ಸಿಂದಗಿ: ಸಂತೋಷದ ಸಮಯವಾಗಲಿ ಅಥವಾ ಕಷ್ಟದ ಸಮಯವಾಗಲಿ, ಒಂಟಿತನದ ಇದ್ದಾಗಲಿ ಅಥವಾ ಸ್ನೇಹಿತರೊಂದಿಗೆ ಆನಂದಿಸುವ ಸಮಯವಾಗಲಿ, ಪ್ರಯಾಣಿಸುವಾಗ ಅಥವಾ ಮನೆಯಲ್ಲಿ ಕೆಲಸ ಮಾಡುವಾಗ, ಸಂಗೀತವು ನಮ್ಮ ಜೀವನದ ಪ್ರತಿಯೊಂದು ಭಾಗದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಗುರುರಾಜ ನಡುವಿನಕೇರಿ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಐಡಿಎಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಅಮೋಘಸಿದ್ದೇಶ್ವರ ಸಾಂಸ್ಕೃತಿಕ ಕಲಾ ತಂಡದಿಂದ ಹಮ್ಮಿಕೊಂಡ ಸಂಗೀತ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಗೀತ ನಮ್ಮ ಮನಸ್ಸು ಕದಡಿದಾಗ ಶಾಂತಗೊಳಿಸಲು ಅಥವಾ ಕೆಲವೊಮ್ಮೆ ಸಂತೋಷವನ್ನು ಯಾವುದೇ ಕಟ್ಟುಪಾಡಿಲ್ಲದೇ ಅನುಭವಿಸಲು ಸಾಧ್ಯ. ಯುವಕರು ಮೊಬೈಲ್ ಗೀಳಿನ ಹಿಂದೆ ಬಿದ್ದು ಸುಂದರ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ವೇಳೆ ವಿವಿಧ ಕಲಾವಿದರು ಹಾಡುಗಳ ಮೂಲಕ ಮನರಂಜಿಸಿದರು. ಕಾರ್ಯಕ್ರಮದಲ್ಲಿ ಪರಶುರಾಮ ದೇಸುಣಗಿ, ಮಂಜುನಾಥ ಕೆಂಭಾವಿ. ರಮೇಶ ನಾಟಿಕಾರ, ಕಲಾವಿದರಾದ ರವಿ ವಿಭೂತಿ. ಭೀಮು ಕಟ್ಟಿಮನಿ. ಅಧ್ಯಕ್ಷ ಭೀಮಾಶಂಕರ ಕಟ್ಟಿಮನಿ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

