ವಿಜಯಪುರ: ನಗರದ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರಾರಂಭಗೊಂಡ ಸಿದ್ಧೇಶ್ವರ ೨೪/೭ ಮೆಡಿಕಲ್ಸ್ ಪ್ರಾರಂಭಗೊಂಡಾಗಿನಿಂದಲೂ ಲಕ್ಷಾಂತರ ಗ್ರಾಹಕರನ್ನು ತಲುಪುವ ಮೂಲಕ ಗ್ರಾಹಕ ಸ್ನೇಹಿಯಾಗಿ ಗುರುತಿಸಿಕೊಂಡಿದೆ. ಮಧ್ಯರಾತ್ರಿಯಲ್ಲಿ ಅವಶ್ಯಕತೆಯುಳ್ಳ ಜನಗಳ ಮನೆ ಬಾಗಿಲಿಗೆ ಮಾತ್ರೆಗಳನ್ನು ತಲುಪಿಸಿ ಅತ್ಯುತ್ತಮ ಸೇವೆಯ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದೆ. ವಿಜಯಪುರ ನಗರದಲ್ಲಿ ಪ್ರಾರಂಭಗೊಂಡಿದ್ದ ಮೆಡಿಕಲ್ ಇಂದು ತನ್ನ ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತ ವಿಜಯಪುರ ಜಿಲ್ಲೆಯಾದ್ಯಂತ ಔಷಧಿ ಮಳಿಗೆಗಳನ್ನು ತೆರೆಯುತ್ತಿದೆ. ಅದರ ಮೊದಲ ಹೆಜ್ಜೆಯಾಗಿ ಮುದ್ದೆಬಿಹಾಳದ ಹೃದಯಭಾಗವಾಗಿರುವ ಬಸವೇಶ್ವರ ವೃತ್ತದಲ್ಲಿ ಡಿ.೨೬ರಂದು ಸಿದ್ಧೇಶ್ವರ ೨೪/೭ ಔಷಧಿ ಮಳಿಗೆ ಲೋಕಾರ್ಪಣೆಗೊಳ್ಳಲಿದೆ.
ಕುಂಟೋಜಿ ಹಿರೇಮಠ ಸಂಸ್ಥಾನದ ಚನ್ನವೀರ ದೇವರು ಸಾನಿಧ್ಯ ವಹಿಸಿ ಉದ್ಘಾಟಿಸಲಿದ್ದು, ವಿಜಯಪುರ ನಗರದ ಶಾಸಕ ಬಸನಗೌಡ ರಾ, ಪಾಟೀಲ್ ಯತ್ನಾಳ ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಶೈವ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ್ ಮೋಟಗಿ, ಚೇರಮನ್ ಮಹಾಂತೇಶ ನಾವದಗಿ, ಖಜಾಂಚಿ ಡಾ.ಎಸ್.ಬಿ.ನಾಗೂರ, ಮಹಾವೀರ ಆಸ್ಪತ್ರೆಯ ಖ್ಯಾತವೈದ್ಯ ಡಾ.ದಲಿಚಂದ ಬಿ. ಓಸವಾಲ್ ಇರಲಿದ್ದು, ವಿಜಯಪುರ ಜಿಲ್ಲಾ ಪಂಚಾಯ್ತಿಯ ನಿಕಟ ಪೂರ್ವ ಉಪಾಧ್ಯಕ್ಷ ಪ್ರಭುಗೌಡ ಚ ದೇಸಾಯಿ ಹಾಗೂ ವಿಜಯಪುರ ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ಉಪಸ್ಥಿತರಿರುತ್ತಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

