ಆಲಮೇಲ: ಇಲ್ಲಿಯ ಹಿರಿಯ ಕಾದಂಬರಿಕಾರ,ಸಿದ್ಧರಾಮ ಉಪ್ಪಿನ ಅವರಿಗೆ ಸಮಗ್ರ ಸಾಹಿತ್ಯ ಮತ್ತು ಜೀವಮಾನ ಸಾಧನೆಯ ಗೌರವಾರ್ಥ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ಇದೇ ಡಿ.30ರಂದು ಸಾಯಂಕಾಲ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ”ದಲ್ಲಿ ಜರುಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿದ್ಧರಾಮ ಉಪ್ಪಿನ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
ಸಮಾವೇಶದ ಉದ್ಘಾಟನೆ,ಡಾ ಮಲ್ಲೇಶ್ವರಂ ಜಿ ವೆಂಕಟೇಶ ಹಾಗೂ ಪ್ರಶಸ್ತಿ ವಿತರಣೆ ಡಾ ಸತೀಶಕುಮಾರ, ನಿರ್ದೇಶಕರು ಸಾರ್ವಜನಿಕ ಕೇಂದ್ರ ಗ್ರಂಥಾಲಯ ಇಲಾಖೆ ಬೆಂಗಳೂರ ರವರು ಮಾಡುವರು. ಈ ಸಮಾವೇಶದಲ್ಲಿ ನಾಡಿನ ಹೆಸರಾಂತ ಕಲಾ ತಂಡಗಳ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ರಮೇಶ ಸುರ್ವೆ ತಿಳಿಸಿದ್ದಾರೆ.
ಸಿದ್ಧರಾಮ ಉಪ್ಪಿನ ಅವರು ಕಾದಂಬರಿ, ಜೀವನ ಚರಿತ್ರೆ, ಆತ್ಮಕಥನ, ಲಲಿತ ಪ್ರಬಂಧ, ವ್ಯಕ್ತಿಚಿತ್ರಣ ಹಾಗೂ ಕಾವ್ಯ ಈ
ಎಲ್ಲ ಪ್ರಕಾರಗಳ ಸಾಹಿತ್ಯ ಸೇರಿ 23 ಗ್ರಂಥ ರಚಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

