಾಡಿನ ಹೆಸರಾಂತ ಕಲಾ ತಂಡಗಳ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ರಮೇಶ ಸುರ್ವೆ ತಿಳಿಸಿದ್ದಾರೆ.ಸಿದ್ಧರಾಮ ಉಪ್ಪಿನ ಅವರು ಕಾದಂಬರಿ, ಜೀವನ ಚರಿತ್ರೆ, ಆತ್ಮಕಥನ, ಲಲಿತ ಪ್ರಬಂಧ, ವ್ಯಕ್ತಿಚಿತ್ರಣ ಹಾಗೂ ಕಾವ್ಯ ಈಎಲ್ಲ ಪ್ರಕಾರಗಳ ಸಾಹಿತ್ಯ ಸೇರಿ 23 ಗ್ರಂಥ ರಚಿಸಿದ್ದಾರೆ.
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಗುರು ವೀರಘಂಟೈ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಡಿ.೨೪ ರಂದು ಸಂಜೆ ೬ ಗಂಟೆಗೆ ಧಮ೯ಸಭೆ ನಡೆಯಲಿದೆ ಎಂದು ಮಠಾಧ್ಶಕ್ಷ ಗುರುಲಿಂಗಯ್ಶ ಸ್ವಾಮೀಜಿ ತಿಳಿಸಿದ್ದಾರೆ. ಮಾಗಣಗೇರಾ ಬೃಹನ್ಮಠದ ಡಾ.ವಿಶ್ವರಾಧ್ಶ ಶಿವಾಚಾಯ೯ರು, ಯಂಕಂಚಿ ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾಯ೯ರು ಧಮ೯ಸಭೆಯ ದಿವ್ಶ ಸಾನ್ನಿಧ್ಶವಹಿಸುವರು. ಶ್ರೀಮಠದ ಗುರುಲಿಂಗಯ್ಶ ಗದ್ದಗಿಮಠ ಸ್ವಾಮೀಜಿ, ಅಯ್ಶಪ್ಪಯ್ಶ ಸ್ವಾಮೀಜಿ ನೇತೃತ್ವ. ಕುಳಗೇರಾ ದಗಾ೯ದ ಸಯ್ಶದ ಹುಸೇನಪಾಷಾ ಮೋದಿನಪಾಷಾ ಸಜ್ಜಾದೇ ನಶೀನ ದಗಾ೯, ಸಾಗನೂರದ ಗುರುಸಿದ್ದಯ್ಶ ಹಿರೇಮಠ ಉಪಸ್ಥಿತಿ, ಯಂಕನಗೌಡ ಪಾಟೀಲ ಅಧ್ಶಕ್ಷತೆ, ಶಾಸಕ ಅಶೋಕ ಮನಗೂಳಿ ಧಮ೯ಸಭೆ ಉದ್ಘಾಟಿಸುವರು. ಮಾಜಿ ಶಾಸಕ ರಮೇಶ ಭೂಸನೂರ ಜ್ಶೋತಿ ಬೆಳಗಿಸುವರು. ಮಡಿವಾಳಪ್ಪಗೌಡ ಬಿರಾದಾರ ಮಾಗಣಗೇರಾ, ಸಂಗನಗೌಡ ಪಾಟೀಲ ಖಾನಾಪೂರ, ಸಿಂದಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಶಕ್ಷ ಸುರೇಶ ಪೂಜಾರಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರು, ಗಣ್ಶರು, ಪತ್ರಕತ೯ರು, ಗುತ್ತೆಗೆದಾರರು ಭಾಗವಹಿಸಲಿದ್ದಾರೆ.ಡಿ.೨೫ ರಂದು ಸಂಜೆ ೭ ಗಂಟೆಗೆ ಮಹಾ ಪುರಾಣ ಮಂಗಲಗೊಳ್ಳವುದು. ಡಿ.೨೬ ರಂದು ಬೆಳಗ್ಗೆ ೫-೩೦…
