ವಿಜಯಪುರ: ದಿನಪತ್ರಿಕೆ ವಿತರಕ ಕಾರ್ಮಿಕರಿಗೆ ಜಾರಿ ಮಾಡಿರುವ ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೆ ತಂದಿದು, ಈ ಯೋಜನೆಯಡಿ ಸೌಲಭ್ಯ ಪಡೆಯಲಿಚ್ಚಿಸುವ ಪತ್ರಿಕಾ ವಿತರಕರು ಇ-ಶ್ರಮ ನೊಂದಣಿ ಮಾಡಿಕೊಳ್ಳುವಂತೆ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯಡಿ ಅರ್ಹರಾಗಲು ಪ್ರತ್ಯೇಕ ನೊಂದಣಿ ಅಗತ್ಯವಿರುವುದಿಲ್ಲ. ಇ-ಶ್ರಮನಲ್ಲಿ ನೊಂದಣಿಯಾದ ದಿನಪತ್ರಿಕೆ ವಿತರಕ ಕಾರ್ಮಿಕರಿಗೆ ಅನ್ವಯಿಸುತ್ತದೆ. ಈ ಯೋಜನೆ ಲಾಭ ಪಡೆಯಲು ಇ-ಶ್ರಮ ನೊಂದಣಿ ಕಡ್ಡಾಯವಾಗಿದ್ದು, ಇದುವರೆಗೂ ಇ-ಶ್ರಮನಲ್ಲಿ ನ್ಯೂಸ್ ಪೇಪರ್ ಬಾಯ್ ಎಂದು ನೊಂದಣಿ ಮಾಡದೇ ಇದ್ದರೆ ಕೂಡಲೇ ಇ-ಶ್ರಮ್ ಪೋರ್ಟಲ್‌ನಲ್ಲಿ ನೊಂದಣಿ ಮಾಡಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೇ ವಿಶೇಷ ಇ-ಶ್ರಮ್ ನೊಂದಣಿ ಕ್ಯಾಂಪ್‌ಗಳನ್ನು ಜಿಲ್ಲಾ ಕೇಂದ್ರ ಸ್ಥಾನದ ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ ಜ.೨ ರಿಂದ ಒಂದು ವಾರ ಮತ್ತು ಜ.೩ರಿಂದ ೧೨ರವರೆಗೆ ಇಂಡಿ, ಸಿಂದಗಿ, ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದು, ವಿಶೇಷ ನೊಂದಣಿ ಕ್ಯಾಂಪ್ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಪತ್ರಿಕೆ ವಿತರಕರಿಗೆ ಅಪಘಾತ ಪರಿಹಾರ-ವೈದ್ಯಕೀಯ ಸೌಲಭ್ಯಇ-ಶ್ರಮ ನೊಂದಣಿಗೆ ಕರೆ
Related Posts
Add A Comment
