Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ ೨ರಂದು ವಿಜಯಪುರ ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಜ.೨ ರಂದು ಬೆಳಗ್ಗೆ ೧೦ ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೊರಟು ಬೆಳಗ್ಗೆ ೧೦.೫೦ಕ್ಕೆ ಕೊಪ್ಪಳದ ಗಿಣಿಗೆರ ಏರ್‌ಸ್ಟ್ರಿಪ್‌ಗೆ ಆಗಮಿಸಿ, ಗಿಣಿಗೆರ ಏರ್‌ಸ್ಟ್ರಿಪ್‌ನಿಂದ ಹೊರಟು ಬೆಳಗ್ಗೆ ೧೧.೪೦ ಕ್ಕೆ ಬಿಎಲ್‌ಡಿಈ ವಿದ್ಯಾಸಂಸ್ಥೆಯ ಹೆಲಿಪ್ಯಾಡ್‌ಗೆ ಆಗಮಿಸಿ ಜ್ಞಾನಯೋಗಾಶ್ರಮದಲ್ಲಿ ನಡೆಯುವ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಗುರುನಮನ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.ನಂತರ ಜಿಲ್ಲೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ ೦೨.೩೦ಕ್ಕೆ ವಿಜಯಪುರದಿಂದ ರಸ್ತೆ ಮೂಲಕ ಹೊರಟು ವಿಜಯಪುರ ತಾಲೂಕಿನ ದ್ಯಾಬೇರಿ (ದೇವಿಪೂರ) ಶ್ರೀ ವಾಗ್ದೇವಿ ಸೇವಾ ಸಮಿತಿ ದ್ಯಾಬೇರಿ ಇವರ ವತಿಯಿಂದ ಆಯೋಜಿಸಿರುವ ಶ್ರೀ ವಾಗ್ದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಮಧ್ಯಾಹ್ನ ೦೩.೩೦ಕ್ಕೆ ದ್ಯಾಬೇರಿಯಿಂದ ಹೊರಟು ೦೪.೦೦ ಗಂಟೆಗೆ ಬಿಎಲ್‌ಡಿಈ ವಿದ್ಯಾಸಂಸ್ಥೆಯ ಹೆಲಿಪ್ಯಾಡ್‌ನಿಂದ ಬೆಂಗಳೂರಿಗೆ ಮರು ಪ್ರಯಾಣಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ಮಾಹಿತಿ | 48 ಲಕ್ಷ ಹೆಕ್ಟೇರ್ ಪ್ರದೇಶ | ಗ್ಯಾರಂಟಿಗಳನ್ನು ಕೊಟ್ಟಿದ್ದರಿಂದ ಬರದ ತೀವ್ರತೆ ಕಡಿಮೆ ಬೆಂಗಳೂರು: ರಾಜ್ಯದಲ್ಲಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 35 ಸಾವಿರ ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.ಇಂದು ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣದಲ್ಲಿ ಸರ್ಕಾರದ ಕಾರ್ಯದರ್ಶಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿ, ಮಾತನಾಡಿದ ಸಿಎಂ, ಪ್ರಕೃತಿ ಸಹಾಯವಿಲ್ಲದಿದ್ದರೆ, ಸರ್ಕಾರ ಏನು ಪರಿಹಾರ ಕೊಟ್ಟರು ಸಾಕಾಗುವುದಿಲ್ಲ. ಹವಾಮಾನ ಬದಲಾವಣೆಯಿಂದಾಗಿ ಈ ವೈಪರೀತ್ಯ ಕಾಣುತ್ತಿದ್ದೇವೆ. ಮುಂಗಾರಿನಲ್ಲಿ ಒಳ್ಳೆ ಮಳೆಯಾಗುವ ನಿರೀಕ್ಷೆ ಇದೆ. 2024 ರಲ್ಲಿ ಒಳ್ಳೆಯ ಮಳೆ ಬೆಳೆ ಆಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.ಅಭಿವೃದ್ಧಿ ನಿರೀಕ್ಷಿತ ಫಲ ಕಾಣಲು ಸಮೃದ್ಧಿಯಾಗಿ ಮಳೆಯಾಗಲಿ. ಶೇ. 60ಕ್ಕೂ ಹೆಚ್ಚು ಜನ ವ್ಯವಸಾಯದ ಮೇಲೆ ಅವಲಂಬಿತರಾಗಿದ್ದಾರೆ. ಗ್ಯಾರಂಟಿಗಳನ್ನು ಕೊಟ್ಟಿದ್ದರಿಂದ ಬರದ ತೀವ್ರತೆ ಕಡಿಮೆಯಾಗಿದೆ. ಬಡವರ ಕುಟುಂಬಕ್ಕೆ ಹಣ ದೊರೆಯುತ್ತಿದ್ದು, ಕೊಳ್ಳುವ ಶಕ್ತಿ ಇದೆ. ಬರಗಾಲವಿದ್ದರೂ ಸ್ವಲ್ಪ ಮಟ್ಟಿಗೆ ಅದರ ತೀವ್ರತೆ…
ಬಸವನ ಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಸೋಮವಾರ ಅಮರಶಿಲ್ಪಿ ಜಕಣಾಚಾರಿಯ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ನಿವೃತ್ತ ಉಪನ್ಯಾಸಕ ಕೆ.ಬಿ.ಕಡೆಮನಿ ಅವರು ಅಮರಶಿಲ್ಪಿ ಜಕಣಾಚಾರಿ ಕುರಿತು ಮಾತನಾಡಿ ವಿಶ್ವಕರ್ಮರ ಕೊಡುಗೆ ಕುರಿತು ಹೇಳಿದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಭವಾನಿ ಪಾಟೀಲ, ಖಜಾನೆ ಇಲಾಖೆಯ ಅಧಿಕಾರಿ ಮನೋಜ ಪಾಟೀಲ,ಬಿಇಓ ವಸಂತ ರಾಠೋಡ, ಸಿಡಿಪಿಓ ನಿರ್ಮಲಾ ಸುರಪೂರ, ಶಿರಸ್ತೇದಾರ ಬಿ.ಆರ್.ಪೋಲಚ, ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಮಂಜು ಹಳ್ಳೂರ, ಎ.ಟಿ.ಪಾಟೀಲ, ಕೆ.ವೈ. ಯಂಡ್ರಾಮಿ, ಇಬ್ರಾಹಿಂಪೂರ, ಎಸ್.ಎ.ತಳವಾರ, ಕಾಂಚನಾ ಸಂದಿಮನಿ, ವಿಶ್ವಕರ್ಮ ಸಮಾಜದ ಮುಖಂಡ ಮುತ್ತು ಪತ್ತಾರ ಇತರರು ಇದ್ದರು.
ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಗುರುನಮನ ಮಹೋತ್ಸವ ವಿಜಯಪುರ: ಪೂಜ್ಯ ಸಿದ್ಧೇಶ್ವರ ಅಪ್ಪನವರಂತಹ ಗುರು ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಭಾವುಕ ನುಡಿಗಳನ್ನಾಡಿದರು.ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶ್ರೀ ಸಿದ್ಧೇಶ್ವರ ಅಪ್ಪನವರನ್ನು ಪ್ರತಿನಿತ್ಯ ಅತ್ಯಂತ ಸಮೀಪದಿಂದ ದಿನನಿತ್ಯ ನೋಡಿ ಕಣ್ಣು ತುಂಬಿಕೊಂಡ ನಾವೇ ಪುಣ್ಯರು. ತಮ್ಮ ವ್ಯಕ್ತಿತ್ವದಿಂದಲೇ ಅವರು ಜಗತ್ಪ್ರಸಿದ್ಧಿ ಗಳಿಸಿದ್ದರು. ಏನನ್ನು ಭಯಸದೆ ಸದಾ ಸಮಾಜಕ್ಕೆ ನೀಡಿದಂತವರು. ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ ಎಂದು ಸಿದ್ಧೇಶ್ವರ ಸ್ವಾಮೀಜಿಯವರನ್ನು ನೆನೆದು ಕಣ್ಣೀರಿಟ್ಟರು.ಇದೇ ಸಂದರ್ಭದಲ್ಲಿ ಮೈಸೂರಿನ ಖ್ಯಾತ ಸಾಹಿತಿ ಕೆ.ಸಿ.ಶಿವಪ್ಪ ಮಾತನಾಡಿ, ಸಮಯ ಪಾಲನೆ, ಶಿಸ್ತು, ಪರಿಸರ ರಕ್ಷಣೆ ಬಗ್ಗೆ ಇರುವ ಕಾಳಜಿ, ಹಸಿರನ್ನು ಬೆಳೆಸುವ ಚಿಂತನೆಗಳನ್ನು ಎಲ್ಲರೂ ಸಿದ್ದೇಶ್ವರ ಅಪ್ಪನವರನ್ನು ನೋಡಿ ಕಲಿಯಬೇಕು. ಒಬ್ಬ ಸಂತನಾಗಿ ಯಾರೂ ಮಾಡದಂತಹ ಅಮೋಘ ಕೆಲಸವನ್ನು ಶ್ರೀ ಸಿದ್ಧೇಶ್ವರ ಶ್ರೀಗಳು ಮಾಡಿದ್ದಾರೆ. ಇಡೀ ಜಗತ್ತಿಗೆ ಜ್ಞಾನದಾಸೋಹ ಮಾಡಿದ್ದಾರೆ ಎಂದರು.ಸೇಡಂ ನ…
ವಂದಾಲದಲ್ಲಿ ಗುರುವಂದನ ಕಾರ್ಯಕ್ರಮ | ಗುರುಗಳ ಪಾದಪೂಜೆ ಮಾಡಿ ಸನ್ಮಾನಿಸಿದ ಶಿಷ್ಯರು ಆಲಮಟ್ಟಿ: ೨೭ ವರ್ಷಗಳ ನಂತರ ಸ್ನೇಹಿತರೆಲ್ಲಾ ಸೇರಿ, ಗುರುವಂದನೆ ಕಾರ್ಯಕ್ರಮ ಏರ್ಪಡಿಸಿದ್ದು, ಭಾರತದಲ್ಲಿ ಮೊದಲಿನಿಂದಲೂ ಬಂದ ಗುರುಪರಂಪರೆಯನ್ನು ಮುಂದುವರೆಸಿದ್ದೀರಿ ಎಂದು ನಿವೃತ್ತ ಶಿಕ್ಷಕ ಎಸ್.ಎಸ್. ಭಾವಿಕಟ್ಟಿ ಅಭಿಪ್ರಾಯಪಟ್ಟರು.ಸಮೀಪದ ವಂದಾಲ ಗ್ರಾಮದ ಶಾಕಂಬರಿ ಪ್ರೌಡಶಾಲಾ ಆವರಣದಲ್ಲಿ ಏರ್ಪಡಿಸಿದ್ದ ೧೯೯೨-೯೩ ನೇ ಸಾಲಿನ ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭ ನೇ ವರ್ಗ ಹಾಗೂ ೧೯೯೫-೯೬ ನೇ ಸಾಲಿನಲ್ಲಿ ಶಾಕಂಬರಿ ಪ್ರೌಡಶಾಲೆಯಲ್ಲಿ ೧೦ ನೇ ವರ್ಗ ಪಾಸಾದ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಗುರುವಿನ ಕೈಯಲ್ಲಿ ಕಲಿತಂತ ಮಕ್ಕಳು ಬದುಕಿನಲ್ಲಿ ಅಧಿಕಾರಿ, ನೌಕರ, ಉದ್ಯಮಿ, ಕೂಲಿ ಕಾರ್ಮಿಕ ಏನಾದರೂ ಆಗಿರಲಿ. ಆದರೆ ಮಾನವೀಯ ಮೌಲ್ಯವನ್ನೇ ಮರೆತು ಏನೇ ಸಾಧಿಸಿದರೂ ಅದು ವ್ಯರ್ಥ್ಯ ಎಂದರು.ಸಾಹಿತಿ ಅಶೋಕ ಹಂಚಲಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಪ್ರಮೋದ ಕುಲಕರ್ಣಿ, ನಿವೃತ್ತ ಶಿಕ್ಷಕರಾದ ಬಿ.ಎನ್. ವಂದಾಲ, ಎಂ.ವಿ. ಪಾಟೀಲ, ಎಚ್.ಸಿ. ಭಜಂತ್ರಿ,…
ಬಸವನಬಾಗೇವಾಡಿ: ಪಟ್ಟಣದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಡಿಯಲ್ಲಿನ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಆಹಾರ ಮೇಳದಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದ ಬಗೆ ಬಗೆಯ ತಿನಿಸುಗಳ ಮಾರಾಟದಲ್ಲಿ ಉತ್ಸಾಹದಿಂದ ತಲ್ಲೀನರಾಗಿರುವುದು ಕಂಡು ಬಂದಿತು.ಮಕ್ಕಳ ಪಾಲಕರು ತಮ್ಮ ನೆರೆಹೊರೆಯವರೊಂದಿಗೆ ತಂಡೋಪತಂಡವಾಗಿ ಆಗಮಿಸಿ ವಿವಿಧ ತಿಂಡಿಗಳನ್ನು ಖರೀದಿಸಿ ಸವಿಯುವ ಮೂಲಕ ಮಕ್ಕಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.ಸೋಮವಾರ ನಡೆದ ಆಹಾರಮೇಳ ಮನಸೂರೆಗೊಂಡಿತು.ವಿಶಾಲವಾದ ಶಾಲಾ ಆವರಣದಲ್ಲಿ ತಾತ್ಕಾಲಿಕ 20 ಮಳಿಗೆಗಳಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿದ 50ಕ್ಕೂ ಹೆಚ್ಚು ತಿನಿಸುಗಳನ್ನು ಮಾರಾಟ ಮಾಡಿದರು. ಪಾಪಕರ್ನ್, ಚಾನ್ ಮಸಾಲ, ಚೌಚೌ ಪುರಿ, ಫಾಲುದಾ, ರಾಗಿ ಅಂಬ್ಲಿ, ಮಸಾಲಾ ಸ್ಪೈಸಿ ಚಾಟ್, ಬೇವು, ಸುರಕುಂಬ, ಫ್ರೂಟ್ ಸಲಾಡ್, ಪಾನಿಪುರಿ, ಚನ್ನಾ ಮಸಾಲಾ, ಶ್ಯಾಂಡವಿಚ್ , ಮಸಾಲಾ ಪಾಪಡ್ ಸೇರಿದಂತೆ ವಿವಿಧ ತಿನಿಸು, ಪಾನೀಯಗಳನ್ನು ಸವಿದ ಜನರು ಮಕ್ಕಳ ಉತ್ಸಾಹ, ಅವರು ತಯಾರಿಸಿದ ತಿನಿಸುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಆಹಾರ ಮೇಳಕ್ಕೆ ಚಾಲನೆ ನೀಡಿದ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಈರಣ್ಣ…
ವಿಜಯಪುರ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು (ಕೆ.ಎಸ್.ಡಿ.ಸಿ) ವತಿಯಿಂದ ವಿಶ್ವ ಕೌಶಲ್ಯ ಸ್ವರ್ಧೆಯನ್ನು ಆಯೋಜಿಸಲಾಗತ್ತಿದ್ದು, ಈ ಸ್ಪರ್ಧೆಯಲ್ಲಿ ೫೭ ವಿವಿಧ ಕೌಶಲ್ಯಗಳಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳಿಂದ ನೋಂದಣಿ ಪ್ರಕ್ರಿಯೆ ಆರಂಭಿಸಿದೆ.ಈ ಪ್ರಕ್ರಿಯೆಯಲ್ಲಿ ಆಭ್ಯರ್ಥಿಗಳ ಆಯ್ಕೆ ಜಿಲ್ಲೆ, ವಿಭಾಗ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಯುವುದು. ರಾಷ್ಟ್ರ ಮಟ್ಟದಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಕೇಂದ್ರ ಸರಕಾರ ವತಿಯಿಂದ ೨೦೨೪ ರಲ್ಲಿ ಪ್ರಾನ್ಸಿನ ಲಿಯೋನ್‌ನಲ್ಲಿ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ಜನವರಿ ೦೭ -೨೦೨೪ ರೊಳಗಾಗಿ www.skillindiadigital.gov.in ವೆಬ್‌ಸೈಟ್‌ನಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವಿಜಯಪುರ ಕಛೇರಿ ದೂರವಾಣಿ ಸಂಖ್ಯೆ: ೦೮೩೫೨-೨೯೭೦೧೯ ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲೆಮಾರಿ ಹಾಗೂ ಅರೆ ಅಲೆಮಾರಿ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ವಿಜಯಪುರ: ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಸೂಕ್ತ ಜಾಗೃತಿ ಹಾಗೂ ಅರಿವು ಮೂಡಿಸಿ ಸಮರ್ಪಕವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲೆಮಾರಿ-ಅರೆ ಅಲೆಮಾರಿ ಜನಾಂಗಕ್ಕೆ ದೊರೆಯುವ ಸೌಲಭ್ಯಗಳನ್ನು ದೊರಕಿಸಿ ಆರ್ಥಿಕ ಸ್ವಾವಲಂಬನೆಗೆ ಅಧಿಕಾರಿಗಳು ಕ್ರಮ ವಹಿಸಬೇಕು. ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೊತ್ಸಾಹ ಧನ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿವೇತನ ಹಾಗೂ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಾವಕಾಶ ಸೇರಿದಂತೆ ಜನಾಂಗದ ಆರ್ಥಿಕ ಸಬಲತೆಗೆ ಮೂಲಭೂತ ಸೌಕರ್ಯ ಹಾಗೂ ವಸತಿ ಸೌಲಭ್ಯವನ್ನು ಒದಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.೨೦೨೨-೨೦೨೩ನೆ ಸಾಲಿನಲ್ಲಿ ಅಲೆಮಾರಿ, ಅರೆಅಲೆಮಾರಿ…
ವಿಜಯಪುರ: ಜಿಲ್ಲೆಯ ಗಿಗ್ ಕಾರ್ಮಿಕರಿಗಾಗಿ ಅಪಘಾತ ಪರಿಹಾರ-ವೈದ್ಯಕೀಯ ಸೌಲಭ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ ನೊಂದಾಯಿಸಿಕೊಂಡು ಸೌಲಭ್ಯ ಪಡೆದುಕೊಳ್ಳುವಂತೆ ಗಿಗ್ ಕಾರ್ಮಿಕರಿಗೆ ವಿಜಯಪುರ ಉಪ ವಿಭಾಗದ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸಂಹಿತೆ ೨೦೨೦ ರಕಲಂ೨(೩೫) ರನ್ವಯ ಕೆಲಸವನ್ನು ನಿರ್ವಹಿಸುವ ಅಥವಾ ಕೆಲಸದ ವ್ಯವಸ್ಥೆಯಲ್ಲಿ ಭಾಗವಹಿಸುವ ಮತ್ತು ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ಸಂಬಂಧದ ಹೊರಗಿನ ಚಟುವಟಿಕೆಗಳಿಂದ ಆದಾಯ ಗಳಿಸುವ ವ್ಯಕ್ತಿ ಮತ್ತು ನಿರ್ದಿಷ್ಟ ದರವನ್ನು ಪಾವತಿಸುವ ಒಪ್ಪಂದದ (ಎಲ್ಲಾ ತುಂಡು ದರದ ಕೆಲಸವನ್ನು ಒಳಗೊಂಡಂತೆ) ನಿಯಮಗಳು ಮತ್ತು ಷರತ್ತುಗಳ ಆಧಾರದ ಮೇಲೆ ಕೆಲಸ ಮಾಡುವ ವ್ಯಕ್ತಿಗಳು ಉದಾಹರಣೆಗೆ ಸ್ವಿಗ್ಗಿ, ಜೋಮ್ಯಾಟೋ, ಅಮೇಜಾನ್, ಬಿಗ್ ಬಾಸ್ಕೆಟ್, ಫ್ಲಿಪ್ ಕಾರ್ಟ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ-ಅರೆಕಾಲಿಕ ಡೆಲಿವರಿ ನೌಕರರು ನೊಂದಣಿ ಮಾಡಿಕೊಳ್ಳುವುದರಿಂದ ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯ ಫಲಾನುಭವಿಗಳಾಗುತ್ತಾರೆ.ಈ ಫಲಾನುಭವಿಗಳಿಗೆ ಅಪಘಾತ ಮರಣ ಹೊಂದಿದ್ದಲ್ಲಿ ವಿಮಾ ಪರಿಹಾರ ೨ಲಕ್ಷ ರೂ. ಹಾಗೂ ಜೀವ ವಿಮಾ ೨ಲಕ್ಷ ರೂ. ಸೇರಿ ಒಟ್ಟು ೪…
ವಿಜಯಪುರ: ದಿನಪತ್ರಿಕೆ ವಿತರಕ ಕಾರ್ಮಿಕರಿಗೆ ಜಾರಿ ಮಾಡಿರುವ ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೆ ತಂದಿದು, ಈ ಯೋಜನೆಯಡಿ ಸೌಲಭ್ಯ ಪಡೆಯಲಿಚ್ಚಿಸುವ ಪತ್ರಿಕಾ ವಿತರಕರು ಇ-ಶ್ರಮ ನೊಂದಣಿ ಮಾಡಿಕೊಳ್ಳುವಂತೆ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.ಈ ಯೋಜನೆಯಡಿ ಅರ್ಹರಾಗಲು ಪ್ರತ್ಯೇಕ ನೊಂದಣಿ ಅಗತ್ಯವಿರುವುದಿಲ್ಲ. ಇ-ಶ್ರಮನಲ್ಲಿ ನೊಂದಣಿಯಾದ ದಿನಪತ್ರಿಕೆ ವಿತರಕ ಕಾರ್ಮಿಕರಿಗೆ ಅನ್ವಯಿಸುತ್ತದೆ. ಈ ಯೋಜನೆ ಲಾಭ ಪಡೆಯಲು ಇ-ಶ್ರಮ ನೊಂದಣಿ ಕಡ್ಡಾಯವಾಗಿದ್ದು, ಇದುವರೆಗೂ ಇ-ಶ್ರಮನಲ್ಲಿ ನ್ಯೂಸ್ ಪೇಪರ್ ಬಾಯ್ ಎಂದು ನೊಂದಣಿ ಮಾಡದೇ ಇದ್ದರೆ ಕೂಡಲೇ ಇ-ಶ್ರಮ್ ಪೋರ್ಟಲ್‌ನಲ್ಲಿ ನೊಂದಣಿ ಮಾಡಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೇ ವಿಶೇಷ ಇ-ಶ್ರಮ್ ನೊಂದಣಿ ಕ್ಯಾಂಪ್‌ಗಳನ್ನು ಜಿಲ್ಲಾ ಕೇಂದ್ರ ಸ್ಥಾನದ ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ ಜ.೨ ರಿಂದ ಒಂದು ವಾರ ಮತ್ತು ಜ.೩ರಿಂದ ೧೨ರವರೆಗೆ ಇಂಡಿ, ಸಿಂದಗಿ, ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದು, ವಿಶೇಷ ನೊಂದಣಿ ಕ್ಯಾಂಪ್ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
