ಸಿಂದಗಿಯ ಭೀಮಾ ಸೆಂಟ್ರಲ್ ಯುನಿವರ್ಸಲ್ ಶಾಲೆಯಲ್ಲಿ ಕ್ರೀಡಾ ಮಹೋತ್ಸವಕ್ಕೆ ಚಾಲನೆ
ಸಿಂದಗಿ: ಸದೃಢ ದೇಹದಲ್ಲಿ ಸದೃಢ ಮನಸ್ಸಿದೆ. ಮಕ್ಕಳು ಆಟವಾಡುವುದರ ಮೂಲಕ ದೈಹಿಕವಾಗಿ ಬಲಿಷ್ಟರಾಗುತ್ತಾರೆ. ಮತ್ತು ಯಾವುದೇ ಅನಾರೋಗ್ಯಕ್ಕೆ ಒಳಗಾಗದೇ ಮಾನಸಿಕ ವಿಕಾಸಕ್ಕೆ ಪ್ರೇರೆಪಿಸುತ್ತದೆ ಎಂದು ದೈಹಿಕ ಶಿಕ್ಷಕ ಸಂಗಮೇಶ ಮಲ್ಲೇದ ಹೇಳಿದರು.
ಪಟ್ಟಣದ ಹೊರವಲಯದ ಭೀಮಾ ಸೇಂಟ್ರಲ್ ಯುನಿವರ್ಸಲ್ ಶಾಲೆಯಲ್ಲಿ ಹಮ್ಮಿಕೊಂಡ ಕ್ರೀಡಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮೂಹ ಆಟಗಳಾದ ಖೋಖೋ, ವಾಲಿಬಾಲ್, ಥೋಬಾಲ್, ಫುಟ್ಬಾಲ್, ಹ್ಯಾಂಡ್‌ಬಾಲ್ ಆಡುವುದರ ಮೂಲಕ ಮಕ್ಕಳಲ್ಲಿ ಒಗ್ಗಟ್ಟಿನ ಮನೋಭಾವದ ಜೊತೆಗೆ ದೈಹಿಕವಾಗಿ ಸಧೃಡರಾಗುತ್ತಾರೆ ಎಂದರು.
ಈ ವೇಳೆ ಶಾಲೆಯ ಪ್ರಾಂಶುಪಾಲೆ ಹೀಮಾಬಿಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ.ಎಂ.ಎಂ.ಪಡಶೆಟ್ಟಿ, ಜಿ.ಕೆ. ಪಡಗಾನೂರ, ಶ್ರೀಮಂತ್ ಮಲ್ಲೆದ, ಭೀಮಾಶಂಕರ ತಾರಾಪುರ, ಪ್ರಶಾಂತ ಕಮತಗಿ, ದತ್ತು ಮಾವೂರ, ಶರಣು ಮಾವೂರ, ಶಾಂತು ಕುಂಬಾರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಇದ್ದರು.

