Author: editor.udayarashmi@gmail.com

ಸಿಂದಗಿಯ ’ನಮ್ಮ ಗೆಳೆಯರ ಬಳಗ’ವು ಭವಿಷ್ಯದಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಯೋಜಿಸಿದೆ ಎಂದು ಬಳಗದ ರಂಗನಾಥ ಥೋರ್ಪೆ ಹೇಳಿದರು.ಸ್ನೇಹ ಸಮ್ಮಿಲನದಲ್ಲಿ ಮಾತನಾಡಿದ ಅವರು, ಈ ದಿಸೆಯಲ್ಲಿ ನಶಿಸುತ್ತಿರುವ ಕನ್ನಡ ಶಾಲೆಗಳ ಉಳಿವಿಗೆ, ಅವುಗಳ ಅಭಿವೃದ್ಧಿಗಾಗಿ ಶ್ರಮಿಸಲಿದೆ. ಅದಕ್ಕಾಗಿ ಕನ್ನಡ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ಥೋರ್ಪೆ ತಿಳಿಸಿದರು.

Read More

ಸಿಂದಗಿಯಲ್ಲಿ ಗುರು ಸನ್ಮಾನ ಹಾಗೂ ಸ್ನೇಹ ಸಮ್ಮಿಲನ | ೩೦-೪೦ ವರ್ಷಗಳ ಬಳಿಕ ಗುರು-ಶಿಷ್ಯರ ಸಮಾಗಮ – ಶೈಲಾ ಮಣೂರವಿಜಯಪುರ: ಅದೊಂದು ಅಪರೂಪದ ಹೃದಯಸ್ಪರ್ಶಿ ಸಮಾರಂಭ. ೬೦-೮೦ ರ ಇಳಿ ವಯಸ್ಸಿನ ವೃದ್ದ ಗುರುವೃಂದ ೫೦ ರ ಪ್ರಾಯದ ಹೊಸ್ತಿಲಲ್ಲಿರುವ ಶಿಷ್ಯವೃಂದದ ಅಪರೂಪದ ಸಮಾಗಮ. ಸುಮಾರು ೩೦-೪೦ ವರ್ಷಗಳ ಬಳಿಕ ಇವರು ಪರಸ್ಪರ ಸಂಧಿಸುವ ಸುವರ್ಣಾವಕಾಶ ಒದಗಿಸಿದ್ದು ಈ ಗುರು ಸನ್ಮಾನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ.    ಡಿ.೨೩ ಶನಿವಾರ ಬೆಳಗ್ಗೆ ಎಲ್ಲ ಶಿಷ್ಯ ವೃಂದವು, ಕೂಡಿ ಕಲಿತು ಆಡಿ ನಲಿದ ’ನಮ್ಮ ಗೆಳೆಯರ ಬಳಗ’ ಸ್ಥಾಪಿಸಿ ಆ ಮೂಲಕ ತಮಗೆ ಅಕ್ಷರ ಜ್ಞಾನ ನೀಡಿದ, ಜೀವನ ಮೌಲ್ಯಗಳನ್ನು ತುಂಬಿ ತಮ್ಮ ಬದುಕು ರೂಪಿಸಿದ ಅಂದಿನ ಗುರುವೃಂದವನ್ನು ಸ್ವಾಗತಿಸಲು ಸಿಂದಗಿಯ ಆಶೀರ್ವಾದ ಕಲ್ಯಾಣ ಮಂಟಪದ ದ್ವಾರಬಾಗಿಲಲ್ಲಿ ಶಿಸ್ತಿನ ಸಿಪಾಯಿಗಳಂತೆ ಕಾದು ನಿಂತಿದ್ದರು. ಒಬ್ಬೊಬ್ಬರಾಗಿ ಬಂದ ಗುರುಗಳನ್ನು ಅವರು ಗೌರವ, ಅಭಿಮಾನ, ಕಾಳಜಿಯಿಂದ ಅವರ ಕೈಹಿಡಿದು ನಿಧಾನಕ್ಕೆ ಒಳಗೆ ತೆರಳುತ್ತಿದ್ದರೆ, ಗುರು ವೃಂದ…

Read More

ಕಲಕೇರಿ: ಗ್ರಾಮದ ಶ್ರೀಗುರುವೀರಘಂಟೈ ಮಡಿವಾಳೇಶ್ವರ ದೇವಸ್ಥಾನದಲ್ಲಿ “ಜಾತ್ರಾ ಮಹೋತ್ಸವದ ವೇಳೆ ಶರಣರು ಬರುತಾರ ಹೋಗೋನ ನಡಿ” ಎಂಬ ಜಾನಪದ ಶೈಲಿಯ ಶ್ರೀಗುರುವೀರಘಂಟೈ ಮಡಿವಾಳೇಶ್ವರರ ಧ್ವನಿಸುರುಳಿಯನ್ನು ಗ್ರಾಮದ ಹಿರಿಯರು ಮತ್ತು ಭಕ್ತ ಬಳಗದ ಸಮ್ಮುಖದಲ್ಲಿ ವೇ.ಮೂ.ಅಭಿಷೇಕ ಗದ್ದಗಿಮಠ ಅವರು ಯಾಂತ್ರಿಕವಾಗಿ ಬಿಡುಗಡೆಗೊಳಿಸಿದರು.ಕಲಕೇರಿಯ ಪ್ರಕಾಶ ರಾ ಯರನಾಳ, ಪ್ರದೀಪ ಶ್ರೀ ವಿಶ್ವಕರ್ಮ, ಹಣಮಂತ.ಬಿ.ಯುಕ್ತಾಪುರ ನಾಗರಳ್ಳಿ ಮತ್ತು ಕಲಕೇರಿ ಗೆಳೆಯರ ಬಳಗ ಇವರ ಸಹಕಾರದೊಂದಿಗೆ ಆನಂದ ಬಿ.ನಾಯ್ಕೋಡಿ ಅವರ ಸಾಹಿತ್ಯ ಮತ್ತು ಯಲ್ಲಪ್ಪ ಎಮ್ ತಿಪ್ಪನಟಗಿ ಅವರ ಧ್ವನಿಯಲ್ಲಿ ಮೂಡಿ ಬಂದ ಈ ಧ್ವನಿಸುರುಳಿಯನ್ನು ಚಾಮನಾಳದ ಜನನಿ ರೆಕಾರ್ಡಿಂಗ್ ಸ್ಟುಡಿಯೋ ಅವರು ಧ್ವನಿ ಮುದ್ರಣದ ಕಾರ್ಯವನ್ನು ಮಾಡಿದೆ.ಈ ವೇಳೆ ರೇವಣಸಿದ್ದೇಶ ಗದ್ದಗಿಮಠ, ಹಿರಿಯರಾದ ಎಸ್.ಬಿ.ಪಾಟೀಲ, ದೇವಿಂದ್ರ ಜಂಬಗಿ, ವಾಯ್.ಬಿ.ಕುಲಕರ್ಣಿ, ಡಿ.ಎನ್.ಚಿಕ್ಕಮಠ, ನಾನಾಗೌಡ ಚೌಧರಿ, ಸುಧಾಕರ ಕವದಿ, ಗಿರೀಶ ಹೆಗ್ಗಣದೊಡ್ಡಿ, ಸುಧಾಕರ ಅಡಕಿ, ಚೇತನ ಶಹಾಪೂರ, ಪ್ರದೀಪ ವಿಶ್ವಕರ್ಮ, ಪ್ರಕಾಶ ಯರನಾಳ ಗಾಯಕ ಯಲ್ಲಪ್ಪ ತಿಪ್ಪನಟಗಿ ಸೇರಿದಂತೆ ಇತರರು ಇದ್ದರು.

Read More

ವಿಜಯಪುರ: ನಗರದ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರಾರಂಭಗೊಂಡ ಸಿದ್ಧೇಶ್ವರ ೨೪/೭ ಮೆಡಿಕಲ್ಸ್ ಪ್ರಾರಂಭಗೊಂಡಾಗಿನಿಂದಲೂ ಲಕ್ಷಾಂತರ ಗ್ರಾಹಕರನ್ನು ತಲುಪುವ ಮೂಲಕ ಗ್ರಾಹಕ ಸ್ನೇಹಿಯಾಗಿ ಗುರುತಿಸಿಕೊಂಡಿದೆ. ಮಧ್ಯರಾತ್ರಿಯಲ್ಲಿ ಅವಶ್ಯಕತೆಯುಳ್ಳ ಜನಗಳ ಮನೆ ಬಾಗಿಲಿಗೆ ಮಾತ್ರೆಗಳನ್ನು ತಲುಪಿಸಿ ಅತ್ಯುತ್ತಮ ಸೇವೆಯ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದೆ. ವಿಜಯಪುರ ನಗರದಲ್ಲಿ ಪ್ರಾರಂಭಗೊಂಡಿದ್ದ ಮೆಡಿಕಲ್ ಇಂದು ತನ್ನ ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತ ವಿಜಯಪುರ ಜಿಲ್ಲೆಯಾದ್ಯಂತ ಔಷಧಿ ಮಳಿಗೆಗಳನ್ನು ತೆರೆಯುತ್ತಿದೆ. ಅದರ ಮೊದಲ ಹೆಜ್ಜೆಯಾಗಿ ಮುದ್ದೆಬಿಹಾಳದ ಹೃದಯಭಾಗವಾಗಿರುವ ಬಸವೇಶ್ವರ ವೃತ್ತದಲ್ಲಿ ಡಿ.೨೬ರಂದು ಸಿದ್ಧೇಶ್ವರ ೨೪/೭ ಔಷಧಿ ಮಳಿಗೆ ಲೋಕಾರ್ಪಣೆಗೊಳ್ಳಲಿದೆ.ಕುಂಟೋಜಿ ಹಿರೇಮಠ ಸಂಸ್ಥಾನದ ಚನ್ನವೀರ ದೇವರು ಸಾನಿಧ್ಯ ವಹಿಸಿ ಉದ್ಘಾಟಿಸಲಿದ್ದು, ವಿಜಯಪುರ ನಗರದ ಶಾಸಕ ಬಸನಗೌಡ ರಾ, ಪಾಟೀಲ್ ಯತ್ನಾಳ ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಶೈವ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ್ ಮೋಟಗಿ, ಚೇರಮನ್ ಮಹಾಂತೇಶ ನಾವದಗಿ, ಖಜಾಂಚಿ ಡಾ.ಎಸ್.ಬಿ.ನಾಗೂರ, ಮಹಾವೀರ ಆಸ್ಪತ್ರೆಯ ಖ್ಯಾತವೈದ್ಯ ಡಾ.ದಲಿಚಂದ ಬಿ. ಓಸವಾಲ್ ಇರಲಿದ್ದು, ವಿಜಯಪುರ ಜಿಲ್ಲಾ ಪಂಚಾಯ್ತಿಯ…

Read More

ವಿಜಯಪುರ: ಅಜಾತಶತ್ರು, ಮಾಜಿ ಪ್ರಧಾನಮಂತ್ರಿಗಳಾದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ಸೋಮವಾರ ನಗರದ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿನ ಪುತ್ಥಳಿಗೆ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಕವಟಗಿ, ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ರಾಜೇಶ ದೇವಗಿರಿ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ರಾಜಶೇಖರ ಕುರಿಯವರ, ಕಿರಣ ಪಾಟೀಲ, ಮಲ್ಲಿಕಾರ್ಜುನ ಗಡಗಿ, ವಿಠ್ಠಲ ಹೊಸಪೇಟ, ಮುಖಂಡರಾದ ಸಾಯಬಣ್ಣ ಬೋವಿ, ವಿಕ್ರಮ ಗಾಯಕವಾಡ, ಚಂದ್ರು ಚೌದರಿ, ಲಕ್ಷ್ಮಣ ಜಾಧವ, ರಾಜಶೇಖರ ಭಜಂತ್ರಿ, ಸಂತೋಷ ತಳಕೇರಿ, ವಿಜಯಕುಮಾರ ಗಚ್ಚಿನಕಟ್ಟಿ, ಲಕ್ಷ್ಮೀ ಕನ್ನೋಳ್ಳಿ, ಮಲ್ಲಮ್ಮ ಜೋಗೂರ ಸೇರಿದಂತೆ ವ್ಯಾಪಾರಸ್ಥರು, ಗುತ್ತಿಗೆದಾರರು, ಅಭಿಮಾನಿಗಳು ಇದ್ದರು.

Read More

ವಿಜಯಪುರ: ನಗರದ ಮಾರುಕಟ್ಟೆ ಪ್ರದೇಶದಲ್ಲಿ ಸುಗಮ ಸಂಚಾರ, ಸ್ವಚ್ಛತೆ, ವ್ಯಾಪಾರಸ್ಥರಿಗೆ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಕೆಲವರು ವ್ಯವಸ್ಥೆ ಕೆಡಿಸುವ ಹುನ್ನಾರ ನಡೆಸಿದ್ದು, ಯಾವುದೇ ಕಾರಣಕ್ಕೂ ಅದು ನಡೆಯದು ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಹೇಳಿದರು.ನಗರದಲ್ಲಿ ಸೋಮವಾರ ವ್ಯಾಪಾರಸ್ಥರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಬೀದಿ ದೀಪ ಅಳವಡಿಕೆ ಮಾಡಲಾಗಿದೆ, ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ದೇಶದಲ್ಲಿ ವಿಜಯಪುರ ಅತ್ಯುತ್ತಮ ವಾತಾರಣ ನಗರಗಳ ಪಟ್ಟಿಯಲ್ಲಿ ೬ನೇ ಸ್ಥಾನ ಪಡೆದಿರುವುದೇ ಸಾಕ್ಷಿ ಎಂದು ತಿಳಿಸಿದರು.ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ, ಸೂಕ್ತವಾದ ನಿಗದಿತ ಸ್ಥಳಾವಕಾಶ ಕಲ್ಪಿಸಿ, ಅಂಗಡಿಕಾರರಿಗೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಸುಮಾರು ೩೫ ಕಡೆ ಕಾಯಿಪಲ್ಲೆ ಮಾರುಕಟ್ಟೆ ಮಾಡಿದ್ದರಿಂದ ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆ ಆಗಿದ್ದು, ಸಂಚಾರಕ್ಕೆ ಅಡೆತಡೆ ಆಗುತ್ತಿಲ್ಲ. ನಗರದ…

Read More

ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ | ಶಾಸಕ ಯಶವಂತ್ರಾಯಗೌಡ ಪಾಟೀಲ ಮಾಹಿತಿ ಇಂಡಿ: ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ಇಂಡಿ ತಾಲೂಕಿಗೆ ನೀರಾವರಿ ಯೋಜನೆಗಳ ಅವಶ್ಯವಿದ್ದು ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಮೂಲಕ ಇಂಡಿ ಹಾಗೂ ನಾಗಠಾಣ ಕ್ಷೇತ್ರಗಳ ೨೮ ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗಲಿದೆ ಎಂದು ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.ಸೋಮವಾರ ತಾಲೂಕಿನ ಹೋರ್ತಿ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತ ಹೋರ್ತಿ-ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಯ ಕಾರ್ಯನಿರ್ವಹಿಸುವ ಕಛೇರಿ ಉದ್ಘಾಟಿಸಿ ಅವರು ಮಾತನಾಡಿದರು.ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ಸಾವಳಸಂಗ ಗುಡ್ಡಕ್ಕೆ ಭೇಟಿ ನೀಡಿದಾಗ ಈ ಎತ್ತರದ ಪ್ರದೇಶಕ್ಕೆ ನೀರು ಹಾಯಿಸಬೇಕು ಇದರಿಂದ ಈ ಭಾಗದ ರೈತರಿಗೆ ಒಳಿತಾಗುತ್ತದೆ ಎಂಬ ಆಶಾಭಾವನೆ ಹೊಂದಿದ್ದರು. ಅವರ ಆಶಯದಂತೆ ರೇವಣಸಿಧ್ಧೇಶ್ವರ ಏತ ನೀರಾವರಿ ಮೂಲಕ ನೀರು ಹರಿಸಲಾಗುತ್ತದೆ ಎಂದರು.ಇಂಡಿ ಕ್ಷೇತ್ರದ ೩೨ ಹಳ್ಳಿಗಳ ೨೧೫೦೦ ಹೆಕ್ಟೇರ್, ನಾಗಠಾಣ ಕ್ಷೇತ್ರದ ೧೦ ಹಳ್ಳಿಗಳ ೬೫೦೦ ಹೆಕ್ಟೇರ್ ಪ್ರದೇಶ ಈ ಯೋಜನೆಯಿಂದ ನೀರಾವರಿಯಾಗಲಿದೆ ಎಂದರುಇಲ್ಲಿ ಕೆಬಿಜೆಎನ್‌ಎಲ್ ಕಚೇರಿ…

Read More

ಇಂಡಿ: ದುಂದು ವೆಚ್ಚ ಮಾಡದೇ ಪೂಜ್ಯರ, ಗಣ್ಯರ ಸಮ್ಮುಖ ನಡೆಯುವ ಮದುವೆ ಭಾಗ್ಯವಂತರ ಮದುವೆ ಎಂದು ನಾಗಣಸೂರದ ಶ್ರೀಕಂಠ ಶಿವಾಚಾರ್ಯರು ಹೇಳಿದರು.ಸೋಮವಾರ ಪಟ್ಟಣದ ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಶಾಂತೇಶ್ವರ ದೇವಸ್ಥಾನ ಟ್ರಸ್ ಕಮೀಟಿ ಹಾಗೂ ಶ್ರೀ ಶಾಮಥೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಸರಳ ಸಾಮೂಹಿಕ ವಿವಾಹ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿ, ಬಡವರ ಹಿತ ಬಯಸುವವರು ಪರಮಾತ್ಮನ ಸ್ವರೂಪಿಗಳು. ಅವರು ಸಮಾಜದ ಮಕ್ಕಳು. ಅವರು ಮಾಡುವ ಸಾಮೂಹಿಕ ಮದುವೆ ನಮ್ಮ ಧರ್ಮ, ಸಂಸ್ಕಾರ, ನೀತಿ ಬೋಧಿಸುತ್ತದೆ ಎಂದರು.ಜೈನಾಪುರದ ರೇಣುಕಾಶಿವಾಚಾರ್ಯರರು ಮಾತನಾಡಿ, ಮದುವೆ ಭಾರತೀಯ ಸಂಸ್ಕೃತಿಯಲ್ಲಿ ಶತ ಶತಮಾನದಿಂದ ಬಂದಿದ್ದು ಇತ್ತಿತ್ತಲಾಗಿ ಜನರು ಮದುವೆ ದುಂದು ವೆಚ್ಚದಿಂದ ಮಾಡುತ್ತಿದ್ದು ಸಂಸಾರಗಳಿಗೆ ಮಾರಕವಾಗುತ್ತಿದೆ ಎಂದರು.ಪ್ರವಚನಕಾರ ಗೌಡಗಾಂವದ ಶಾಂತವೀರ ಶಿವಾಚಾಯ್ರರು, ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ, ಗೋರನಾಳದ ವೀರಪಾಕ್ಷ ದೇವರು, ಸಿದ್ದು ಲಾಳಸಂಗಿ ಮಾತನಾಡಿದರು.ಈ ಬಾರಿಯ ಸಾಮೂಹಿಕ ವಿವಾಹದ…

Read More

ಇಂಡಿ: ತಾಲ್ಲೂಕಿನ ಬೋಳೇಗಾಂವ ಗ್ರಾಮದ ಬೀದಿ ನಾಟಕಗಳ ಭೀಷ್ಮ ಸೋಮಶೇಖರ ಚಾಂದಕವಠೆ ಭಾನುವಾರ ಸಾಯಂಕಾಲ ನಿಧನ ಹೊಂದಿದರು. ಅವರ ಅಂತ್ಯಕ್ರಿಯೆ ಸೋಮವಾರರಂದು ಬೆಳಿಗ್ಗೆ ೧೧ ಗಂಟೆಗೆ ಅವರ ಸ್ವಗ್ರಾಮದ ತೋಟದಲ್ಲಿ ನೆರವೇರಿತು.ಸೋಮಶೇಖರ ಚಾಂದಕವಠೆ ೩ ವರ್ಷದವರಿದ್ದಾಗ ಬಣ್ಣ ಹಚ್ಚಿ ತಮ್ಮ ೭೮ ನೇ ವಯಸ್ಸಿನವರೆಗೆ ಸುಮಾರು ೨೫೦ ಬೀದಿ ನಾಟಕಗಳನ್ನು ಆಡಿದ್ದಲ್ಲದೇ ಚಲನಚಿತ್ರ, ದಾರಾವಾಹಿಗಳಲ್ಲಿ ನಟಿಸಿದ್ದಾರೆ. ಸಮಾಜದ ಒಳಿತಿಗಾಗಿ ವರದಕ್ಷಿಣೆ ವಿರುದ್ದ, ಜಾತಿ ವಿರುದ್ದ, ಬಾಲ್ಯ ವಿವಾಹ, ಸಮಾಜದ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸುವದಕ್ಕಾಗಿ ಜನ ಜಾಗೃತಿ ಮೂಡಿಸಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು ಬೀದಿ ನಾಟಕಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಅವರಿಗೆ ಇಲ್ಲಿಯವರೆಗೆ ಜಿಲ್ಲಾ ಪ್ರಶಸ್ತಿ, ತಾಲ್ಲೂಕು ಪ್ರಶಸ್ತಿ ಬಿಟ್ಟರೆ ಇನ್ನಾವುದೇ ಪ್ರಶಸ್ತಿಗಳು ಸಿಕ್ಕಿಲ್ಲ. ಎಲೆಮರೆಯ ಕಾಯಿಯಂತೆ ತಮ್ಮ ಜೀವನ ಸಮಾಜಕ್ಕಾಗಿ ಸವೆಸಿರುವದು ಶ್ಲಾಘನೀಯ ಸಂಗತಿ.ಸೋಮಶೇಖರ ಚಾಂದಕವಠೆ ಅವರ ಜೀವನದ ಬಗ್ಗೆ ಸಾಹಿತಿ ಸಿ.ಎಂ. ಬಂಡಗರ ಅವರು ಒಂದು ಪುಸ್ತಕ ಹೊರತಂದಿದ್ದು, ಕಳೆದ ೨ ವರ್ಷಗಳ ಹಿಂದೆ ಬಿಡುಗಡೆಯಾಗಿದೆ.…

Read More

ಬಸವನಬಾಗೇವಾಡಿ: ನಮ್ಮ ಅನ್ನದಾತರಿಗೆ ನೋವಾಗುವಂತಹ ಅಥವಾ ಅವರನ್ನು ಅಪಮಾನಿಸುವಂತಹ ಮಾತುಗಳನ್ನು ಜವಳಿ, ಕಬ್ಬು ಅಭಿವೃದ್ದಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಬಾಯಿತಪ್ಪಿಯೂ ಆಡುವುದಿಲ್ಲ. ಅವರು ರೈತರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.ಅವರು ಸೋಮವಾರ ದೂರವಾಣಿಯ ಮೂಲಕ ಸುದ್ದಿಗಾರರರೊಂದಿಗೆ ಮಾತನಾಡಿ, ಸಚಿವರು ಮಾತಾಡಿದ ಒಟ್ಟು ಭಾಷಣವನ್ನು ಒಮ್ಮೆ ಸರಿಯಾಗಿ ಕೇಳಿಸಿಕೊಂಡರೆ ಎಂಥವರಿಗೂ ಅದು ಅರ್ಥವಾಗುತ್ತದೆ. ಆದರೆ ವಿರೋಧ ಪಕ್ಷ ಬಿಜೆಪಿ ವಿರೋಧಿಸಲೇಬೇಕೆಂದು ಕೆಲವು ಮಾತುಗಳನ್ನಷ್ಟೇ ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿ ಅಷ್ಟೇ. ಇವತ್ತು ರಾಜ್ಯದ ಬಹುತೇಕ ವಾಣಿಜ್ಯ ಬೆಳೆಗಳ ಬೆಲೆಗಳನ್ನು ಕಡಿತ ಗೊಳಿಸಲಾಗಿದೆ. ರೈತರಿಗೆ ನ್ಯಾಯವಾಗಿ ಸಿಗಬೇಕಾದ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಎಷ್ಟೇ ಮನವರಿಕೆ ಮಾಡಿಕೊಟ್ಟರೂ ತಮ್ಮಮೊಂಡಾಟ ಬಿಡುತ್ತಿಲ್ಲ. ಇದು ಲೋಕಸಭಾ ಚುನಾವಣೆಗಾಗಿ ಗ್ರಾಹಕರ ಕಣ್ಣೊರಿಸಿ ಅನ್ನದಾತರ ಹೊಟ್ಟೆ ಮೇಲೆ ಕಾಲಿಡುವ ತಂತ್ರ ಅಷ್ಟೇ…

Read More