ಬಸವನಬಾಗೇವಾಡಿ: ಪಟ್ಟಣದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಡಿಯಲ್ಲಿನ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಆಹಾರ ಮೇಳದಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದ ಬಗೆ ಬಗೆಯ ತಿನಿಸುಗಳ ಮಾರಾಟದಲ್ಲಿ ಉತ್ಸಾಹದಿಂದ ತಲ್ಲೀನರಾಗಿರುವುದು ಕಂಡು ಬಂದಿತು.
ಮಕ್ಕಳ ಪಾಲಕರು ತಮ್ಮ ನೆರೆಹೊರೆಯವರೊಂದಿಗೆ ತಂಡೋಪತಂಡವಾಗಿ ಆಗಮಿಸಿ ವಿವಿಧ ತಿಂಡಿಗಳನ್ನು ಖರೀದಿಸಿ ಸವಿಯುವ ಮೂಲಕ ಮಕ್ಕಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.
ಸೋಮವಾರ ನಡೆದ ಆಹಾರಮೇಳ ಮನಸೂರೆಗೊಂಡಿತು.
ವಿಶಾಲವಾದ ಶಾಲಾ ಆವರಣದಲ್ಲಿ ತಾತ್ಕಾಲಿಕ 20 ಮಳಿಗೆಗಳಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿದ 50ಕ್ಕೂ ಹೆಚ್ಚು ತಿನಿಸುಗಳನ್ನು ಮಾರಾಟ ಮಾಡಿದರು. ಪಾಪಕರ್ನ್, ಚಾನ್ ಮಸಾಲ, ಚೌಚೌ ಪುರಿ, ಫಾಲುದಾ, ರಾಗಿ ಅಂಬ್ಲಿ, ಮಸಾಲಾ ಸ್ಪೈಸಿ ಚಾಟ್, ಬೇವು, ಸುರಕುಂಬ, ಫ್ರೂಟ್ ಸಲಾಡ್, ಪಾನಿಪುರಿ, ಚನ್ನಾ ಮಸಾಲಾ, ಶ್ಯಾಂಡವಿಚ್ , ಮಸಾಲಾ ಪಾಪಡ್ ಸೇರಿದಂತೆ ವಿವಿಧ ತಿನಿಸು, ಪಾನೀಯಗಳನ್ನು ಸವಿದ ಜನರು ಮಕ್ಕಳ ಉತ್ಸಾಹ, ಅವರು ತಯಾರಿಸಿದ ತಿನಿಸುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಹಾರ ಮೇಳಕ್ಕೆ ಚಾಲನೆ ನೀಡಿದ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಶಾಲೆಯ ಮೇಲು ಉಸ್ತುವಾರ ಸಮಿತಿ ಅಧ್ಯಕ್ಷ ಅನಿಲ ಅಗರವಾಲ ಮಾತನಾಡಿ, ಮಕ್ಕಳಲ್ಲಿ ಆಹಾರದ ಪ್ರಾಮುಖ್ಯತೆ, ವ್ಯವಹಾರಿಕ ಜ್ಞಾನ, ಸಂಘಟನಾ ಶಕ್ತಿ, ಜವಾಬ್ದಾರಿ, ಕೂಡಿ ಬಾಳುವಿಕೆ, ಸೃಜನಾತ್ಮಾಕತೆ, ಆರ್ಥಿಕ ಜ್ಞಾನ, ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಇಂತಹ ಆಹಾರ ಮೇಳಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಶಾಲಾ ಮೇಲು ಉಸ್ತುವಾರಿ ಸಮಿತಿ ಸದಸ್ಯರಾದ ಎಂ.ಜಿ.ಆದಿಗೊಂಡ, ಸುರೇಶಗೌಡ ಪಾಟೀಲ, ಸದಾನಂದ ಯಳಮೇಲಿ, ಪಿಂಟುಗೌಡ ಪಾಟೀಲ, ಮುತ್ತು ಪೂಜಾರಿ, ಶಬ್ಬೀರ ನದಾಫ್, ಪ್ರಭಾವತಿ ರಾಯಗೊಂಡ, ಲಕ್ಷ್ಮೀ ಮಾಲಗಾರ, ಪ್ರತಿಭಾ ಮಸಬಿನಾಳ, ಲಕ್ಷ್ಮೀ ಹಿಟ್ನಳ್ಳಿ, ಶೈಲಾ ಮಠ, ಮುಖಂಡರಾದ ಶೇಖರಗೌಡ ಪಾಟೀಲ, ಸಂಕನಗೌಡ ಪಾಟೀಲ, ಸುಭಾಸ ಚಿಕ್ಕೊಂಡ, ಪ್ರೇರಣಾ ಅಗರವಾಲ, ಪ್ರಾಚಾರ್ಯ ರೋಹಿಣಿ ರೋಣದ, ಎಸ್.ಎಂ,ಬಿಸ್ಟಗೊಂಡ, ಮಹೇಶ ಹುಮನಾಬಾದ ಇತರರು ಇದ್ದರು.
ಆಹಾರ ಮೇಳದಲ್ಲಿ ವಿಜೇತ ವಿದ್ಯಾರ್ಥಿಗಳ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

