ಬಸವನ ಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಸೋಮವಾರ ಅಮರಶಿಲ್ಪಿ ಜಕಣಾಚಾರಿಯ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ನಿವೃತ್ತ ಉಪನ್ಯಾಸಕ ಕೆ.ಬಿ.ಕಡೆಮನಿ ಅವರು ಅಮರಶಿಲ್ಪಿ ಜಕಣಾಚಾರಿ ಕುರಿತು ಮಾತನಾಡಿ ವಿಶ್ವಕರ್ಮರ ಕೊಡುಗೆ ಕುರಿತು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಭವಾನಿ ಪಾಟೀಲ, ಖಜಾನೆ ಇಲಾಖೆಯ ಅಧಿಕಾರಿ ಮನೋಜ ಪಾಟೀಲ,ಬಿಇಓ ವಸಂತ ರಾಠೋಡ, ಸಿಡಿಪಿಓ ನಿರ್ಮಲಾ ಸುರಪೂರ, ಶಿರಸ್ತೇದಾರ ಬಿ.ಆರ್.ಪೋಲಚ, ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಮಂಜು ಹಳ್ಳೂರ, ಎ.ಟಿ.ಪಾಟೀಲ, ಕೆ.ವೈ. ಯಂಡ್ರಾಮಿ, ಇಬ್ರಾಹಿಂಪೂರ, ಎಸ್.ಎ.ತಳವಾರ, ಕಾಂಚನಾ ಸಂದಿಮನಿ, ವಿಶ್ವಕರ್ಮ ಸಮಾಜದ ಮುಖಂಡ ಮುತ್ತು ಪತ್ತಾರ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

