ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ ೨ರಂದು ವಿಜಯಪುರ ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಜ.೨ ರಂದು ಬೆಳಗ್ಗೆ ೧೦ ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೊರಟು ಬೆಳಗ್ಗೆ ೧೦.೫೦ಕ್ಕೆ ಕೊಪ್ಪಳದ ಗಿಣಿಗೆರ ಏರ್‌ಸ್ಟ್ರಿಪ್‌ಗೆ ಆಗಮಿಸಿ, ಗಿಣಿಗೆರ ಏರ್‌ಸ್ಟ್ರಿಪ್‌ನಿಂದ ಹೊರಟು ಬೆಳಗ್ಗೆ ೧೧.೪೦ ಕ್ಕೆ ಬಿಎಲ್‌ಡಿಈ ವಿದ್ಯಾಸಂಸ್ಥೆಯ ಹೆಲಿಪ್ಯಾಡ್‌ಗೆ ಆಗಮಿಸಿ ಜ್ಞಾನಯೋಗಾಶ್ರಮದಲ್ಲಿ ನಡೆಯುವ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಗುರುನಮನ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಂತರ ಜಿಲ್ಲೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ ೦೨.೩೦ಕ್ಕೆ ವಿಜಯಪುರದಿಂದ ರಸ್ತೆ ಮೂಲಕ ಹೊರಟು ವಿಜಯಪುರ ತಾಲೂಕಿನ ದ್ಯಾಬೇರಿ (ದೇವಿಪೂರ) ಶ್ರೀ ವಾಗ್ದೇವಿ ಸೇವಾ ಸಮಿತಿ ದ್ಯಾಬೇರಿ ಇವರ ವತಿಯಿಂದ ಆಯೋಜಿಸಿರುವ ಶ್ರೀ ವಾಗ್ದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ೦೩.೩೦ಕ್ಕೆ ದ್ಯಾಬೇರಿಯಿಂದ ಹೊರಟು ೦೪.೦೦ ಗಂಟೆಗೆ ಬಿಎಲ್‌ಡಿಈ ವಿದ್ಯಾಸಂಸ್ಥೆಯ ಹೆಲಿಪ್ಯಾಡ್‌ನಿಂದ ಬೆಂಗಳೂರಿಗೆ ಮರು ಪ್ರಯಾಣಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
