ವಿಜಯಪುರ: ಜಿಲ್ಲೆಯ ಗಿಗ್ ಕಾರ್ಮಿಕರಿಗಾಗಿ ಅಪಘಾತ ಪರಿಹಾರ-ವೈದ್ಯಕೀಯ ಸೌಲಭ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ ನೊಂದಾಯಿಸಿಕೊಂಡು ಸೌಲಭ್ಯ ಪಡೆದುಕೊಳ್ಳುವಂತೆ ಗಿಗ್ ಕಾರ್ಮಿಕರಿಗೆ ವಿಜಯಪುರ ಉಪ ವಿಭಾಗದ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸಂಹಿತೆ ೨೦೨೦ ರಕಲಂ೨(೩೫) ರನ್ವಯ ಕೆಲಸವನ್ನು ನಿರ್ವಹಿಸುವ ಅಥವಾ ಕೆಲಸದ ವ್ಯವಸ್ಥೆಯಲ್ಲಿ ಭಾಗವಹಿಸುವ ಮತ್ತು ಸಾಂಪ್ರದಾಯಿಕ ಉದ್ಯೋಗದಾತ-ಉದ್ಯೋಗಿ ಸಂಬಂಧದ ಹೊರಗಿನ ಚಟುವಟಿಕೆಗಳಿಂದ ಆದಾಯ ಗಳಿಸುವ ವ್ಯಕ್ತಿ ಮತ್ತು ನಿರ್ದಿಷ್ಟ ದರವನ್ನು ಪಾವತಿಸುವ ಒಪ್ಪಂದದ (ಎಲ್ಲಾ ತುಂಡು ದರದ ಕೆಲಸವನ್ನು ಒಳಗೊಂಡಂತೆ) ನಿಯಮಗಳು ಮತ್ತು ಷರತ್ತುಗಳ ಆಧಾರದ ಮೇಲೆ ಕೆಲಸ ಮಾಡುವ ವ್ಯಕ್ತಿಗಳು ಉದಾಹರಣೆಗೆ ಸ್ವಿಗ್ಗಿ, ಜೋಮ್ಯಾಟೋ, ಅಮೇಜಾನ್, ಬಿಗ್ ಬಾಸ್ಕೆಟ್, ಫ್ಲಿಪ್ ಕಾರ್ಟ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ-ಅರೆಕಾಲಿಕ ಡೆಲಿವರಿ ನೌಕರರು ನೊಂದಣಿ ಮಾಡಿಕೊಳ್ಳುವುದರಿಂದ ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯ ಫಲಾನುಭವಿಗಳಾಗುತ್ತಾರೆ.
ಈ ಫಲಾನುಭವಿಗಳಿಗೆ ಅಪಘಾತ ಮರಣ ಹೊಂದಿದ್ದಲ್ಲಿ ವಿಮಾ ಪರಿಹಾರ ೨ಲಕ್ಷ ರೂ. ಹಾಗೂ ಜೀವ ವಿಮಾ ೨ಲಕ್ಷ ರೂ. ಸೇರಿ ಒಟ್ಟು ೪ ಲಕ್ಷ ರೂಗಳು ಮತ್ತು ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ೨ಲಕ್ಷ ರೂ.ಗಳವರೆಗೆ ಮತ್ತು ಆಸ್ಪತ್ರೆ ವೆಚ್ಚ ೧ ಲಕ್ಷ ರೂ.ವರಗೆ ದೊರೆಯುತ್ತದೆ.
ಜಿಲ್ಲೆಯ ಗಿಗ್ ಕಾರ್ಮಿಕರು ಈ ಯೋಜನೆಯಡಿ ನೊಂದಾಯಿಸಲು ನೇರವಾಗಿ ಸೇವಾ ಸಿಂಧು ತಂತ್ರಾಂಶ-ಪೋರ್ಟಲ್ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ ಅಲ್ಲದೇ ನೊಂದಣಿಗೆ ಸಹಾಯ ಬೇಕಾದಲ್ಲಿ ಕಾರ್ಮಿಕ ಇಲಾಖೆಯ ಕಛೆರಿಯನ್ನು ಸಂಪರ್ಕಿಸಿ ನೊಂದಣಿ ಮಾಡಿಕೊಂಡು ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿ, ವಿಜಯಪುರ ಉಪ ವಿಭಾಗ, ಇಂಡಿ, ಸಿಂದಗಿ, ಬಸವನಬಾಗೇವಾಡಿ, ಮುದ್ದೇಬಿಹಾಳ ಹಾಗೂ ವಿಜಯಪುರ ೧&೨ ವೃತ್ತ ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
