ಸಿಂದಗಿ: ತಾಲೂಕಿನ ಬೋರಗಿಯ ನಬಿರೋಶನ, ಪ್ರಕಾಶನ ವತಿಯಿಂದ ಬೆಂಗಳೂರಿನ ಕೋರಮಂಗಲ ಭವನದಲ್ಲಿ ಆರಕ್ಷಕ ಮೌಲಾಲಿ ಕೆ. ಆಲಗೂರ ಇವರ ’ನಲುಗದಿರಲಿ ಪರಿಸರ’ ಕೃತಿ ಬಿಡುಗಡೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಪಟ್ಟಣದ ಪ್ರವಚನಗಾರ್ತಿ, ಹಾಸ್ಯ ಭಾಷಣಗಾರ್ತಿ ಇಂದುಮತಿ ಸಾಲಿಮಠ ಇವರಿಗೆ ’ಕರುನಾಡ ಶ್ರೇಷ್ಠ ವಾಗ್ಮಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಡಿವೈಎಸ್ಪಿ ವಿನೋದ ಕುಮಾರ, ಇನ್ಸ್ಪೆಕ್ಟರುಗಳಾದ ಜ್ಯೋತಿರ್ಲಿಂಗ ಹೊನ್ನಕಟ್ಟಿ, ಎಂ.ರಮೇಶ, ಪಿಎಸ್‌ಐ ಟಿಪ್ಪು ನಾಯಕವಾಡಿ, ಸಾಹಿತಿ ಡಾ.ಸಮೀರ ಹಾದಿಮನಿ, ಡಾ.ರಾಜು ಆಲಗೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

